Wednesday, March 12, 2025
Google search engine
HomeViral Videoಮಾರ್ಕೆಟ್‌ನಲ್ಲಿ ಅನುಚಿತ ವರ್ತನೆ ತೋರಿದ ವ್ಯಕ್ತಿಗೆ ಮಹಿಳೆ ಮಾಡಿದ್ದೇನು ಗೊತ್ತೇ.? ಈ ವಿಡಿಯೋ ನೋಡಿ.!
spot_img
spot_img
spot_img
spot_img
spot_img

ಮಾರ್ಕೆಟ್‌ನಲ್ಲಿ ಅನುಚಿತ ವರ್ತನೆ ತೋರಿದ ವ್ಯಕ್ತಿಗೆ ಮಹಿಳೆ ಮಾಡಿದ್ದೇನು ಗೊತ್ತೇ.? ಈ ವಿಡಿಯೋ ನೋಡಿ.!

ಕಾನ್ಪುರ್ : ಮಹಿಳೆಯೋರ್ವಳು ತನಗೆ ಕಿರುಕುಳ ನೀಡಿದ ವ್ಯಕ್ತಿಗೆ ಮಾರ್ಕೆಟ್‌ನಲ್ಲಿಯೇ ಸರಿಯಾಗಿ ಬೀಗಿದು ಬುದ್ದಿ ಕಲಿಸಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದೈಹಿಕ ಕಿರುಕಳ ಅಥವಾ ಲೈಂಗಿಕ ದೌರ್ಜನ್ಯ ಅಥವಾ ಲೈಂಗಿಕ ಹಿಂಸೆ (Sexual Assault) ಎಂಬುದು ವ್ಯಕ್ತಿಯ ಮೇಲಿನ ಅತ್ಯಾಚಾರ, ಬಲಾತ್ಕಾರ ಅಥವಾ ಅವಮಾನಕಾರಿ ಲೈಂಗಿಕ ಕೃತ್ಯಗಳನ್ನು ಒಳಗೊಂಡಿರುತ್ತದೆ.

ಹೀಗೆ ಮಾಡುವುದು ಯಾವುದೇ ವ್ಯಕ್ತಿಯ ಹಕ್ಕುಗಳ ಉಲ್ಲಂಘನೆಯಾಗಿ, ಮನೋಭಾವ, ದೈಹಿಕ ಮತ್ತು ಮಾನಸಿಕ ಗಾಯಗಳನ್ನು ಉಂಟು ಮಾಡಬಹುದು.

ಇದನ್ನು ಓದಿ : School ಆವರಣದಲ್ಲಿ ಹೃದಯಾಘಾತದಿಂದ ಶಿಕ್ಷಕ ಸಾ*.!

ಲೈಂಗಿಕ ದೌರ್ಜನ್ಯವು ಮಾನವ ಹಕ್ಕು ಉಲ್ಲಂಘನೆಯಾಗಿ ಪರಿಗಣಿಸಲಾಗುತ್ತದೆ ಮತ್ತು ಇದು ಸಾಂವಿಧಾನಿಕ ಹಾಗೂ ಕಾನೂನಿನ ಪರಿಪಾಲನೆಗೆ ವಿರುದ್ಧವಾಗಿದೆ. ಯಾವುದೇ ವ್ಯಕ್ತಿಯ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಹಿಡಿಯಲು ಕಾನೂನಿನ ಪ್ರಕಾರ ಸೂಕ್ತ ಶಿಕ್ಷೆಗಳು ಮತ್ತು ಸಬಲೀಕರಣ ಕ್ರಮಗಳು ಕೈಗೊಳ್ಳಲಾಗಿದೆ.

ಇದೀಗ ವ್ಯಕ್ತಿಯೋರ್ವ ಕಾನ್ಪುರದ ಬೇಕನ್ ಗಂಜ್ ಮಾರುಕಟ್ಟೆಯಲ್ಲಿ ಮಹಿಳೆಯೊಬ್ಬಳಿಗೆ ಕಿರುಕುಳ ನೀಡಿದ್ದಾನೆ. ಹೀಗಾಗಿ ಕಿರುಕುಳಕ್ಕೇ ಒಳಗಾದ ಮಹಿಳೆ ತನಗೆ ಕಿರುಕುಳ ನೀಡಿದ ವ್ಯಕ್ತಿಗೆ ಸಾರ್ವಜನಿಕವಿಗಿಯೇ ಸರಿಯಾಗಿ ಥಳಿಸಿ ಬುದ್ಧಿ ಕಲಿಸಿರುವ ದೃಶ್ಯವೊಂದು ಬೆಳಕಿಗೆ ಬಂದಿದೆ.

ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿಸಲು ಪ್ರಯತ್ನಿಸಿದ ಆರೋಪಿತನನ್ನು ಅದ್ನಾನ್ ಎಂದು ಗುರುತಿಸಲಾಗಿದ್ದು, ಇತ ಬಜಾರಿಯಾ ಪೊಲೀಸ್ ಠಾಣೆ ಪ್ರದೇಶದ ನಿವಾಸಿ ಎಂದು ವರದಿಯಾಗಿದೆ.

ಇದನ್ನು ಓದಿ : Astrology : ಫೆಬ್ರುವರಿ 28ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಸದ್ಯ ವೈರಲ್ ಆಗಿರುವ ವಿಡಿಯೊದಲ್ಲಿ ಓರ್ವ ಬುರ್ಖಾ ಧರಿಸಿದ ಮಹಿಳೆ, ಅನುಚಿತವಾಗಿ ವರ್ತಿಸಿದ ವ್ಯಕ್ತಿಯ ಕಾಲರ್ ಹಿಡಿದು 14 ಬಾರಿ ಕಪಾಳಮೋಕ್ಷ ಮಾಡಿದ್ದಾಳೆ. ಸ್ಥಳದಲ್ಲಿದ್ದ ಸಾರ್ವಜನಿಕರು ಮಹಿಳೆಗೆ ಬೆಂಬಲಿಸಿದ್ದು, ಆರೋಪಿಯ ನಡವಳಿಕೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರೋಪಿ ಅದ್ನಾನ್ ಮಾರುಕಟ್ಟೆಯಲ್ಲಿ ಹೀಗೆ ಮಹಿಳೆಯರಿಗೆ ಮೇಲಿಂದ ಮೇಲೆ ಕಿರುಕುಳ ನೀಡುತ್ತಿದ್ದ ಎಂದು ಸ್ಥಳೀಯರು ಹೇಳಿದ್ದಾರೆ. ಆರೋಪಿಯನ್ನು ಈಗ ಕಾನ್ಪುರ ಪೊಲೀಸರು ವಶಕ್ಕೆ ತೆಗೆದುಕೊಂಡರು.

ಈ ಘಟನೆ ಇದೇ ಫೆಬ್ರವರಿ 25 ರಂದು ನಡೆದಿರುವ ಬಗ್ಗೆ ಪೊಲೀಸರು ದೃಢಪಡಿಸಿದ್ದಾರೆ.

RELATED ARTICLES
Most Popular

Recent Comments

- Advertisment -
Google search engine
error: Content is protected !!