ಡೆಸ್ಕ್ : ಅಪಘಾತಗಳಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಓವರ್ ಟೇಕ್ ಕಾರಣ, ಅತಿ ವೇಗದ ಚಾಲನೆ, ನಿರ್ಲಕ್ಷ್ಯದ ಚಾಲನೆ (Speeding, reckless driving) ಹೀಗೆ ಹಲವು ಕಾರಣಗಳಿಂದ ಅಪಘಾತಗಳು ಸಂಭವಿಸುತ್ತಿವೆ.
ಸದ್ಯ ಅಪಘಾತದ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ (The video has gone viral on social media). ಈ ವಿಡಿಯೋ ನೋಡುಗರ ಎದೆ ಝಲ್ಲೆನ್ನುವಂತೆ ಮಾಡುತ್ತದೆ.
ಇದನ್ನು ಓದಿ : ಕುಂಭಮೇಳದಲ್ಲಿ ಭಾಗವಹಿಸಲಾಗದ ಪತಿಗೆ Video ಕಾಲ್ ಮೂಲಕ ಪವಿತ್ರಸ್ನಾನ ಮಾಡಿಸಿದ ಪತ್ನಿ ವಿಡಿಯೋ ವೈರಲ್.
ಚಾಲಕನ ನಿಯಂತ್ರಣ ತಪ್ಪಿದ ಭಾರೀ ಗಾತ್ರದ ಟ್ರಕ್ (Truck lost driver’s control), ಬೈಕ್ ಮೇಲೆ ಬಿದ್ದ ಪರಿಣಾಮ ಸವಾರರಿಬ್ಬರು ಮೃತಪಟ್ಟ ಘಟನೆ ನಡೆದಿದೆ.
ರಾಜಸ್ಥಾನದ ಧೋಲ್ಟುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : ಹೆದ್ದಾರಿ ದಾಟುವಾಗ ಡಿಕ್ಕಿ ಹೊಡೆದ ಕಾರು ; ಗಾಳಿಯಲ್ಲಿ 10 ಅಡಿ ತೂರಿ ಹೋಗಿ ಬಿದ್ದ ಮಹಿಳೆ ; ಭಯಾನಕ ವಿಡಿಯೋ ವೈರಲ್.!
ಟ್ರಕ್ ಓವರ್ ಲೋಡ್ ನಿಂದ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಲೋಡ್ ಆಗಿದ್ದ ಟ್ರಕ್ ಧೋಲ್ಟುರ್ ರಸ್ತೆಯಲ್ಲಿ (Dholtur Road, Rajasthan) ಸಂಚರಿಸುವಾಗ ಚಾಲಕನ ನಿಯಂತ್ರಣ ತಪ್ಪಿದೆ. ಬಳಿಕ ರಸ್ತೆ ಪೂರ್ತಿ ಅತ್ತಿಂದಿತ್ತ ವಾಲಾಡುತ್ತಾ ಮುಂದೆ ಸಾಗುತ್ತಿದ್ದ ಬೈಕ್‌ನ ಮೇಲೆ ಪಲ್ಟಿಯಾಗಿದೆ. ಪರಿಣಾಮ ಇಬ್ಬರು ಸವಾರರು ಅಪ್ಪಚ್ಚಿಯಾಗಿದ್ದಾರೆ.
ಘಟನೆಯ ಬಳಿಕ ಕ್ರೇನ್ ಬಳಸಿಕೊಂಡು ಟ್ರಕ್ ನ್ನು ಮೇಲೆತ್ತಲಾಗಿದ್ದು, ಮೃತ ಬೈಕ್ ಸವಾರರಿಬ್ಬರನ್ನು ಹೊರತೆಗೆಯಲಾಗಿದೆ.
ಇದನ್ನು ಓದಿ : Video : ಮೇಲಿನಿಂದ ಬೀಳುತ್ತಿದ್ದ ನಾಯಿಯನ್ನು ರಕ್ಷಿಸಿದ ಮಹಿಳೆ ; ಶಹಬ್ಬಾಸ್ ಎಂದ ನೆಟ್ಟಿಗರು.!
ಸದ್ಯ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ.
ಅಪಘಾತದ ವಿಡಿಯೋ ಇಲ್ಲಿದೆ :
#WATCH Death has a design—I witnessed it today. pic.twitter.com/dZVpwt2h8h
— Younish P (@younishpthn) February 26, 2025
Recent Comments