ರಾಯಚೂರು : ಮಂಗಳವಾರ ತುಂಬಳಮಂ ಬಳಿ ಸಾರಿಗೆ ಬಸ್ ಮತ್ತು ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ
ಮಂಗಳವಾರ (ಮಾ.11) ಗಂಗಾವತಿಯಿಂದ ಆಂಧ್ರದ ಕರ್ನೂಲ್ ಜಿಲ್ಲೆಯ ಆದೋನಿಗೆ ತೆರಳುವಾಗ ಎದುರಿಗೆ ಅದೋನಿಯಿಂದ ಬಂದ ಎರಡು ಬೈಕ್‌ಗಳು ಪೆದ್ದ ತುಂಬಳಮಂ ಬಳಿ ಡಿಕ್ಕಿ ಹೊಡೆದ ಪರಿಣಾಮವಾಗಿ ಈ ದುರ್ಘಟನೆ ಸಂಭವಿಸಿದೆ.
ಇದನ್ನು ಓದಿ : 17 ವರ್ಷದ PU ವಿದ್ಯಾರ್ಥಿ ಜೊತೆ 36 ವರ್ಷದ ವಿವಾಹಿತೆ ಪರಾರಿ.!
ಈ ಅಪಘಾತದಲ್ಲಿ ಎರಡು ಬೈಕ್ನಲ್ಲಿದ್ದ ಒಟ್ಟು 5 ಜನ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ ಎಂದು ವರದಿಯಾಗಿದೆ.
ಬಸ್ನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಈ ಅಪಘಾತದಲ್ಲಿ ರಾಯಚೂರು ಮೂಲದ ಇಬ್ಬರು ಹಾಗು ಕರ್ನುಲ್ ಜಿಲ್ಲೆಯ ಆದೋನಿ ಮೂಲದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ, ಮತ್ತೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾನೆ.
ಇದನ್ನು ಓದಿ : ಆಜಾನ್ ಕೂಗಲು ಜೋರಾದ ಧ್ವನಿವರ್ಧಕ ಬಳಿಕೆ : ಇಮಾಮ್ ವಿರುದ್ಧ FIR ದಾಖಲು.!
ಅಪಘಾತದ ಕುರಿತು ಆಂಧ್ರಪ್ರದೇಶದ ಆದೋನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Recent Comments