Google search engine
Home Blog Page 21

Astrology : ನವೆಂಬರ್ 29ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಜೋತಿಷ್ಯ : 2024 ನವೆಂಬರ್ 29ರ ಶುಕ್ರವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.

*ಮೇಷ ರಾಶಿ*
ಪ್ರಮುಖ ಕಾರ್ಯಕ್ರಮಗಳು ಮುಂದೂಡಲ್ಪಡುತ್ತವೆ. ಕಠಿಣ ಪರಿಶ್ರಮದಿಂದ ನೀವು ದೂರ ಪ್ರಯಾಣ ಮಾಡಬೇಕಾಗುತ್ತದೆ. ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಒಳ್ಳೆಯದಲ್ಲ. ಮಿತ್ರರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಉಂಟಾಗುತ್ತದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಒತ್ತಡಗಳು ಉಂಟಾಗುತ್ತದೆ.

*ವೃಷಭ ರಾಶಿ*
ಪ್ರಯಾಣದಲ್ಲಿ ರಸ್ತೆ ಅಡಚಣೆ ಉಂಟಾಗುತ್ತವೆ. ಕೈಗೊಂಡ ಕೆಲಸಗಳಲ್ಲಿ ಆತುರ ಒಳ್ಳೆಯದಲ್ಲ. ಪ್ರತಿಸ್ಪರ್ಧಿಗಳಿಂದ ಹಣಕಾಸಿನ ಒತ್ತಡ ಹೆಚ್ಚಾಗುತ್ತದೆ. ವ್ಯವಹಾರಗಳು ಸಾಮಾನ್ಯವಾಗಿ ಸಾಗುತ್ತವೆ. ಉದ್ಯೋಗಗಳಲ್ಲಿ ಅನಿರೀಕ್ಷಿತ ಸ್ಥಾನಚಲನೆಗಳಿರುತ್ತವೆ. ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ.

ಇದನ್ನು ಓದಿ : Love Rejection : ನರ್ಸ್ ಮೇಲೆ ಮಾರಣಾಂತಿಕ ಹಲ್ಲೆ ; ಮನನೊಂದು ನರ್ಸ್ ತಂದೆ ಸಾವು.!

*ಮಿಥುನ ರಾಶಿ*
ದೂರದ ಬಂಧುಗಳಿಂದ ಶುಭ ಸುದ್ದಿ ಸಿಗುತ್ತದೆ. ಆರ್ಥಿಕ ಪ್ರಗತಿ ಉಂಟಾಗುತ್ತದೆ. ಕೌಟುಂಬಿಕ ವ್ಯವಹಾರಗಳಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಕೈಗೆತ್ತಿಕೊಂಡ ಕಾರ್ಯಗಳು ಸುಸೂತ್ರವಾಗಿ ಪೂರ್ಣಗೊಳ್ಳುತ್ತವೆ. ವೃತ್ತಿ ಮತ್ತು ವ್ಯಾಪಾರ ಉತ್ಸಾಹದಿಂದ ಸಾಗುತ್ತದೆ. ನಿರುದ್ಯೋಗಿಗಳಿಗೆ ಶುಭ ಸುದ್ದಿ ದೊರೆಯುತ್ತದೆ.

*ಕಟಕ ರಾಶಿ*
ಆದಾಯಕ್ಕಿಂತ ಖರ್ಚು ವೆಚ್ಚಗಳು ಹೆಚ್ಚಾಗುತ್ತದೆ. ಹೊಸ ಸಾಲದ ಪ್ರಯತ್ನಗಳು ನಡೆಯುತ್ತವೆ. ಬಂಧುಗಳೊಂದಿಗೆ ವಾದ-ವಿವಾದಗಳು ಉಂಟಾಗುತ್ತವೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಹಠಾತ್ ಬದಲಾವಣೆಗಳು ಕಿರಿಕಿರಿಯುಂಟುಮಾಡುತ್ತವೆ. ಮಾನಸಿಕ ಪ್ರಶಾಂತತೆಗಾಗಿ ದೇವಾಲಯ ದರ್ಶನ ಮಾಡಲಾಗುತ್ತದೆ. ಕೈಗೆತ್ತಿಕೊಂಡ ಕೆಲಸಗಳು ಸುಗಮವಾಗಿ ಸಾಗುತ್ತವೆ.

*ಸಿಂಹ ರಾಶಿ*
ಮನೆಯ ಹೊರಗೆ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತವೆ. ಬಾಲ್ಯದ ಸ್ನೇಹಿತರನ್ನು ಭೇಟಿಯಾಗಿ ಮತ್ತು ಹಳೆಯ ವಿಷಯಗಳನ್ನು ಚರ್ಚಿಸುತ್ತೀರಿ. ಹೊಸ ಪರಿಚಯಗಳು ಲಾಭದಾಯಕವಾಗುತ್ತವೆ. ವಾಹನ ಖರೀದಿಯ ಪ್ರಯತ್ನಗಳು ಫಲ ನೀಡುತ್ತವೆ. ವ್ಯಾಪಾರ ಖರೀದಿ ಪ್ರಯತ್ನಗಳು ಉತ್ಸಾಹದಿಂದ ಸಾಗುತ್ತವೆ. ಉದ್ಯೋಗದಲ್ಲಿ ಅಧಿಕಾರಿಗಳೊಂದಿಗಿನ ಸಮಸ್ಯೆಗಳು ನಿವಾರಣೆಯಾಗುತ್ತವೆ.

*ಕನ್ಯಾ ರಾಶಿ*
ವಿವಾದಗಳಿಂದ ದೂರವಿರುವುದು ಉತ್ತಮ. ಕೈಗೊಂಡ ಕೆಲಸದಲ್ಲಿ ಶ್ರಮ ಶೀಲತೆ ಹೆಚ್ಚಾಗುತ್ತದೆ. ಸಣ್ಣ ಆರೋಗ್ಯ ಸಮಸ್ಯೆಗಳು ಬಾಧಿಸುತ್ತವೆ. ಕೆಲವು ಪ್ರಮುಖ ಕಾರ್ಯಗಳು ಮುಂದೂಡಲ್ಪಡುತ್ತವೆ. ಸ್ನೇಹಿತರೊಂದಿಗೆ ವಿವಾದದ ಸೂಚಣೆಗಳಿವೆ. ವ್ಯಾಪಾರಗಳು ನಿರಾಶಾದಾಯಕವಾಗಿರುತ್ತದೆ. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿಗಳು ಹೆಚ್ಚಾಗುತ್ತವೆ.

ಇದನ್ನು ಓದಿ : ಬೆಳಗಾವಿಯಲ್ಲಿ ನಡೆದ ಗುಂಡಿನ ದಾಳಿಯ ಕಾರಣ ಪತ್ತೆ ಮಾಡಿದ ಪೊಲೀಸರು.!

*ತುಲಾ ರಾಶಿ*
ವೃತ್ತಿಪರ ಉದ್ಯೋಗಗಳಲ್ಲಿ ನಿಮ್ಮ ಪ್ರತಿಭೆ ಬೆಳಕಿಗೆ ಬರುತ್ತದೆ. ರಾಜಕೀಯ ಸಭೆ ಮತ್ತು ಸಮಾರಂಭಗಳಿಗೆ ಆಹ್ವಾನಗಳು ಬರುತ್ತವೆ.ಹಳೆ ಸಾಲಗಳನ್ನು ವಸೂಲಿ ಮಾಡಲಾಗುತ್ತದೆ. ವ್ಯಾಪಾರಗಳು ಸುಗಮವಾಗಿ ಸಾಗುತ್ತವೆ. ಮಕ್ಕಳ ವಿದ್ಯಾಭ್ಯಾಸದ ವಿಷಯದಲ್ಲಿ ಶುಭ ಸುದ್ದಿ ಸಿಗುತ್ತದೆ.

*ವೃಶ್ಚಿಕ ರಾಶಿ*
ನಿರುದ್ಯೋಗ ಪ್ರಯತ್ನಗಳು ಅನುಕೂಲಕರವಾಗಿರುತ್ತವೆ. ಬಾಲ್ಯದ ಸ್ನೇಹಿತರನ್ನು ಭೇಟಿಯಾಗಿ ಭೋಜನ ಮತ್ತು ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ಉದ್ಯೋಗದಲ್ಲಿ ಬಡ್ತಿ ಹೆಚ್ಚಾಗುತ್ತದೆ. ವ್ಯಾಪಾರಗಳು ಲಾಭದ ಹಾದಿಯಲ್ಲಿ ಸಾಗುತ್ತವೆ. ಮೌಲ್ಯದ ವಸ್ತು ಮತ್ತು ವಾಹನಗಳನ್ನು ಖರೀದಿಸಲಾಗುತ್ತದೆ.

*ಧನುಸ್ಸು ರಾಶಿ*
ಕೌಟುಂಬಿಕ ವಾತಾವರಣದಲ್ಲಿ ಗೊಂದಲ ಉಂಟಾಗುತ್ತದೆ. ಪ್ರಯಾಣವನ್ನು ಮುಂದೂಡಲಾಗುತ್ತದೆ. ಪ್ರಮುಖ ಕೆಲಸಗಳಲ್ಲಿ ಅಡೆತಡೆಗಳು ಉಂಟಾಗುತ್ತವೆ. ಸಹೋದರರೊಂದಿಗೆ ಸ್ಥಿರಾಸ್ತಿ ವಿವಾದಗಳಿರುತ್ತವೆ. ವ್ಯಾಪಾರಗಳು ಸಾಮಾನ್ಯವಾಗಿ ನಡೆಯುತ್ತವೆ. ಉದ್ಯೋಗಿಗಳಿಗೆ ಹೆಚ್ಚುವರಿ ಕೆಲಸದ ಜವಾಬ್ದಾರಿಗಳು ಹೆಚ್ಚಾಗುತ್ತವೆ.

*ಮಕರ ರಾಶಿ*
ಶ್ರಮದಿಂದ ಕೆಲಸ ಪೂರ್ಣಗೊಳ್ಳುವುದಿಲ್ಲ. ಕೈಗೆತ್ತಿಕೊಂಡ ಕೆಲಸಗಳಲ್ಲಿ ಅಡೆತಡೆಗಳು ಉಂಟಾಗುತ್ತವೆ. ಪಾಲುದಾರಿಕೆ ವ್ಯವಹಾರಗಳು ಸುಗಮವಾಗಿ ಸಾಗುತ್ತವೆ. ಅಧಿಕಾರಿಗಳಿಂದ ಉದ್ಯೋಗಿಗಳಿಗೆ ಟೀಕಿಗಳು ಎದುರಾಗುತ್ತವೆ. ವ್ಯರ್ಥ ಖರ್ಚುಗಳು ಹೆಚ್ಚಾಗುತ್ತವೆ. ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ.

ಇದನ್ನು ಓದಿ : Love Rejection : ನರ್ಸ್ ಮೇಲೆ ಮಾರಣಾಂತಿಕ ಹಲ್ಲೆ ; ಮನನೊಂದು ನರ್ಸ್ ತಂದೆ ಸಾವು.!

*ಕುಂಭ ರಾಶಿ*
ಪ್ರಮುಖ ಕಾರ್ಯಕ್ರಮಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ನಿರ್ಣಾಯಕ ಸಮಯದಲ್ಲಿ ಆಪ್ತ ಸ್ನೇಹಿತರ ಸಹಾಯ ದೊರೆಯುತ್ತದೆ. ನಿಮ್ಮ ಸಂಗಾತಿಯಿಂದ ನೀವು ಅನಿರೀಕ್ಷಿತ ಆರ್ಥಿಕ ಲಾಭವನ್ನು ಪಡೆಯುತ್ತೀರಿ. ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗುತ್ತವೆ. ವೃತ್ತಿ ಮತ್ತು ವ್ಯಾಪಾರ ಉತ್ತಮವಾಗಿ ಸಾಗುತ್ತದೆ.

*ಮೀನ ರಾಶಿ*
ನಿರುದ್ಯೋಗಿಗಳಿಂದ ಸಿಗುವ ಮಾಹಿತಿ ಸಂತಸ ತರುತ್ತದೆ. ಮನರಂಜನಾ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತೀರಿ. ಆದಾಯದ ಮಾರ್ಗಗಳು ಹೆಚ್ಚಾಗುತ್ತವೆ. ವೃತ್ತಿಪರ ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತೀರಿ. ಉದ್ಯೋಗಿಗಳಿಗೆ ಬಡ್ತಿ ದೊರೆಯುತ್ತದೆ. ಕುಟುಂಬ ಸದಸ್ಯರೊಂದಿಗೆ ಶುಭ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ.

Disclaimer : ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ಹೀಗಾಗಿ JR ನ್ಯೂಸ್‌ಗೂ, ಈ ಲೇಖನಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರಿಯಲ್ಲ.

Love Rejection : ನರ್ಸ್ ಮೇಲೆ ಮಾರಣಾಂತಿಕ ಹಲ್ಲೆ ; ಮನನೊಂದು ನರ್ಸ್ ತಂದೆ ಸಾವು.!

ಬೆಳಗಾವಿ : ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಯಲ್ಲಿ (private hospital) ಯುವಕನೋರ್ವ ಪ್ರೀತಿ ನಿರಾಕರಿಸಿದ್ದ ನರ್ಸ್​ ಮೇಲೆ ಮಾರಣಾಂತಿಕ ಹಲ್ಲೆ (deadly assault) ಮಾಡಿದ ಘಟನೆ ಅಕ್ಟೋಬರ್ 30ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಪ್ರಕಾಶ್ ಜಾಧವ್​​ ಎಂಬಾತ ಈ ಕೃತ್ಯ ಎಸಗಿದ್ದಾನೆ. ಇನ್ನೂ ಮಗಳ ಮೇಲಿನ ಹಲ್ಲೆಯಿಂದ ಮನನೊಂದ ಆಕೆಯ ತಂದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಚೀಲದಲ್ಲಿ ಮಚ್ಚು ಇಟ್ಟುಕೊಂಡು ಬಂದಿದ್ದ ಆರೋಪಿ, ಆಸ್ಪತ್ರೆಯ ಕೌಂಟರ್​ಗೆ ನುಗ್ಗಿ ನರ್ಸ್​ ಮೇಲೆ ಮಚ್ಚಿನಿಂದ (mole) ಹಲ್ಲೆ ನಡೆಸಿದ್ದಾನೆ. ಆತನ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇದನ್ನು ಓದಿ : ಬೆಳಗಾವಿಯಲ್ಲಿ ನಡೆದ ಗುಂಡಿನ ದಾಳಿಯ ಕಾರಣ ಪತ್ತೆ ಮಾಡಿದ ಪೊಲೀಸರು.!

ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ (Khadebazar Police Station) ಪ್ರಕರಣ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ.

ಘಟನೆಯ ವಿವರ :
ಖಾಸಗಿ ಆಸ್ಪತ್ರೆಯ ಸಮೀಪದ ಕಾಲೋನಿಯಲ್ಲಿ ನೆಲೆಸಿದ್ದ ಆರೋಪಿ ಪ್ರಕಾಶ್​​, ಪ್ರೀತಿಸುವಂತೆ ನರ್ಸ್ ಹಿಂದೆ ಬಿದ್ದಿದ್ದ. ನನ್ನನ್ನು ಮದುವೆ ಮಾಡಿಕೋ (marry me) ಎಂದು ಪ್ರತಿದಿನ ಆಕೆಯನ್ನು ಪೀಡಿಸುತ್ತಿದ್ದ.

ಅಲ್ಲದೇ ಕೆಲ ದಿನಗಳ ಹಿಂದೆ ತನ್ನ ಕುಟುಂಬದವರನ್ನು ನರ್ಸ್​ ಮನೆಗೆ ಕರೆದುಕೊಂಡು ಹೋಗಿ ಮದುವೆ ಮಾಡಿಕೊಡುವಂತೆ ಪ್ರಸ್ತಾಪಿಸಿದ್ದ (marriage proposal). ಆದರೆ ಈತನ ಮಾತನ್ನು ನರ್ಸ್ ಕುಟುಂಬಸ್ಥರು ನಿರಾಕರಿಸಿದ್ದರು (deny). ಆದರೂ ಬೆಂಬಿಡದ ಬೇತಾಳನಂತೆ ಮದುವೆ ಆಗೆಂದು ಆಕೆಯನ್ನು ಪೀಡಿಸುತ್ತಿದ್ದ. ಆಕೆ ಸ್ಪಂದಿಸದ ಕಾರಣಕ್ಕಾಗಿ ಆಸ್ಪತ್ರೆಗೆ ನುಗ್ಗಿ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಮಗಳ ಮೇಲಿನ ಹಲ್ಲೆ ಸುದ್ದಿ ಕೇಳಿ ನರ್ಸ್ ತಂದೆ ಮೃತಪಟ್ಟಿದ್ದಾರೆ. ಮಗಳಿಗೆ ಇಂತಹ ಸ್ಥಿತಿ ಎದುರಾಯಿತು ಎಂದು ನೊಂದಿದ್ದ ಅವರು, ಘಟನೆ ನಡೆದ 15 ದಿನದ ಬಳಿಕ ಕೊನೆಯುಸಿರೆಳೆದಿದ್ದಾರೆ.

ಆರೋಪಿಯಿಂದ ಮಗಳಿಗೆ ಜೀವ ಬೆದರಿಕೆ (Life threatening) ಇದೆ ಎಂದು ಅವರು ಹೆಚ್ಚು ಆತಂಕಕ್ಕೊಳಗಾಗಿದ್ದರು. ಜೈಲಿನಿಂದ ಹೊರಬಂದ ಬಳಿಕ ಆತ ಏನಾದರೂ ಮಾಡುತ್ತಾನೆಂಬ ಆತಂಕ ಅವರನ್ನು ಕಾಡುತ್ತಿತ್ತು. ಇದೇ ಆತಂಕದಿಂದ ಅವರು ಮೃತಪಟ್ಟಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ.

ಬೆಳಗಾವಿಯಲ್ಲಿ ನಡೆದ ಗುಂಡಿನ ದಾಳಿಯ ಕಾರಣ ಪತ್ತೆ ಮಾಡಿದ ಪೊಲೀಸರು.!

ಬೆಳಗಾವಿ : ಬೆಳಗಾವಿಯಲ್ಲಿ ಬುಧವಾರ ನಡೆದ ಯುವಕನ ಮೇಲೆ ಗುಂಡಿನ ದಾಳಿ (attack) ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಯುವಕ ಕೊನೆಗೂ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ನಡುವೆ ಪೊಲೀಸರು ಘಟನೆಗೆ ಕಾರಣ ಏನು ಎನ್ನುವುದನ್ನು ಪತ್ತೆ ಮಾಡಿದ್ದಾರೆ.

ಬೆಳಗಾವಿ ಆಸ್ಪತ್ರೆಯ ಬೆಡ್ (bed on hospital) ಮೇಲೆ ನರಳಾಡುತ್ತಿರುವ ಯುವಕನಿಂದ ಈಗ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಮನೆಯೊಂದಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವ ಪೊಲೀಸ್ ಕಮಿಷನರ್ (Police Commissioner) ಹಾಗೂ ತಂಡ ಸಮಗ್ರ ಪ್ರಕರಣದ ಮಾಹಿತಿ ಪಡೆದುಕೊಂಡಿದೆ.

ಬೆಳಗಾವಿಯ ಆಂಜನೇಯ ನಗರ (Anjaneya Nagar) ದಲ್ಲಿ ಬುಧವಾರ ಸಂಜೆ ಟಿಳಕವಾಡಿಯ ದ್ವಾರಕಾನಗರದ ಪ್ರಣಿತ್ ಕುಮಾರ್ (31) ಸ್ನೇಹಿತೆ ಸ್ಮಿತಾ ಮನೆಗೆ ಊಟಕ್ಕೆ ಹೋಗಿದ್ದ. ಊಟ ಮಾಡಬೇಕು ಅಂದುಕೊಳ್ಳುವಷ್ಟರಲ್ಲಿ ಪ್ರಣಿತ್ ಮಾಜಿ ಸ್ನೇಹಿತೆ ಸ್ಮಿತಾಳ ಮನೆಗೆ ಬಂದಿದ್ದಾಳೆ. ಗಂಡ ಸತ್ತ ಸ್ಮಿತಾ ಒಬ್ಬಳೆ ಇದ್ದು ಆಕೆಯ ಮನೆಗೆ ಪ್ರಣಿತ್ ಯಾಕೆ ಬಂದ ಎಂದು ಅನುಮಾನಗೊಂಡು ಪ್ರಣಿತ್ ಜೊತೆಗೆ ಜಗಳಕ್ಕಿಳಿದಿದ್ದಾಳೆ. ಈ ವೇಳೆ ಸ್ಮಿತಾ ಎಂಟ್ರಿಯಾಗಿ ಇಬ್ಬರ ನಡುವಿನ ಜಗಳ ಬಗೆ ಹರಿಸುವ ಕೆಲಸ ಮಾಡಿದ್ದಾಳೆ. ಆದರೆ ಇದು ಇಷ್ಟಕ್ಕೆ ಮುಗಿದಿಲ್ಲ.

ಮಾಜಿ ಪ್ರೇಯಸಿ ಹಿಂದೆ ಹಿಂದೆ ಮತ್ತೆ ಮೂರು ಜನ ಬಂದಿದ್ದಾರೆ. ಪ್ರಣಿತ್ ಮೇಲೆ ಹಲ್ಲೆ ಮಾಡಿ ಜೊತೆಗೆ ತಂದಿದ್ದ ಗನ್ ತೆಗೆದು ಶೂಟ್ ಮಾಡಿದ್ದಾರೆ. ಗುಂಡಿನ ದಾಳಿಯಿಂದ ಪ್ರಣಿತ್ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾನೆ. ಗುಂಡು ಹಣೆ ಭಾಗದಿಂದ ಕಿವಿ ಪಕ್ಕ ಹಾದುಗೋಗಿದೆ. ಇತ್ತ ಆರೋಪಿಗಳು (accused) ಮತ್ತೊಂದು ಬಾರಿ ಗುಂಡಿನ ದಾಳಿ ಮಾಡಿದ್ದು ಅದು ತೊಡೆಯ ಭಾಗಕ್ಕೂ ತಗುಲಿದೆ. ತಕ್ಷಣ ಕುಸಿದು ಪ್ರಣಿತ್ ಕೆಳಗೆ ಬೀಳುತ್ತಿದ್ದಂತೆಯೇ ಮತ್ತೆ ಗುಂಡು ಹಾರಿಸಲು ನೋಡಿದ್ದಾರೆ. ಆಗ ಫೈರ್ ಆಗಿಲ್ಲ. ತಕ್ಷಣ ನಾಲ್ಕು ಆರೋಪಿಗಳು ಪರಾರಿಯಾಗಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದ ಪ್ರಣಿತ್​​ನನ್ನು ಸ್ಮಿತಾ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಾಳಮಾರುತಿ ಠಾಣೆ ಪೊಲೀಸರಿಗೆ ವಿಷಯ ಗೊತ್ತಾಗಿದೆ. ಪೊಲೀಸರು ಆಸ್ಪತ್ರೆಗೆ ಬಂದು ಹಲ್ಲೆಗೊಳಗಾದ ಪ್ರಣಿತ್​ರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ (Yada Martin) ಆಸ್ಪತ್ರೆಗೆ ಭೇಟಿ ನೀಡಿ ಪ್ರಣಿತ್ ಆರೋಗ್ಯ ವಿಚಾರಿಸಿ ಘಟನೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.‌ ಬಳಿಕ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳೀಯರಿಂದ ಮಾಹಿತಿ ಪಡೆದರು. ಡಿಸಿಪಿ ರೋಹನ್ ಜಗದೀಶ್ (Rohan Jagadish) ಸಾಥ್ ನೀಡಿದ್ದರು.

ಎಸಿಪಿ ನೇತೃತ್ವದ ಎರಡು ತಂಡ ರಚನೆ ಮಾಡಿ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುವುದಾಗಿ ಹೇಳಿದ್ದಾರೆ. ಬಳಕೆಯಾದ ಗನ್ ಯಾವುದು ಎಂಬುದರ ಕುರಿತ ತನಿಖೆ ಮಾಡುತ್ತೇವೆ. ಪ್ರೀತಿ ವಿಚಾರಕ್ಕೆ ಗಲಾಟೆಯಾಗಿದ್ದು ಗಾಯಾಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದಿದ್ದಾರೆ. ಮಾಳಮಾರುತಿ ಪೊಲೀಸ್ (Malamaruti police station) ಠಾಣೆಯಲ್ಲಿ ದೂರು ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಚುರುಕುಗೊಳಿಸಿದ್ದಾರೆ‌‌. ಐಸಿಯುವಿನಲ್ಲಿ ಪ್ರಣಿತ್​ಗೆ ಚಿಕಿತ್ಸೆ ಮುಂದುವರಿದಿದೆ.

error: Content is protected !!