ಬೆಳಗಾವಿ : ಬೆಳಗಾವಿ ತಾಲೂಕಿನ ತುಮ್ಮರಗುದ್ದಿ Tummaraguddi in Belagavi Taluk ಗ್ರಾಮದ ಬಾಣಂತಿಯೊಬ್ಬರು ಬಿಮ್ಸ್ ನಲ್ಲಿ ಸಾವಿಗೀಡಾದ ಘಟನೆ ನಡೆದಿದೆ.
ಕೀರ್ತಿ ನೇಸರಗಿ (19) ಎಂಬ ಬಾಣಂತಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : ಲೋಕಾಯುಕ್ತ Raid ; ಕಂತೆ ಕಂತೆ ಹಣ, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ , ಕೆಜಿಗಟ್ಟಲೆ ಬೆಳ್ಳಿ ವಶ.!
ಮಾರ್ಚ್ 4 ರಂದು ಸಿಜೇರಿಯನ್ ಮೂಲಕ ಕೀರ್ತಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ವೇಳೆ ವಿಪರೀತ ರಕ್ತಸ್ರಾವ (Excessive bleeding) ಆಗುತ್ತಿದ್ದರೂ ಅದೇ ದಿನ ಬಿಮ್ಸ್ ಸಿಬ್ಬಂದಿ ವಾರ್ಡ್‌ಗೆ ಶಿಫ್ಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ತೀವ್ರ ರಕ್ತಸ್ರಾವದಿಂದ ಕೀರ್ತಿ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಬೀಮ್ಸ್ ವೈದ್ಯರು ಐಸಿಯುನಲ್ಲಿರಿಸಿ ಬಾಣಂತಿ ಕೀರ್ತಿಗೆ ಚಿಕಿತ್ಸೆ ನೀಡುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಬಾಣಂತಿ ಕೀರ್ತಿ ಮೃತಪಟ್ಟಿದ್ದಾರೆ.
ಇದನ್ನು ಓದಿ : PUC ಪರೀಕ್ಷೆಯಲ್ಲಿ ನಕಲು ಮಾಡುವಾಗ ಸಿಕ್ಕಿಬಿದ್ದ ವಿದ್ಯಾರ್ಥಿನಿ ಮಾಡಿದ್ದೇನು ಗೊತ್ತೇ.?
ಇನ್ನೂ ವೈದ್ಯರ ನಿರ್ಲಕ್ಷ್ಯವೇ ಬಾಣಂತಿ ಕೀರ್ತಿ ಸಾವಿಗೆ ಕಾರಣವೆಂದು ಪೋಷಕರ ಆರೋಪಿಸಿದ್ದಾರೆ. ಬೆಳಗಾವಿ APMC ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Recent Comments