Wednesday, March 12, 2025
Google search engine
HomeBelagavi Newsಕರ್ನಾಟಕದ ಬಸ್‌ಗಳಿಗೆ ಭಗವಾ ಧ್ವಜ ಕಟ್ಟಿ,‌ ಕರಿ ಮಸಿ ಬಳಿದ ಪುಂಡರು.!
spot_img
spot_img
spot_img
spot_img
spot_img

ಕರ್ನಾಟಕದ ಬಸ್‌ಗಳಿಗೆ ಭಗವಾ ಧ್ವಜ ಕಟ್ಟಿ,‌ ಕರಿ ಮಸಿ ಬಳಿದ ಪುಂಡರು.!

ಬೆಳಗಾವಿ : ಕರ್ನಾಟಕ ರಾಜ್ಯ ಸಾರಿಗೆ ಬಸ್ (KSRTC) ಮೇಲೆ ಭಗವಾ ಧ್ವಜವನ್ನು ಕಟ್ಟಿ ಬಸ್ಸಿಗೆ ಕರಿ‌ ಮಸಿ ಬಳಿದ ಮಹಾ ಪುಂಡರು‌ ಕರ್ನಾಟಕ ಸರಕಾರ (Karnataka Govrtment) ಮತ್ತು ಕರವೇ (Karave) ವಿರುದ್ದ ಘೋಷಣೆ ಹಾಕಿರುವ ಘಟನೆ ಕೊಲ್ಲಾಪುರ (Kollapur) ದಲ್ಲಿ ನಡೆದಿದೆ.

ಶುಕ್ರವಾರ ಬೆಳಗಾವಿಯಿಂದ ಸುಳೆಭಾವಿಗೆ (Belagavi to Sulabhavi) ಹೊರಟಿದ್ದ ನಗರ ಸಂಚಾರಿ ಬಸ್ ದಲ್ಲಿ ಮರಾಠಿ (Matrathi) ಮಾತನಾಡದ ಬಸ್ ಕಂಡಕ್ಟರ್ (Bus Conductor) ಮೇಲೆ ಕೆಲ ಪುಂಡರು ಹಲ್ಲೆ ನಡೆಸಿದ್ದರು.

ಇದರ ವಿರುದ್ದವಾಗಿ ನೆರೆಯ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಕರ್ನಾಟಕ ಬಸ್ ತಡೆದು ಪುಂಡಾಟ ನಡೆಸಲಾಗಿದೆ. ಮಹಾರಾಷ್ಟ್ರದ ಕೊಲ್ಹಾಪುರ ನಗರದಲ್ಲಿ ಶಿವಸೇನೆ (ಠಾಕ್ರೆ ಬಣ) ಪ್ರತಿಭಟನೆ ನಡೆಸಿದೆ.

ರಾಜ್ಯ ಸರಕಾರ ಮತ್ತು ಕರವೇ ಕಾರ್ಯಕರ್ತ ವಿರೋಧ ಘೋಷಣೆ ಹಾಕಿ ಕೂಗಿ ಪ್ರತಿಭಟನೆ (Protest) ನಡೆಸಿದ್ದಾರೆ. ಕೊಲ್ಹಾಪುರದಿಂದ ಕರ್ನಾಟಕಕ್ಕೆ ಆಗಮಿಸುವ ಬಸ್‌ಗಳ ಸಂಚಾರ ಸ್ಥಗಿತ (Bus traffic suspended) ಮಾಡಲಾಗಿದೆ.

ಮಹಾರಾಷ್ಟ್ರ ಬಸ್ ತಡೆದು ಚಾಲಕನ ಮುಖಕ್ಕೆ ಮಸಿ : 10 ಮಂದಿ ಕಾರ್ಯಕರ್ತರ ಬಂಧನ.!

ಮರಾಠಿ ಮಾತನಾಡಲು ಬರುವುದಿಲ್ಲ ಎಂದು ಹೇಳಿದ್ದಕ್ಕೆ ಬಸ್‌ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ ಘಟನೆ ಖಂಡಿಸಿ ನವ ನಿರ್ಮಾಣ ಸೇನೆ (Nava nirman Sene) ಕಾರ್ಯಕರ್ತರು ಶುಕ್ರವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ – 48ರ ಗುಯಿಲಾಳ (ಚಿತ್ರದುರ್ಗ) ಟೋಲ್‌ನಲ್ಲಿ (At Guilala (Chitradurga) toll) ಮಹಾರಾಷ್ಟ್ರ ಬಸ್ ತಡೆದು ಚಾಲಕನಿಗೆ ಮಸಿ ಬಳಿದಿದ್ದಾರೆ. ಘಟನೆ ಸಂಬಂಧ ಐಮಂಗಲ ಠಾಣೆ (Aimangala Police Station) ಪೊಲೀಸರು ಶನಿವಾರ 10 ಮಂದಿ ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ಮರಾಠಿಗರು ಪುಂಡಾಟ ನಡೆಸಿದ್ದಾರೆ ಎಂದು ಆರೋಪಿಸಿ ನವನಿರ್ಮಾಣ ಸೇನೆ ಸದಸ್ಯರು ಹಿರಿಯೂರು (Hirayuru) ತಾಲ್ಲೂಕು ಗುಯಿಲಾಳ ಟೋಲ್ ಬಳಿ ಪ್ರತಿಭಟನೆ ನಡೆಸಿದರು. ಮಹಾರಾಷ್ಟ್ರ ಸಾರಿಗೆ ಸಂಸ್ಥೆಗೆ (Maharashtra Transport Corporation) ಸೇರಿದ ಬಸ್‌ ತಡೆದ ಕಾರ್ಯಕರ್ತರು ಇಡಿ ಬಸ್‌ಗೆ ಕಪ್ಪು ಬಣ್ಣದ ಸ್ಪೇ ಸಿಂಪಡಿಸಿದರು. ‘ಜೈ ಕರ್ನಾಟಕ, ಜೈ ಕನ್ನಡ, ಬೆಳಗಾವಿ ನಮ್ಮದು (‘Jai Karnataka, Jai Kannada, Belagavi is ours’) ಮರಾಠಿಗರು ಪುಂಡಾಟಿಕೆ ನಿಲ್ಲಿಸಬೇಕು’ ಎಂದು ಬಸ್ ಮೇಲೆ ಬರೆದರು. ಬಸ್ ಚಾಲಕ ಹರಿ ಜಾದವ್ ಮುಖಕ್ಕೂ ಮಸಿ ಬಳಿದರು.

ಬಸ್ ಚಾಲಕ ಐಮಂಗಲ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ನವ ನಿರ್ಮಾಣ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಸೇರಿ 10 ಮಂದಿಯನ್ನು ಬಂಧಿಸಿದ್ದಾರೆ (Arrested).

RELATED ARTICLES
Most Popular

Recent Comments

- Advertisment -
Google search engine
error: Content is protected !!