ಅಮ್ರೋಹ (ಉತ್ತರ ಪ್ರದೇಶ) : ಯುವಕನೊಬ್ಬ ಯುವತಿಯನ್ನು ನಡುರಸ್ತೆಯಲ್ಲೇ ಸ್ಕಾರ್ಫ್ ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಲು ಯತ್ನಿಸಿರುವ ಆಘಾತಕಾರಿ ಘಟನೆ ಅಮ್ರೋಹಾ ಜಿಲ್ಲೆಯ ಗಜ್ರೌಲಾ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಯುವತಿಯ ಕಿರುಚಾಟ ಕೇಳಿ ದಾರಿಹೋಕರು ಯುವಕನ ಹಿಡಿತದಿಂದ ಆಕೆಯನ್ನು ಬಿಡಿಸಿದ್ದಾರೆ. ನಂತರ, ಗುಂಪನ್ನು ನೋಡಿದ ಯುವಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೀಡಿಯೋದಲ್ಲಿ ಕಾಣುತ್ತಿರುವಂತೆ ಯುವಕನೊಬ್ಬ ಯುವತಿಯನ್ನು ನಡುರಸ್ತೆಯಲ್ಲಿ ಸ್ಕಾರ್ಫ್ ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಲು ಯತ್ನಿಸುತ್ತಿದ್ದು, ಆತನ ಹಿಡಿತದಿಂದ ಬಿಡಿಸಿಕೊಳ್ಳಲು ಯುವತಿ ಹರಸಾಹಸ ಪಡುತ್ತಿದ್ದಾರೆ.
read it : Astrology : ಜನವರಿ 06ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!
ಘಟನೆ ಕುರಿತು ಯುವತಿಯ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಪತ್ತೆಗೆ ಶೋಧ ನಡೆಯುತ್ತಿದೆ. ಆರೋಪಿ ಹಾಗೂ ಯುವತಿ ಒಂದೇ ಗ್ರಾಮದವರು. ಯುವತಿ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಜಿಎನ್‌ಎಂ ವ್ಯಾಸಂಗ ಮಾಡುತ್ತಿದ್ದಾಳೆ ಎಂದು ವರದಿಯಾಗಿದೆ.
ಗ್ರಾಮಸ್ಥರ ಪ್ರಕಾರ, ಯುವಕ ಕಳೆದ ನಾಲ್ಕು ವರ್ಷಗಳಿಂದ ಯುವತಿಯನ್ನು ಪ್ರೀತಿಸುತ್ತಿದ್ದ. ಇದೇ ವೇಳೆ ಯುವತಿ ಇತರ ಯುವಕರೊಂದಿಗೆ ಹಲವು ಬಾರಿ ಕಾಣಿಸಿಕೊಂಡಿದ್ದಾಳೆ.
ಇದರಿಂದ ಕುಪಿತಗೊಂಡ ಯುವತಿ ಶನಿವಾರ ಸಂಜೆ ತನ್ನ ಗ್ರಾಮದಿಂದ ಯಾವುದೋ ಕೆಲಸದ ನಿಮಿತ್ತ ಗಜರೌಲಾ-ಸೇಲಂಪುರ ರಸ್ತೆಯಲ್ಲಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದಳು. ಈ ವೇಳೆ ಯುವಕ ಯುವತಿಯ ಸ್ಕೂಟರ್ ನಿಲ್ಲಿಸಿ ಮೊದಲು ಮಾತನಾಡಿದ್ದಾನೆ. ನಂತರ ಆಕೆಯ ಸ್ಕಾರ್ಫ್ ನಿಂದ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾನೆ.
Read it : ಬೆಳಗಾವಿ : ಗಂಡನಿಗೆ ಕೈಕೊಟ್ಟು ಪತ್ನಿ ಪರಾರಿ ; ದೂರು ನೀಡಿದ ಪತಿ.!
“ಬಾಲಕಿಯ ಕುಟುಂಬದ ಸದಸ್ಯರ ದೂರಿನ ಆಧಾರದ ಮೇಲೆ ಆರೋಪಿ ರಾಹುಲ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿದಿದ್ದು, ಆರೋಪಿಯನ್ನು ಶೀಘ್ರ ಬಂಧಿಸಲಾಗುವುದು” ಎಂದು ಇನ್ಸ್ ಪೆಕ್ಟರ್ ಸನೋಜ್ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.
उत्तर प्रदेश : जिला अमरोहा में प्रेमिका को सड़क पर गिराकर गला घोंटकर हत्या की कोशिश, पब्लिक ने बचाया !!
सिरफिरे बॉयफ्रेंड राहुल पर FIR दर्ज, तलाश जारी। pic.twitter.com/7xaJtAikX5
— Gagandeep Singh (@GagandeepNews) January 5, 2025
Recent Comments