Wednesday, March 12, 2025
Google search engine
HomeViral VideoFacebook ಲವರ್ ಜೊತೆ ಓಡಿ ಹೋದ ಎರಡು ಮಕ್ಕಳ ತಾಯಿ ; ವಿಡಿಯೋ ವೈರಲ್.!
spot_img
spot_img
spot_img
spot_img
spot_img

Facebook ಲವರ್ ಜೊತೆ ಓಡಿ ಹೋದ ಎರಡು ಮಕ್ಕಳ ತಾಯಿ ; ವಿಡಿಯೋ ವೈರಲ್.!

ಬೆಂಗಳೂರು : ಮಹಿಳೆಯೋರ್ವಳು ಪತಿ ಮತ್ತು ಇಬ್ಬರು ಮಕ್ಕಳನ್ನು ಬಿಟ್ಟು ಫೇಸ್‌ಬುಕ್‌ನಲ್ಲಿ ಪರಿಚಯವಾದ (Met on Facebook) ಯುವಕನೊಂದಿಗೆ ಓಡಿಹೋದ ಘಟನೆ ನಡೆದಿದ್ದು, ಈ ಘಟನೆ ಸಂಚಲನ ಮೂಡಿಸಿದೆ.

ತೆಲಂಗಾಣದ ಮೇಡ್ಚಲ್ ಜಿಲ್ಲೆಯ (Medchal district of Telangana) ಪೆಟ್ ಬಶೀರಾಬಾದ್ ಪೊಲೀಸ್ ಠಾಣೆಯಲ್ಲಿ ಕಳೆದ ತಿಂಗಳು 5 ರಂದು ಪತಿ ಜಯರಾಜ್ ಅವರು ತಮ್ಮ ಪತ್ನಿ ಸುಕನ್ಯಾ ನಾಪತ್ತೆಯಾಗಿದ್ದಾರೆ (missing) ಎಂದು ದೂರು ದಾಖಲಿಸಿದ್ದರು.

ಇದನ್ನು ಓದಿ : ರಾಯಭಾಗ : ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟ್ರ್ಯಾಕ್ಟರ್ ; ಇಬ್ಬರು ಸಾವು, 20 ಜನರಿಗೆ ಗಾಯ.!

ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದ ಗೋಪಿ ಎಂಬಾತನ ಸಲುವಾಗಿ ಆಕೆ ನನ್ನನ್ನು ಬಿಟ್ಟು ಹೋಗಿದ್ದಾಳೆ ಎಂದು ಜಯರಾಜ್ ಹೇಳಿದ್ದಾರೆ.

ಅವರಿಬ್ಬರೂ ಮನೆಯಿಂದ ಓಡಿಹೋಗುವುದನ್ನು ಪತಿ ಗಮನಿಸಿದ್ದಾರೆ. ಅವರು ಮೆಡ್ಚಲ್‌ನ ಆಕ್ಸಿಜನ್ ಪಾರ್ಕ್‌ನಲ್ಲಿ ಕಾಣಿಸಿಕೊಂಡಿದ್ದರಂತೆ. ಪತಿಯನ್ನು ನೋಡಿದ ಅವರು ಬೈಕ್‌ ಅಲ್ಲೇ ಬಿಟ್ಟು, ಚಲಿಸುತ್ತಿರುವ ಬಸ್ ಹತ್ತಿ (Board a moving bus) ಪರಾರಿಯಾಗಿದ್ದಾರೆ.

ಈ ಘಟನೆಯ ವಿಡಿಯೋಗಳು ಈಗ ಅಂತರ್ಜಾಲದಲ್ಲಿ ವೈರಲ್ ಆಗಿವೆ (videos have now gone viral on the internet).

ಇದನ್ನು ಓದಿ : PUC ಪರೀಕ್ಷೆಯಲ್ಲಿ ನಕಲು ಮಾಡುವಾಗ ಸಿಕ್ಕಿಬಿದ್ದ ವಿದ್ಯಾರ್ಥಿನಿ ಮಾಡಿದ್ದೇನು ಗೊತ್ತೇ.?

ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಮೂಲಕ ಪರಿಚಯವಾದ ಗೋಪಿ ಈ ಮಹಿಳೆಯನ್ನು ಬಹಳ ಪ್ರೀತಿ ಹಾಗೂ ಯಾವಾಗಲೂ ಕಾಳಜಿ ವಹಿಸುತ್ತಿದ್ದ (Loving and always caring) ಎಂದು ವರದಿಯಾಗಿದೆ. ಇದಕ್ಕೆ ಮರುಳಾದ ಆ ಮಹಿಳೆ ಆತನ ಪ್ರೀತಿಯ ಆಮಿಷಕ್ಕೊಳಗಾಗಿ ಗಂಡ ಮತ್ತು ಮಕ್ಕಳನ್ನು ತೊರೆದಳು ಹೋಗಿದ್ದಾಳೆ ಎನ್ನಲಾಗಿದೆ.

ವೈರಲ್ ವಿಡಿಯೋ :

RELATED ARTICLES
Most Popular

Recent Comments

- Advertisment -
Google search engine
error: Content is protected !!