ಡೆಸ್ಕ್ : ನಾಯಿಗಳ ಕುರಿತಾದ ಮುದ್ದು ಮುದ್ದಾದ ವಿಡಿಯೋಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ (social media) ವೈರಲ್ ಆಗುತ್ತಿರುತ್ತವೆ.
ಆದರೆ ಇಲ್ಲೊಂದು ನಾಯಿ (dog video) ಸುಮ್ಮನೆ ತನ್ನ ಪಾಡಿಗೆ ಮಹಡಿಯ ಮೇಲೇರಿ ತನ್ನ ಪ್ರಾಣಕ್ಕೆ ಕುತ್ತು ತಂದುಕೊಂಡಿದೆ. ಬ್ರೆಜಿಲ್ ನದ್ದು ಎನ್ನಲಾದ ನಾಯಿಯ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.
ಇದನ್ನು ಓದಿ : ಕರ್ನಾಟಕದ ಬಸ್‌ಗಳಿಗೆ ಭಗವಾ ಧ್ವಜ ಕಟ್ಟಿ, ಕರಿ ಮಸಿ ಬಳಿದ ಪುಂಡರು.!
ಕಟ್ಟಡದ ಮೇಲೆ ನಾಯಿ ನೇತಾಡುತ್ತಿರುವುದನ್ನು (Hanging) ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಬಹುದು. ಆ ಸಂದರ್ಭ ನಾಯಿಗೆ ತುಂಬಾ ಭಯವಾಗಿ ಅದು ಕಿರುಚುತ್ತಿದೆ.
ಆದರೆ ಆ ವೇಳೆ ಒಬ್ಬ ಮಹಿಳೆ ನಾಯಿ ನೇತಾಡುತ್ತಿರುವ ಕಿಟಕಿಯ ಸ್ವಲ್ಪ ಕೆಳಗೆ ಕಿಟಕಿಯ ಬಳಿ ನಿಂತು ಅದರ ಜೀವ ಉಳಿಸಲು ರಟ್ಟಿನ ಪೆಟ್ಟಿಗೆಯನ್ನು (A cardboard box) ಹಿಡಿದಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಇದನ್ನು ಓದಿ : ಭೀಕರ ರಸ್ತೆ ಅ*ಘಾತ : ಕುಂಭಮೇಳಕ್ಕೆ ಹೋಗಿದ್ದ ಕರ್ನಾಟಕ ಮೂಲದ 6 ಜನರ ಸಾ*.!
ನಾಯಿಯು ತಕ್ಷಣ ಆ ಮಹಿಳೆ ಹಿಡಿದುಕೊಂಡಿದ್ದ ರಟ್ಟಿನೊಳಗೆ ಬಿದ್ದಿದೆ. ಬಳಿಕ ಆ ಮಹಿಳೆ ಆ ನಾಯಿಯನ್ನು ತನ್ನ ಮನೆಯೊಳಗೆ ಕರೆದೊಯ್ದಿದ್ದಾಳೆ.
ಇಲ್ಲಿಯವರೆಗೆ ಈ ವಿಡಿಯೋವನ್ನು 1 ಲಕ್ಷ 16 ಸಾವಿರಕ್ಕೂ ಅಧಿಕ ಜನರು ವೀಕ್ಷಿಸಿದ್ದು, ಹಲವು ಕಮೆಂಟ್ ಗಳು ಬಂದಿವೆ. ನಿಮ್ಮ ಪ್ರಯತ್ನಕ್ಕೆ ಶಹಬ್ಬಾಸ್ ಹೇಳಲೇಬೇಕು, ಆದರೆ ಆ ನಾಯಿ ಅಲ್ಲಿಗೆ ಹೇಗೆ ತಲುಪಿತು? ಎಂಬುದು ಗೊತ್ತಾಗಲಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.
Woman in Brazil catches falling dog with a cardboard box 😳 pic.twitter.com/Bdow4tZlSu
— Crazy Clips (@crazyclipsonly) February 21, 2025
Recent Comments