Google search engine
Home Blog Page 16

ಲವ್ವಿಡವ್ಹಿಗಾಗಿ ಮದುವೆಯಾಗಿ ನಾಲ್ಕೆ ದಿನಕ್ಕೆ ಪತಿಗೆ ಮುಹೂರ್ತ ಇಟ್ಟ ಪತ್ನಿ.!

ಬೆಂಗಳೂರು : ಇನ್ನೇನು‌ ಅಂದುಕೊಂಡಂತೆ ಮದುವೆಯಾಯ್ತು ಅಂತ ಆ ವರ ಖುಷಿಯಲ್ಲಿದ್ದ ಆದರೆ. ಆ ಸಂತೋಷ ಕೇವಲ ನಾಲ್ಕೆ ದಿನಕ್ಕೆ ಕೊನೆಗೊಂಡಿದೆ.

ಮದುವೆಯಾದ ನಾಲ್ಕೇ ದಿನಗಳಲ್ಲಿ ವರನನ್ನು ಮದುವೆಯಾದ ನವವಿವಾಹಿತೆಯೇ ಕೊಲೆಗೈದ ಘಟನೆ ಗುಜರಾತಿನ ಗಾಂಧಿನಗರದಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : ಸ್ವಾಮೀಜಿ ಮುಗಿಸಲು ಪೊಲೀಸರು ಪ್ಲಾನ್ ಮಾಡಿದ್ದರು ; ರೇಣುಕಾಚಾರ್ಯ ಗಂಭೀರ ಆರೋಪ.

ಕೊಲೆಯಾದ ನವವಿವಾಹಿತ ಅಹಮದಾಬಾದ್​ ನಿವಾಸಿ ಬಾವಿಕ್​ ಎಂದು ತಿಳಿದು ಬಂದಿದ್ದು, ಈತ​ ಗಾಂಧಿನಗರದ ಪಾಯಲ್​ ಎಂಬಾಕೆಯನ್ನು ನಾಲ್ಕು ದಿನಗಳ ಹಿಂದೆ ಮದುವೆಯಾಗಿದ್ದನು. ಆಬಳಿಕ ವರನನ್ನು ಕಿಡ್ನ್ಯಾಪ್ ಮಾಡಿ ಹತ್ಯೆ ಮಾಡಲಾಗಿದೆ. ಆತನನ್ನು ಮೂವರು ವ್ಯಕ್ತಿಗಳು ಅಪಹರಿಸಿ ಕೊಂದಿದ್ದಾರೆ ಎಂದು ವರದಿ ತಿಳಿಸಿದೆ.

ಮದುವೆಗೆ ಮುಂಚೆ ಪಾಯಲ್​ ಸೋದರ ಸಂಬಂಧಿಯಾದ ಕಲ್ಪೇಶ್ ಎಂಬಾತನನ್ನು ಲವ್ ಮಾಡುತ್ತಿದ್ದಳು. ಆದರೆ ಈ ವಿಚಾರ ಗೊತ್ತಿಲ್ಲದೇ ಆಕೆಯ ಮನೆಯವರನ್ನು ಭುವಿಕ್​ಗೆ ಪಾಯಲ್​​ಳನ್ನು ಕೊಟ್ಟು ಮದುವೆ ಮಾಡಿದ್ದರು.

ಇದನ್ನು ಓದಿ : Astrology : ಡಿಸೆಂಬರ್ 15ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಮದುವೆಯಾದ ನಾಲ್ಕು ದಿನಗಳ ಬಳಿಕ ಭುವಿಕ್ ತನ್ನ ಹೆಂಡತಿಯನ್ನು ಕರೆದುಕೊಂಡು ಬರಲು ಮಾವನ ಮನೆಗೆ ಹೋಗಿದ್ದರು. ಆದರೆ ಎಷ್ಟೊತ್ತಾದರೂ ಮನೆಗೆ ತೆರಳದ ಕಾರಣ ಆತಂಕಗೊಂಡ ಮಾವ ಬೀಗರ ಮನೆಗೆ ಕಾಲ್ ಮಾಡಿದ್ದಾರೆ. ಆತ ಹೊರಟು ಬಹಳ ಹೊತ್ತಾಯ್ತು ಎಂದು ಭುವಿಕ್ ಮನೆಯವರು ತಿಳಿಸಿದ್ದಾರೆ.

ಏನಾಗಿರಬಹುದೆಂದು ಪಾಯಲ್ ಅವರ ತಂದೆ ಕುಟುಂಬದೊಂದಿಗೆ ಅಳಿಯನನ್ನು ಹುಡುಕಲು ಪ್ರಾರಂಭಿಸಿದರು. ಅವರ ಹುಡುಕಾಟ ನಡೆದಿದ ವೇಳೆ ರಸ್ತೆ ಮೇಲೆ ಭಾವಿಕ್ ಹೆಣವಾಗಿ ಬಿದ್ದಿರುವುದು ಕಂಡು ಬಂದಿದೆ.

ಇದನ್ನು ಓದಿ : ಹತ್ತಿರ ಬರಲು ನಿರಾಕರಿಸಿದ್ದಕ್ಕೆ ಮಾವನಿಂದ ಸೊಸೆಯ ಹತ್ಯೆ.!

ನಾಲ್ಕು ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ ಯುವಕ ಅದ್ಹೇಗೆ ಸಾವಿಗೀಡಾದ ಅಂತ ಪೊಲೀಸರಿಗೆ ಅನುಮಾನ ಬಂದಿತ್ತು. ನಂತರ ಪೊಲೀಸರು ಪಾಯಲ್ ನನ್ನು ವಿಚಾರಿಸಿದಾಗ ಅಪಹರಣ ಮತ್ತು ಹತ್ಯೆಗೆ ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ. ತಾನು ಕಲ್ಪೇಶ್‌ನನ್ನು ಲವ್ ಮಾಡುತ್ತಿದ್ದೆ. ಆದರೆ ನನ್ನ ಪೋಷಕರು ಭಾವಿಕ್‌ಗೆ ಆಕೆಯನ್ನು ಕೊಟ್ಟು ಮದುವೆ ಮಾಡಿಕೊಟ್ಟರು. ಇದರಿಂದ ಪತಿಯನ್ನು ಕೊಲೆ ಮಾಡಲು ಯೋಜಿಸಿದ್ದೆ ಎಂದು ಪಾಯಲ್ ಪೊಲೀಸರಿಗೆ ತಿಳಿಸಿದ್ದಾಳೆ.

ವಿಚಾರಣೆ ವೇಳೆ, ಕಲ್ಪೇಶ್, ಇಬ್ಬರು ಸಹಚರರೊಂದಿಗೆ ಭಾವಿಕ್‌ನನ್ನು ಅಪಹರಿಸಿ ತನ್ನ ಎಸ್‌ಯುವಿಯೊಳಗೆ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ ಅವರು ಹತ್ತಿರದ ನರ್ಮದಾ ಕಾಲುವೆಯಲ್ಲಿ ಶವವನ್ನು ಎಸೆದು ಹೋಗಿದ್ದಾಗಿ ಬಾಯ್ಬಿಟ್ಟಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

ಹತ್ತಿರ ಬರಲು ನಿರಾಕರಿಸಿದ್ದಕ್ಕೆ ಮಾವನಿಂದ ಸೊಸೆಯ ಹತ್ಯೆ.!

ರಾಯಚೂರು : ರಾಯಚೂರು ಜಿಲ್ಲೆಯ ಜುಲಮಗೇರ ಎಂಬಲ್ಲಿ ಸೊಸೆಯ ಮೇಲೆ ಕಾಮುಕ ಮಾವನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದು, ಇದನ್ನು ವಿರೋಧಿಸಿದ್ದಕ್ಕೆ ಆಕೆಯನ್ನು ಸಲಕೆಯಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.

ಸೊಸೆ ದುಳ್ಳಮ್ಮನನ್ನು (27) ಮಾವ ರಾಮಲಿಂಗಯ್ಯ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಸೊಸೆ ಮೇಲೆ ಅತ್ಯಾಚಾರ ಮಾಡಲು ರಾಮಲಿಂಗಯ್ಯ ಮುಂದಾಗಿದ್ದಾನೆ. ಈ ವೇಳೆ ವಿರೋಧ ಮಾಡಿದ್ದಕ್ಕೆ ಕೊಲೆಗೈದಿದ್ದಾನೆ.

ಇದನ್ನು ಓದಿ : Astrology : ಡಿಸೆಂಬರ್ 15ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಆರೋಪಿಯು ಈ ಹಿಂದೆಯೂ ಕೂಡ ಎರಡು ಮೂರು ಬಾರಿ ಸೊಸೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದ್ದು, ಗ್ರಾಮದ ಹಿರಿಯರು ಸೇರಿ ರಾಮಾಯಲಿಂಗಯ್ಯಗೆ ಬುದ್ಧಿ ಕೂಡ ಹೇಳಿದ್ದರು.

ಕೊಲೆ ಮಾಡಿ ಸದ್ಯ ಎಸ್ಕೇಪ್ ಆಗಿರುವ ರಾಮಲಿಂಗಯ್ಯ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನು ಓದಿ : ಸ್ವಾಮೀಜಿ ಮುಗಿಸಲು ಪೊಲೀಸರು ಪ್ಲಾನ್ ಮಾಡಿದ್ದರು ; ರೇಣುಕಾಚಾರ್ಯ ಗಂಭೀರ ಆರೋಪ.

ಇಡಪನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಘಟನೆಯ ಕುರಿತು ಪ್ರಕರಣ ದಾಖಲಾಗಿದೆ.

Astrology : ಡಿಸೆಂಬರ್ 15ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಜೋತಿಷ್ಯ : 2024 ಡಿಸೆಂಬರ್ 15ರ ಭಾನುವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.

*ಮೇಷ ರಾಶಿ*
ಕೈಗೊಂಡ ವ್ಯವಹಾರಗಳು ನಿರುತ್ಸಾಹಗೊಳಿಸುತ್ತವೆ. ವ್ಯರ್ಥ ಖರ್ಚುಗಳು ಹೆಚ್ಚಾಗುತ್ತವೆ. ಹಣದ ವಿಷಯದಲ್ಲಿ ಮಾಡುವ ಪ್ರಯತ್ನಗಳು ಕೂಡಿ ಬರುವುದಿಲ್ಲ. ವ್ಯಾಪಾರ ವ್ಯವಹಾರಗಳಲ್ಲಿ ಶ್ರಮ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಸ್ಥಾನ ಚಲನೆ ಸೂಚನೆಗಳಿವೆ. ಇತರರೊಂದಿಗೆ ವಿನಾಕಾರಣ ವಿವಾದಗಳು ಉಂಟಾಗುತ್ತವೆ. ದೈವಿಕ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ.

*ವೃಷಭ ರಾಶಿ*
ಪ್ರಯಾಣಗಳಲ್ಲಿ ಆರ್ಥಿಕ ಲಾಭ ಉಂಟಾಗುತ್ತವೆ. ಉದ್ಯೋಗದಲ್ಲಿ ಅಧಿಕಾರಿಗಳ ಕೃಪಾಕಟಾಕ್ಷದಿಂದ ಉನ್ನತ ಸ್ಥಾನಮಾನವನ್ನು ಪಡೆಯುತ್ತೀರಿ. ಪ್ರಮುಖ ವ್ಯವಹಾರಗಳಲ್ಲಿ ಸ್ವಂತ ಆಲೋಚನೆಗಳು ಕೂಡಿ ಬರುತ್ತವೆ. ಸ್ಥಿರಾಸ್ತಿ ಮಾರಾಟ ಲಾಭದಾಯಕವಾಗಿರುತ್ತದೆ. ಆರ್ಥಿಕ ಪರಿಸ್ಥಿತಿ ಆಶಾದಾಯಕವಾಗಿರುತ್ತದೆ.

ಇದನ್ನು ಓದಿ : Astrology : ಡಿಸೆಂಬರ್ 14ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

*ಮಿಥುನ ರಾಶಿ*
ವೃತ್ತಿ ವ್ಯಾಪಾರ ವಿಸ್ತರಣೆಯ ಪ್ರಯತ್ನಗಳು ಫಲ ನೀಡುತ್ತವೆ. ಬಂಧು ಮಿತ್ರರ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ. ಸಮಾಜದಲ್ಲಿ ಕೀರ್ತಿ ಹೆಚ್ಚಾಗುತ್ತದೆ. ಆಧ್ಯಾತ್ಮಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಉದ್ಯೋಗದಲ್ಲಿ ಕೆಲಸ ಒತ್ತಡದ ನಡುವೆಯೂ ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ.

*ಕಟಕ ರಾಶಿ*
ಬೆಲೆಬಾಳುವ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲಾಗುತ್ತದೆ. ಆದಾಯದ ಮಾರ್ಗಗಳು ಹೆಚ್ಚಾಗುತ್ತವೆ. ಬಹುಕಾಲದಿಂದ ಕಾಡುತ್ತಿದ್ದ ಸಮಸ್ಯೆಗಳಿಂದ ಹೊರಬರುತ್ತೀರಿ. ನಿಗದಿತ ಸಮಯಕ್ಕೆ ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ. ಕುಟುಂಬದಲ್ಲಿ ಶುಭ ಕಾರ್ಯಗಳ ಪ್ರಸ್ಥಾಪವಿರುತ್ತದೆ. ವೃತ್ತಿ ಉದ್ಯೋಗದಲ್ಲಿ ಅಧಿಕಾರಿಗಳಿಂದ ಸಹಾಯ ದೊರೆಯುತ್ತದೆ.

*ಸಿಂಹ ರಾಶಿ*
ವೃತ್ತಿಪರ ವ್ಯವಹಾರದಲ್ಲಿ ಅಧಿಕ ಕಷ್ಟದಿಂದ ಸ್ವಲ್ಪ ಫಲಿತಾಂಶವನ್ನು ಪಡೆಯುತ್ತೀರಿ. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿಗಳನ್ನು ನಿಭಾಯಿಸಲು ಕಷ್ಟವಾಗುತ್ತದೆ. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯಗಳಿರುತ್ತವೆ. ಮಕ್ಕಳ ವಿಷಯದಲ್ಲಿ ಅನಿರೀಕ್ಷಿತ ಸಮಸ್ಯೆಗಳು ಉದ್ಭವಿಸುತ್ತವೆ. ಉದ್ಯೋಗಿಗಳಿಗೆ ಕೆಲಸದ ಒತ್ತಡ ಅಧಿಕವಾಗಿರುತ್ತದೆ.

*ಕನ್ಯಾ ರಾಶಿ*
ಆರ್ಥಿಕ ಸಂಕಷ್ಟವಿದ್ದರೂ ಸೌಲಭ್ಯಗಳ ಕೊರತೆ ಇರುವುದಿಲ್ಲ. ಮೌಲ್ಯದ ವಸ್ತುಗಳನ್ನು ಖರೀದಿಸಲಾಗುತ್ತದೆ. ಹೊಸ ವಾಹನ ಲಾಭ ಉಂಟಾಗುತ್ತದೆ. ಸ್ನೇಹಿತರ ನೆರವಿನಿಂದ ಕೆಲವು ಕೆಲಸಗಳು ಪೂರ್ಣಗೊಳ್ಳುತ್ತವೆ. ನಿರುದ್ಯೋಗ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಸ್ಥಿರ ಆಸ್ತಿಗಳ ಮಾರಾಟ ಲಾಭದಾಯಕವಾಗಿರುತ್ತದೆ.

ಇದನ್ನು ಓದಿ : ತನ್ನನ್ನು ಸಾಕಿದ ಮಾವುತ ಬಿಟ್ಟು ಹೊರಟಾಗ ಆನೆ ಮರಿ ಮಾಡಿದ್ದೇನು ಗೊತ್ತೇ.? ನೋಡಿದ್ರೆ ಭಾವುಕರಾಗೋದು ಗ್ಯಾರಂಟಿ.

*ತುಲಾ ರಾಶಿ*
ಮಹತ್ವದ ಆಲೋಚನೆಗಳು ಕಾರ್ಯ ರೂಪಕ್ಕೆ ಬರುತ್ತವೆ. ಕೈಗೊಂಡ ಕೆಲಸಗಳಲ್ಲಿ ಅಡೆತಡೆಗಳು ನಿವಾರಣೆಯಾಗುತ್ತವೆ. ಬಾಲ್ಯದ ಸ್ನೇಹಿತರೊಂದಿಗೆ ಶುಭ ಕಾರ್ಯಗಳ ಬಗ್ಗೆ ಚರ್ಚಿಸಲಾಗುತ್ತದೆ. ಆದಾಯದ ಮಾರ್ಗಗಳು ಹೆಚ್ಚಾಗುತ್ತವೆ. ಸ್ಥಿರಾಸ್ತಿ ವೃದ್ಧಿಯಾಗುತ್ತದೆ. ವೃತ್ತಿಪರ ವ್ಯವಹಾರಗಳಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಉದ್ಯೋಗದ ವಾತಾವರಣವು ಅನುಕೂಲಕರವಾಗಿರುತ್ತದೆ.

*ವೃಶ್ಚಿಕ ರಾಶಿ*
ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತದೆ. ಬೇರೆಯವರ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಒಳ್ಳೆಯದು. ಪಾಲುದಾರಿಕೆ ವ್ಯವಹಾರಗಳಲ್ಲಿ ವ್ಯತ್ಯಾಸಗಳು ಉಂಟಾಗುತ್ತವೆ. ವೃತ್ತಿ ಮತ್ತು ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಜಾಗರುಕರಾಗಿರಬೇಕು. ಕುಟುಂಬದ ಮುಖ್ಯಸ್ಥರ ಅನಾರೋಗ್ಯ ಸಮಸ್ಯೆಗಳು ನೋವುಂಟು ಮಾಡುತ್ತವೆ.

*ಧನುಸ್ಸು ರಾಶಿ*
ಕೈಗೆತ್ತಿಕೊಂಡ ಕೆಲಸಗಳು ಮಂದಗತಿಯಲ್ಲಿ ಸಾಗುತ್ತವೆ. ಉದ್ಯೋಗ ಪ್ರಯತ್ನಗಳಲ್ಲಿ ವಿಳಂಬವಾಗುತ್ತವೆ. ಆಕಸ್ಮಿಕ ಪ್ರಯಾಣಗಳಿಂದ ದೈಹಿಕ ಶ್ರಮ ಉಂಟಾಗುತ್ತದೆ. ಸಂಗಾತಿಯೊಂದಿಗೆ ಪವಿತ್ರ ಸ್ಥಳಗಳಿಗೆ ಭೇಟಿ ನೀಡುತ್ತೀರಿ. ಉದ್ಯೋಗಗಳಲ್ಲಿ ಅಡೆತಡೆಗಳು ಅಧಿಕವಾಗಿರುತ್ತದೆ. ಸಾಲಗಾರರಿಂದ ಒತ್ತಡ ಹೆಚ್ಚಾಗುತ್ತದೆ. ದೇವಸ್ಥಾನಕ್ಕೆ ಭೇಟಿ ನೀಡುತ್ತೀರಿ.

*ಮಕರ ರಾಶಿ*
ದೂರದ ಬಂಧು ಮಿತ್ರರ ಆಗಮನ ಸಂತಸ ತರುತ್ತದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ಪ್ರಮುಖ ವ್ಯವಹಾರಗಳು ನಿಧಾನವಾಗಿರುತ್ತವೆ. ವಿದ್ಯಾರ್ಥಿಗಳಿಗೆ ಹೊಸ ಶೈಕ್ಷಣಿಕ ಅವಕಾಶಗಳು ದೊರೆಯುತ್ತವೆ. ವ್ಯವಹಾರದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ವೃತ್ತಿ ಮತ್ತು ಉದ್ಯೋಗದಲ್ಲಿ ಕಠಿಣ ಪರಿಶ್ರಮಕ್ಕೆ ಸೂಕ್ತ ಮನ್ನಣೆ ದೊರೆಯುತ್ತದೆ.

ಇದನ್ನು ಓದಿ : ಸ್ವಾಮೀಜಿ ಮುಗಿಸಲು ಪೊಲೀಸರು ಪ್ಲಾನ್ ಮಾಡಿದ್ದರು ; ರೇಣುಕಾಚಾರ್ಯ ಗಂಭೀರ ಆರೋಪ.

*ಕುಂಭ ರಾಶಿ*
ಕೈಗೆತ್ತಿಕೊಂಡ ವ್ಯವಹಾರಗಳಲ್ಲಿ ಸ್ವಲ್ಪ ಗೊಂದಲ ಉಂಟಾಗುತ್ತದೆ. ಮನೆಯ ಹೊರಗೆ ನಿರೀಕ್ಷಿತ ಸಮಸ್ಯೆಗಳು ಉಂಟಾಗುತ್ತವೆ. ಪ್ರಯಾಣದಲ್ಲಿ ಹಠಾತ್ ಬದಲಾವಣೆಗಳು ಸಂಭವಿಸುತ್ತವೆ. ಸಂಬಂಧಿಕರು ನಿಮ್ಮ ಮಾತಿಗೆ ಒಪ್ಪುವುದಿಲ್ಲ. ವ್ಯಾಪಾರ ವ್ಯವಹಾರಗಳಲ್ಲಿ ಸಣ್ಣಪುಟ್ಟ ಗೊಂದಲಗಳು ಉಂಟಾಗುತ್ತವೆ. ವೃತ್ತಿಪರ ಉದ್ಯೋಗಗಳು ನಿಧಾನವಾಗಿರುತ್ತವೆ.

*ಮೀನ ರಾಶಿ*
ಆತ್ಮೀಯರಿಂದ ಪ್ರಮುಖ ವಸ್ತುಗಳನ್ನು ಸಂಗ್ರಹಿಸುತ್ತೀರಿ. ಹಳೆಯ ಸ್ನೇಹಿತರೊಂದಿಗೆ ವಿಹಾರ ಯಾತ್ರೆಗಳಲ್ಲಿ ಭಾಗವಹಿಸುತ್ತೀರಿ, ಕೈಗೊಂಡ ವ್ಯವಹಾರಗಳು ಸುಗಮವಾಗಿ ಸಾಗುತ್ತವೆ. ನಿರುದ್ಯೋಗಿಗಳಿಗೆ ಶುಭ ಸುದ್ದಿ ದೊರೆಯುತ್ತದೆ. ವೃತ್ತಿಪರ ವ್ಯವಹಾರಗಳಲ್ಲಿ ಹೊಸ ಹೂಡಿಕೆಗಳನ್ನು ಸ್ವೀಕರಿಸಲಾಗುತ್ತದೆ. ಆರ್ಥಿಕ ಪರಿಸ್ಥಿತಿ ಆಶಾದಾಯಕವಾಗಿರುತ್ತದೆ.

Disclaimer : ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ಹೀಗಾಗಿ JR ನ್ಯೂಸ್‌ಗೂ, ಈ ಲೇಖನಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರಿಯಲ್ಲ.

ಸ್ವಾಮೀಜಿ ಮುಗಿಸಲು ಪೊಲೀಸರು ಪ್ಲಾನ್ ಮಾಡಿದ್ದರು ; ರೇಣುಕಾಚಾರ್ಯ ಗಂಭೀರ ಆರೋಪ.

0

ದಾವಣಗೆರೆ : ಮೀಸಲಾತಿ ಹೋರಾಟದ ವೇಳೆ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸುವ ಸಂಚು ನಡೆದಿದೆ. ಜಯ ಮೃತ್ಯುಂಜಯ ಸ್ವಾಮೀಜಿಯನ್ನು ಮುಗಿಸಲು ಪೊಲೀಸರು ಪ್ಲಾನ್ ಮಾಡಿದ್ದರು. ಸ್ವಾಮೀಜಿ ಮುಗಿಸಿದರೆ ಹೋರಾಟ ಮುಗಿಯುತ್ತದೆ ಎಂದು ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ಗಂಭೀರ ಆರೋಪ ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ಬೆಳಗಾವಿಯಲ್ಲಿ ಪಂಚಮಸಾಲಿ ಸಮಾಜದವರ ಮೇಲೆ ನಡೆದ ಲಾಠಿ ಚಾರ್ಜ್ ಕುರಿತು ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದರು. ಸುದ್ದಿಗೋಷ್ಠಿ ನಡೆಸಿದ ರೇಣುಕಾಚಾರ್ಯ ಚನ್ನಮ್ಮನ ವಂಶಸ್ಥರ ಮೇಲೆ ನಡೆದ ಲಾಠಿ ಪ್ರಹಾರ ಖಂಡನೀಯ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಇದನ್ನು ಓದಿ : Astrology : ಡಿಸೆಂಬರ್ 14ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ನಾವು ಪಂಚಮಸಾಲಿ ಸಮುದಾಯದೊಂದಿಗೆ ದೃಢವಾಗಿ ನಿಲ್ಲುತ್ತೇವೆ. ಸಮುದಾಯದ ಮೇಲಿನ ಹಲ್ಲೆಯನ್ನು ಎಲ್ಲ ಮಠಾಧೀಶರು ಖಂಡಿಸಬೇಕು. ಪಂಚಮಸಾಲಿ ಸಮಾಜದವರು ತಮ್ಮ ಮೀಸಲಾತಿ ಹಕ್ಕಿಗಾಗಿ ಒತ್ತಾಯಿಸುತ್ತಿದ್ದಾರೆ ಎಂದರು.

ಲಾಠಿ ಚಾರ್ಜ್ ವಿಚಾರವಾಗಿ ಗೃಹ ಸಚಿವ ಜಿ.ಪರಮೇಶ್ವರ್ ಹಗುರವಾಗಿ ಮಾತನಾಡಿದ್ದಾರೆ. ಪರಮೇಶ್ವರ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು. ಲಾಠಿ ಚಾರ್ಜ್ ಬದಲು ಮುತ್ತು ಕೊಡಬೇಕಾ ಎಂದು ಹೇಳುತ್ತಾರೆ. ಪ್ರತಿಭಟನಾಕಾರರೇನು ಕಿಸ್ ಮಾಡಲು ಕೇಳಿದ್ದಾರೆಯೇ? ಪ್ರತಿಭಟನಾಕಾರರ ಬಳಿ ಹೋಗಿ ಅವರ ಅಹವಾಲು ಆಲಿಸಬೇಕಿತ್ತು ಎಂದು ಆಕ್ರೋಶ ಹೊರಹಾಕಿದರು.

ಇದನ್ನು ಓದಿ : ತನ್ನನ್ನು ಸಾಕಿದ ಮಾವುತ ಬಿಟ್ಟು ಹೊರಟಾಗ ಆನೆ ಮರಿ ಮಾಡಿದ್ದೇನು ಗೊತ್ತೇ.? ನೋಡಿದ್ರೆ ಭಾವುಕರಾಗೋದು ಗ್ಯಾರಂಟಿ.

ಪ್ರತಿಭಟನೆ ವೇಳೆ RSS ನವರು ಕಲ್ಲು ತೂರಾಟ ನಡೆಸಿದ್ದಾರೆ ಎಂಬ ಖಾಶಪ್ಪನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರತಿಭಟನೆ ಹತ್ತಿಕ್ಕಲು ಅವರೇ ಕಲ್ಲು ತೂರಾಟ ನಡೆಸಿರಬಹುದು. ಅಧಿಕಾರದ ದುರಾಸೆಯಿಂದ ಈ ರೀತಿ ಮಾತನಾಡುತ್ತಿದ್ದಾರೆ ಎಂದು ರೇಣುಕಾಚಾರ್ಯ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತನ್ನನ್ನು ಸಾಕಿದ ಮಾವುತ ಬಿಟ್ಟು ಹೊರಟಾಗ ಆನೆ ಮರಿ ಮಾಡಿದ್ದೇನು ಗೊತ್ತೇ.? ನೋಡಿದ್ರೆ ಭಾವುಕರಾಗೋದು ಗ್ಯಾರಂಟಿ.

ಡೆಸ್ಕ್ : ಪ್ರೀತಿ ಎನ್ನುವುದು ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯ ಬಗ್ಗೆ ಹೊಂದಿರುವ ಭಾವನೆಗಳು ಮತ್ತು ಭಾವನೆಗಳ ಒಂದು ಗುಂಪಾಗಿದೆ. ಪ್ರೀತಿಯನ್ನು ಇನ್ನೊಬ್ಬ ವ್ಯಕ್ತಿಗೆ ಬಲವಾದ (strong affection) ಪ್ರೀತಿ ಎಂದು ವ್ಯಾಖ್ಯಾನಿಸಬಹುದು.

ಇದು ಅನ್ಯೋನ್ಯತೆ, ಉತ್ಸಾಹ ಮತ್ತು ಬದ್ಧತೆಯೊಂದಿಗೆ ಭಾವನೆಗಳ ಗುಂಪಾಗಿದೆ. ನಿಜವಾದ ಪ್ರೀತಿ ಎಂದರೆ ಕಾಳಜಿ, ನಿಕಟತೆ, ರಕ್ಷಣೆ, ಆಕರ್ಷಣೆ, ವಾತ್ಸಲ್ಯ ಮತ್ತು ನಂಬಿಕೆ (care, closeness, protectiveness, attraction, affection, & trust). ಗ್ರಹದಲ್ಲಿರುವ ಪ್ರತಿಯೊಂದು ಜೀವಿಯೂ ಪ್ರೀತಿಯನ್ನು ಅನುಭವಿಸುತ್ತದೆ.

ಇದನ್ನು ಓದಿ : ಚಲಿಸುವ ರೈಲಿನ ಬಾಗಿಲ ಹೊರಗೆ ತಲೆ ಹಾಕಿ Video ; ಮುಂದೆನಾಯ್ತು ವಿಡಿಯೋ ನೋಡಿ.!

ಇಲ್ಲಿ ಪ್ರತಿಯ ವಿಷಯ ಯಾಕೆ ಬಂತು ಎನ್ನುತ್ತಿರಾ.? ಅಲ್ಲೆ ಇರೋದು ವಿಷಯ. ಈ ಪ್ರೀತಿ ಅನ್ನೋದು ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಾಗಿಲ್ಲ (Not limited to humans). ಅದು ಪ್ರತಿ ಜೀವಿಗಳಲ್ಲೂ ಇರುತ್ತದೆ. ಈ ಪ್ರೀತಿಯನ್ನು ಮನುಷ್ಯ ಪ್ರಾಣಿಗಳಲ್ಲೂ ಕಾಣಬಹುದೆಂಬುವುದಕ್ಕೆ ಇಲ್ಲಿದೆ ನೋಡಿ ಒಂದು ಜ್ವಲಂತ ಉದಾಹರಣೆ.

ಇಲ್ಲಿ ಮರಿ ಆನೆಯೊಂದು ತನ್ನ ತನ್ನನ್ನು ಸಾಕಿ ಸಲುಹಿದ ಮಾವುತನ್ನು ಬಿಟ್ಟು ಹೋಗದಂತೆ ಹೇಗೆ ಆತನನು ಎಳೆದು ತಂದಿರುವ ಎನ್ನುವ ವಿಡಿಯೋ ವೈರಲ್ (Viral video) ಆಗಿದೆ. ಮರಿ ಆನೆಯನ್ನು ಶಾಂತಗೊಳಿಸಲು ಮಾವುತ ಸಾಕಷ್ಟು ಪ್ರಯತ್ನಿಸುತ್ತಾನೆ. ‌

ಇದನ್ನು ಓದಿ : Astrology : ಡಿಸೆಂಬರ್ 14ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಎಲ್ಲೂ ಹೋಗಬೇಡ ಗೆಳೆಯಾ (Don’t go anywhere, friend.), ನಾವಿಬ್ಬರೂ ಇಲ್ಲಿಯೇ ಇರೋಣ ಎಂದು ಮಾವುತನ ಹಿಂದೆ ಓಡುತ್ತಿರುವ ಮರಿ ಆನೆಯ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಎಲ್ಲಿ, ಯಾವಾಗ ಯಾರು ಚಿತ್ರೀಕರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಆದರೆ ವಿಡಿಯೋ ನೋಡಿದ ಮೇಲೆ ನೀವು ಭಾವುಕರಾಗೋದು ಗ್ಯಾರಂಟಿ.

This baby elephant refuses to let the man who raised him leave
byu/super_man100 inBeAmazed

Astrology : ಡಿಸೆಂಬರ್ 14ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಜೋತಿಷ್ಯ : 2024 ಡಿಸೆಂಬರ್ 14ರ ಶನಿವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.

*ಮೇಷ ರಾಶಿ*
ಮನೆಯ ಹೊರಗೆ ಅನುಕೂಲಕರ ವಾತಾವರಣವಿರುತ್ತದೆ. ಹಳೇ ಗೆಳೆಯರೊಂದಿಗೆ ಮನೆಯಲ್ಲಿ ಸಂತೋಷದಿಂದ ಕಳೆಯುತ್ತೀರಿ. ಹೊಸ ವ್ಯಾಪಾರಗಳು ಪ್ರಾರಂಭವಾಗುತ್ತವೆ, ನಿರುದ್ಯೋಗ ಪ್ರಯತ್ನಗಳು ಉತ್ಸಾಹದಿಂದ ಕೂಡಿರುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಅಧಿಕಾರಿಗಳ ಬೆಂಬಲ ಹೆಚ್ಚಾಗುತ್ತದೆ, ಸಂಗಾತಿಯಿಂದ ಆರ್ಥಿಕ ನೆರವು ದೊರೆಯುತ್ತದೆ.

*ವೃಷಭ ರಾಶಿ*
ಆರೋಗ್ಯ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ. ಕುಟುಂಬ ಸದಸ್ಯರೊಂದಿಗೆ ಮನೆಯಲ್ಲಿ ಸಂತೋಷದಿಂದ ಸಮಯ ಕಳೆಯುತ್ತೀರಿ. ಸಮಾಜದಲ್ಲಿ ಕೀರ್ತಿ ಹೆಚ್ಚಾಗುತ್ತದೆ, ಸೇವಾ ಕಾರ್ಯಕ್ರಮಗಳಿಗೆ ಹಣ ವ್ಯಯವಾಗುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಅನುಕೂಲತೆ ಹೆಚ್ಚಾಗುತ್ತದೆ. ವ್ಯಾಪಾರಗಳು ಲಾಭದಾಯಕವಾಗಿರುತ್ತವೆ.

ಇದನ್ನು ಓದಿ : ಚಲಿಸುವ ರೈಲಿನ ಬಾಗಿಲ ಹೊರಗೆ ತಲೆ ಹಾಕಿ Video ; ಮುಂದೆನಾಯ್ತು ವಿಡಿಯೋ ನೋಡಿ.!

*ಮಿಥುನ ರಾಶಿ*
ಪ್ರಮುಖ ವ್ಯವಹಾರಗಳಲ್ಲಿ ನಿಧಾನ ಒಳ್ಳೆಯದಲ್ಲ, ಕುಟುಂಬದಲ್ಲಿ ಕೆಲವರ ವರ್ತನೆ ಭಾವನಾತ್ಮಕವಾಗಿ
ನೋವುಂಟು ಮಾಡುತ್ತದೆ. ಕೈಗೊಂಡ ಕೆಲಸಗಳಲ್ಲಿ ಅಡೆತಡೆಗಳು ಉಂಟಾಗುತ್ತದೆ. ವೃತ್ತಿಪರ ವ್ಯವಹಾರಗಳು ನಿಧಾನವಾಗುತ್ತವೆ. ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಹರಿಸುವುದು ಉತ್ತಮ. ನಿರುದ್ಯೋಗ ಪ್ರಯತ್ನಗಳು ನಿರಾಶಾದಾಯಕವಾಗಿರುತ್ತವೆ.

*ಕರ್ಕ ರಾಶಿ*
ಹೊಸ ಸಾಲದ ಪ್ರಯತ್ನಗಳನ್ನು ಮಾಡುತ್ತೀರಿ. ದೂರ ಪಯಾಣವನ್ನು ಮುಂದೂಡುವುದು ಉತ್ತಮ. ಕುಟುಂಬ ಸದಸ್ಯರ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗರೂಕರಾಗಿರಿ. ಕೈಗೊಂಡ ಕಾರ್ಯಕ್ರಮಗಳು ಮಧ್ಯದಲ್ಲಿ ನಿಲ್ಲುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿ ಸರ್ಕಾರಿ ಅಧಿಕಾರಿಗಳಿಂದ ಸಮಸ್ಯೆಗಳು ಉದ್ಭವಿಸುತ್ತವೆ. ಉದ್ಯೋಗಿಗಳ ಶ್ರಮ ಹೆಚ್ಚಾಗುತ್ತದೆ.

*ಸಿಂಹ ರಾಶಿ*
ಆದಾಯ ನಿರೀಕ್ಷೆಯಂತೆ ಇರುತ್ತದೆ. ಆಪ್ತ ಸ್ನೇಹಿತರಿಂದ ಶುಭ ಆಹ್ವಾನಗಳು ಬರುತ್ತವೆ. ದೈವಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಸಹೋದರರೊಂದಿಗಿನ ಸ್ಥಿರಾಸ್ತಿ ವಿವಾದಗಳನ್ನು ಪರಿಹಾರದತ್ತ ಸಾಗುತ್ತವೆ. ಹೊಸ ವಾಹನ ಖರೀದಿಸಲಾಗುತ್ತದೆ. ಉದ್ಯೋಗಿಗಳಿಗೆ ಹೆಚ್ಚಿನ ಅವಕಾಶ ಸಿಗುತ್ತದೆ. ವ್ಯಾಪಾರಗಳು ಲಾಭದಾಯಕವಾಗಿರುತ್ತವೆ.

*ಕನ್ಯಾ ರಾಶಿ*
ಕೈಗೆತ್ತಿಕೊಂಡ ಕೆಲಸ ಸ್ವಲ್ಪ ನಿಧಾನವಾಗಿ ಸಾಗುತ್ತವೆ. ಸಣ್ಣ ಆರೋಗ್ಯ ಸಮಸ್ಯೆಗಳಿರುತ್ತವೆ. ಸಹೋದರರೊಂದಿಗೆ ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿರುತ್ತವೆ. ಹಣದ ವಿಷಯದಲ್ಲಿ ಏರಿಳಿತಗಳು ಅಧಿಕವಾಗಿರುತ್ತದೆ. ವ್ಯಾಪಾರಸ್ಥರಿಗೆ ನಿರಾಸೆಯ ವಾತಾವರಣವಿರುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಅಧಿಕಾರಿಗಳೊಂದಿಗೆ ಸಮಸ್ಯೆಗಳು ಹೆಚ್ಚಾಗುತ್ತವೆ. ಸೇವಾ ವಿಶೇಷವಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ.

ಇದನ್ನು ಓದಿ : Astrology : ಡಿಸೆಂಬರ್ 13ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

*ತುಲಾ ರಾಶಿ*
ಹೊಸ ಯೋಜನೆಗಳನ್ನು ಪ್ರಾರಂಭಿಸಿ ಸಕಾಲದಲ್ಲಿ ಪೂರ್ಣಗೊಳಿಸುತ್ತೀರಿ, ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ಬಾಲ್ಯದ ಸ್ನೇಹಿತರಿಂದ ಆರ್ಥಿಕ ಬೆಂಬಲ ದೊರೆಯುತ್ತದೆ. ಸ್ಥಿರ ಆಸ್ತಿಗಳ ಮಾರಾಟದಿಂದ ಲಾಭ ದೊರೆಯುತ್ತದೆ. ಹೊಸ ವ್ಯವಹಾರಗಳಿಗೆ ಹೂಡಿಕೆಗಳು ಬರುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ನಿಮ್ಮ ಮೌಲ್ಯ ಹೆಚ್ಚಾಗುತ್ತದೆ.

*ವೃಶ್ಚಿಕ ರಾಶಿ*
ಪ್ರಯಾಣವನ್ನು ಮುಂದೂಡುವುದು ಉತ್ತಮ. ವೃತ್ತಿಪರ ವ್ಯವಹಾರಗಳು ಸಮಸ್ಯಾತ್ಮಕ ವಾತಾವರಣವನ್ನು ಹೊಂದಿರುತ್ತವೆ. ಉದ್ಯೋಗದಲ್ಲಿ ಅಧಿಕಾರಿಗಳ ಸಮನ್ವಯದ ಕೊರತೆಯಿಂದಾಗಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ವ್ಯರ್ಥ ಖರ್ಚು ಹೆಚ್ಚಾಗುತ್ತದೆ. ಪ್ರಮುಖ ಕೆಲಸಗಳಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲ.

*ಧನು ರಾಶಿ*
ಹಣಕಾಸಿನ ವ್ಯವಹಾರಗಳು ತೃಪ್ತಿಯನ್ನು ನೀಡುತ್ತವೆ, ಕುಟುಂಬ ಸದಸ್ಯರೊಂದಿಗಿನ ವಿವಾದಗಳು ಬಗೆಹರಿಯುತ್ತವೆ. ಆಧ್ಯಾತ್ಮಿಕ ವಿಷಯಗಳತ್ತ ಗಮನ ಹರಿಸುತ್ತೀರಿ. ಹೊಸ ವ್ಯವಹಾರಗಳ ವಿಸ್ತರಣೆಗೆ ಇದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಶ್ರಮಕ್ಕೆ ತಕ್ಕ ಮನ್ನಣೆ ದೊರೆಯುತ್ತದೆ. ನಿರುದ್ಯೋಗ ಪ್ರಯತ್ನಗಳು ಯಶಸ್ವಿಯಾಗುತ್ತವೆ, ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲಾಗುತ್ತದೆ.

*ಮಕರ ರಾಶಿ*
ವೃತ್ತಿಪರ ಉದ್ಯೋಗಗಳಲ್ಲಿ ಅಧಿಕಾರಿಗಳಿಂದ ಶುಭ ಸುದ್ದಿ ದೊರೆಯುತ್ತದೆ. ಎಲ್ಲ ಕಡೆಯಿಂದಲೂ ಆದಾಯ ದೊರೆಯುತ್ತದೆ. ಹಿರಿಯರೊಂದಿಗೆ ಸೌಹಾರ್ದಯುತವಾಗಿ ವರ್ತಿಸಿ ಸಮಾಜದಲ್ಲಿ ಮೆಚ್ಚುಗೆಗೆ ಪಾತ್ರರಾಗುತ್ತೀರಿ. ಹೊಸ ವಾಹನವನ್ನು ಖರೀದಿಸಲಾಗುತ್ತದೆ ಮತ್ತು ವ್ಯಾಪಾರವು ಹೆಚ್ಚು ಅಭಿವೃದ್ಧಿ ಹೊಂದುತ್ತವೆ. ಉದ್ಯೋಗಿಗಳಲ್ಲಿ ತೃಪ್ತಿ ಹೆಚ್ಚಾಗುತ್ತದೆ. ನಿರುದ್ಯೋಗ ಪ್ರಯತ್ನಗಳು ಫಲ ನೀಡುತ್ತವೆ.

ಇದನ್ನು ಓದಿ : ಪತ್ನಿ, ಮೂವರು ಮಕ್ಕಳಿರುವ ವ್ಯಕ್ತಿ ಜೊತೆ 19ರ ಯುವತಿ ಪರಾರಿ.!

*ಕುಂಭ ರಾಶಿ*
ದೂರದ ಬಂಧುಗಳಿಂದ ಅಚ್ಚರಿಯ ವಿಷಯಗಳು ತಿಳಿದು ಬರುತ್ತವೆ. ಕೈಗೆತ್ತಿಕೊಂಡ ಕೆಲಸದಲ್ಲಿ ಅಡೆತಡೆಗಳಿದ್ದರೂ ನಿಧಾನವಾಗಿ ಪೂರ್ಣಗೊಳಿಸುತ್ತೀರಿ. ಖರ್ಚು ವೆಚ್ಚಗಳ ವಿಷಯದಲ್ಲಿ ಮರು ಪರಿಶೀಲಿಸುವುದು ಉತ್ತಮ. ವೃತ್ತಿಪರ ವ್ಯವಹಾರಗಳಲ್ಲಿ, ಶ್ರಮ ಮತ್ತು ವೆಚ್ಚದೊಂದಿಗೆ ಕೆಲಸಗಳು ಪೂರ್ಣಗೊಳ್ಳುವುದಿಲ್ಲ. ಉದ್ಯೋಗಿಗಳಿಗೆ ಹೊಸ ಜವಾಬ್ದಾರಿಗಳು ಹೆಚ್ಚಾಗುತ್ತವೆ.

*ಮೀನ ರಾಶಿ*
ವಾಹನ ಪ್ರಯಾಣದಲ್ಲಿ ಜಾಗ್ರತೆಯಿಂದಿರಿ. ಕುಟುಂಬ ಸದಸ್ಯರು ಆರೋಗ್ಯದ ಬಗ್ಗೆ ಎಚ್ಚರದಿಂದಿರಬೇಕು. ಗೃಹ ನಿರ್ಮಾಣ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗುತ್ತವೆ. ಉದ್ಯಮಿಗಳಿಗೆ ಗೊಂದಲಮಯ ಪರಿಸ್ಥಿತಿ ಇರುತ್ತದೆ. ಉದ್ಯೋಗಗಳಲ್ಲಿ ಸ್ಥಾನ ಚಲನೆ ಸೂಚನೆಗಳಿವೆ, ಹೊಸ ಸಾಲ ತೆಗೆದುಕೊಳ್ಳುವುದು ಒಳ್ಳೆಯದಲ್ಲ.

Disclaimer : ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ಹೀಗಾಗಿ JR ನ್ಯೂಸ್‌ಗೂ, ಈ ಲೇಖನಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರಿಯಲ್ಲ.

ಚಲಿಸುವ ರೈಲಿನ ಬಾಗಿಲ ಹೊರಗೆ ತಲೆ ಹಾಕಿ Video ; ಮುಂದೆನಾಯ್ತು ವಿಡಿಯೋ ನೋಡಿ.!

ಡೆಸ್ಕ್ : ಶ್ರೀಲಂಕಾಕ್ಕೆ ಪ್ರವಾಸಕ್ಕೆ ತೆರಳಿದ್ದ ಯುವತಿಯೊಬ್ಬಳು ರೈಲಿನಲ್ಲಿ ರೀಲ್ಸ್ ಶೂಟ್ ಮಾಡಲು ಹೋಗಿ ಮರಕ್ಕೆ ಡಿಕ್ಕಿಯಾಗಿ ರೈಲಿನಿಂದ ಆಯತಪ್ಪಿ ಬಿದ್ದ ಘಟನೆ ನಡೆದಿದೆ.

ರೈಲಿನಿಂದ ಯುವತಿ ಕೆಳಗೆ ಬೀಳುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನು ಓದಿ : ಪತ್ನಿ, ಮೂವರು ಮಕ್ಕಳಿರುವ ವ್ಯಕ್ತಿ ಜೊತೆ 19ರ ಯುವತಿ ಪರಾರಿ.!

ವಿಡಿಯೋ ಮಾಡಲೆಂದು ಯುವತಿಯು ರೈಲಿನ ಬಾಗಿಲಿನಿಂದ ತನ್ನ ತಲೆಯನ್ನು ಹೊರಗೆ ಬಾಗಿಸಿ ವಿಡಿಯೋ ಮಾಡುತ್ತಿದ್ದಾಳೆ. ಈ ವೇಳೆ ತಲೆಗೆ ದಪ್ಪೆಂದು ಮರವೊಂದು ಬಡಿದ ಪರಿಣಾಮ ಯುವತಿ ರೈಲಿನಿಂದ ಕೆಳಗೆ ಬಿದ್ಸಿದ್ದಾಳೆ.

ಮಾಹಿತಿ ಪ್ರಕಾರ, ರೈಲನ್ನು ಮುಂದಿನ ನಿಲ್ದಾಣದಲ್ಲಿ ನಿಲ್ಲಿಸಿ ಯುವತಿಯನ್ನು ಹುಡುಕಲಾಗಿದೆ. ಯುವತಿ ಪೊದೆಯೊಂದರ ಮೇಲೆ ಬಿದ್ದ ಕಾರಣ ಸುದೈವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಇದನ್ನು ಓದಿ : Astrology : ಡಿಸೆಂಬರ್ 13ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಗೋಸ್ಕರ ಯುವ ಜನತೆ ಪ್ರಾಣ ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದಾರೆ ಎನ್ನುವುದು ವಿಪರ್ಯಾಸ.

Astrology : ಡಿಸೆಂಬರ್ 13ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

0

ಜೋತಿಷ್ಯ : 2024 ಡಿಸೆಂಬರ್ 13ರ ಶುಕ್ರವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.

*ಮೇಷ ರಾಶಿ*
ಹಣಕಾಸಿನ ವ್ಯವಹಾರಗಳು ಅನುಕೂಲಕರವಾಗಿರುತ್ತದೆ. ಹೊಸ ಕಾರ್ಯಕ್ರಮಗಳನ್ನು ಆರಂಭಿಸಲಾಗುತ್ತದೆ. ಸಮಾಜದ ಪ್ರಮುಖ ವ್ಯಕ್ತಿಗಳಿಂದ ಅಪರೂಪದ ಆಹ್ವಾನಗಳು ಬರುತ್ತವೆ. ಕೌಟುಂಬಿಕ ವಿಚಾರಗಳಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ವ್ಯಾಪಾರಗಳು ಅಭಿವೃದ್ಧಿ ಹೊಂದುತ್ತವೆ. ಉದ್ಯೋಗಿಗಳಿಗೆ ಶುಭ ಸುದ್ದಿ ದೊರೆಯುತ್ತದೆ.

*ವೃಷಭ ರಾಶಿ*
ಕುಟುಂಬಸ್ಥರ ವರ್ತನೆ ಅಚ್ಚರಿ ಮೂಡಿಸುತ್ತದೆ, ಪುಣ್ಯಕ್ಷೇತ್ರ ದರ್ಶನ ಪಡೆಯುತ್ತೀರಿ. ಸ್ನೇಹಿತರೊಂದಿಗೆ ಭೋಜನಾ ಮನರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೀರಿ. ಉನ್ನತ ಶಿಕ್ಷಣದ ಪ್ರಯತ್ನಗಳು ಫಲ ನೀಡುತ್ತವೆ. ವ್ಯಾಪಾರ ಉದ್ಯೋಗಗಳಲ್ಲಿ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುತ್ತೀರಿ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು ದೊರೆಯುತ್ತವೆ.

ಇದನ್ನು ಓದಿ : ತನ್ನ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಂದ ನಂತರ ತಾನೂ su**ideಗೆ ಶರಣಾದ ತಾಯಿ.!

*ಮಿಥುನ ರಾಶಿ*
ಬಂಧು ಮಿತ್ರರೊಂದಿಗೆ ವಿನಾಕಾರಣ ವಿವಾದಗಳು ಉಂಟಾಗುತ್ತವೆ. ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತದೆ. ಕುಟುಂಬದ ಸದಸ್ಯರು ನಿಮ್ಮ ಮಾತಿಗೆ ಒಪ್ಪುವುದಿಲ್ಲ. ವೃತ್ತಿಪರ ವ್ಯವಹಾರಗಳಲ್ಲಿ ಸಮಸ್ಯೆಗಳು ಉದ್ಭವಿಸುತ್ತವೆ. ಪ್ರಮುಖ ವಿಷಯಗಳಲ್ಲಿ ವಿಳಂಬ ಉಂಟಾಗುತ್ತದೆ. ಇತರರ ವಿಷಯಗಳಲ್ಲಿ ಹಸ್ತಕ್ಷೇಪ ಮಾಡದಿರುವುದು ಉತ್ತಮ.

*ಕಟಕ ರಾಶಿ*
ಕೈಗೊಂಡ ಕೆಲಸಗಳು ಮಂದಗತಿಯಲ್ಲಿ ಸಾಗುತ್ತವೆ. ಪರಿಸ್ಥಿತಿ ನೀರುತ್ಸಾಹಗೊಳಿಸುತ್ತದೆ. ಮನೆಯ ಹೊರಗೆ ಕಿರಿಕಿರಿಗಳು ಉಂಟಾಗುತ್ತವೆ. ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ನೆಮ್ಮದಿ ಉಂಟಾಗುತ್ತದೆ. ವ್ಯಾಪಾರ ಉದ್ಯೋಗಗಳಲ್ಲಿ ಹೆಚ್ಚುವರಿ ಜವಾಬ್ದಾರಿಗಳಿಂದ ಸಾಕಷ್ಟು ವಿಶ್ರಾಂತಿ ಇರುವುದಿಲ್ಲ. ನಿರುದ್ಯೋಗ ಪ್ರಯತ್ನಗಳು ನಿಧಾನವಾಗುತ್ತವೆ.

*ಸಿಂಹ ರಾಶಿ*
ದೂರದ ಬಂಧುಗಳ ಆಗಮನ ಅಚ್ಚರಿ ಮೂಡಿಸುತ್ತದೆ. ಹಳೆಯ ವಿಷಯಗಳನ್ನು ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಚರ್ಚಿಸುತ್ತೀರಿ. ಮೌಲ್ಯದ ವಸ್ತು ಮತ್ತು ವಾಹನಗಳನ್ನು ಖರೀದಿಸಲಾಗುತ್ತದೆ. ಪ್ರಮುಖ ವ್ಯಕ್ತಿಗಳ ಪರಿಚಯ ಹೆಚ್ಚಾಗುತ್ತದೆ. ಪ್ರಮುಖ ವ್ಯವಹಾರಗಳಲ್ಲಿ ಪ್ರಮುಖ ನಿರ್ಧಾರಗಳನ್ನು ಕಾರ್ಯಗತಗೊಳಿಸಲಾಗುತ್ತದೆ. ವ್ಯಾಪಾರ ಉದ್ಯೋಗಗಳು ಹೆಚ್ಚು ಲಾಭದಾಯಕವಾಗಿರುತ್ತವೆ.

*ಕನ್ಯಾ ರಾಶಿ*
ಹೊಸ ಪರಿಚಯಗಳು ವಿಸ್ತರಣೆಯಾಗುತ್ತವೆ. ಕುಟುಂಬ ಸದಸ್ಯರೊಂದಿಗೆ ಶುಭ ವಿವಾಹ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತೀರಿ. ಆರ್ಥಿಕವಾಗಿ ಹೆಚ್ಚಿನ ಪ್ರಗತಿ ಸಾಧಿಸುತ್ತೀರಿ. ಸ್ನೇಹಿತರೊಂದಿಗೆ ವಿವಾದಗಳಿರುತ್ತವೆ ಮತ್ತು ವೃತ್ತಿಪರ ಉದ್ಯೋಗಗಳಲ್ಲಿ ನಿಮ್ಮ ಮಾತಿಗೆ ಮೌಲ್ಯವು ಹೆಚ್ಚಾಗುತ್ತದೆ. ಮಕ್ಕಳ ವಿದ್ಯಾಭ್ಯಾಸದ ವಿಷಯಗಳಲ್ಲಿ ಶುಭ ಸುದ್ದಿ ದೊರೆಯುತ್ತದೆ.

ಇದನ್ನು ಓದಿ : ಪತ್ನಿ, ಮೂವರು ಮಕ್ಕಳಿರುವ ವ್ಯಕ್ತಿ ಜೊತೆ 19ರ ಯುವತಿ ಪರಾರಿ.!

*ತುಲಾ ರಾಶಿ*
ಕುಟುಂಬ ಸದಸ್ಯರೊಂದಿಗೆ ಕೆಲವು ವ್ಯವಹಾರಗಳಲ್ಲಿ ವಿವಾದಗಳು ಉಂಟಾಗುತ್ತವೆ. ಸಾಲದ ಒತ್ತಡ ಹೆಚ್ಚಾಗುತ್ತದೆ. ಕಠಿಣ ಪರಿಶ್ರಮದಿಂದ ಕೆಲಸಗಳು ನಡೆಯುವುದಿಲ್ಲ. ವೃತ್ತಿಪರ ವ್ಯವಹಾರಗಳು ನಿರುತ್ಸಾಹ ಗೊಳಿಸುತ್ತವೆ. ಆಧ್ಯಾತ್ಮಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ಉದ್ಯೋಗದಲ್ಲಿ ಅಧಿಕಾರಿಗಳೊಂದಿಗಿನ ಚರ್ಚೆ ಫಲಿಸುವುದಿಲ್ಲ.

*ವೃಶ್ಚಿಕ ರಾಶಿ*
ಅಗತ್ಯಕ್ಕೆ ಕೈಯಲ್ಲಿ ಹಣ ಇರುವುದಿಲ್ಲ. ಕೈಗೊಂಡ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗುತ್ತವೆ. ದೂರದ ಸ್ನೇಹಿತರಿಂದ ಪಡೆದ ಮಾಹಿತಿಯು ಭಾವನಾತ್ಮಕ ತೊಂದರೆ ಉಂಟು ಮಾಡುತ್ತದೆ. ವೃತ್ತಿ ಮತ್ತು ಉದ್ಯೋಗಗಳಲ್ಲಿ ಸಮಸ್ಯಾತ್ಮಕ ವಾತಾವರಣವಿರುತ್ತದೆ. ವ್ಯಾಪಾರ ವಿಸ್ತರಣೆಯ ಪ್ರಯತ್ನಗಳು ಮುಂದೂಡಲ್ಪಡುತ್ತವೆ. ವಾಹನದಲ್ಲಿ ಪ್ರಯಾಣಿಸುವಾಗ ಎಚ್ಚರಿಕೆ ವಹಿಸಬೇಕು.

*ಧನುಸ್ಸು ರಾಶಿ*
ಕೈಗೆತ್ತಿಕೊಂಡ ಕಾರ್ಯಗಳು ಸಕಾಲದಲ್ಲಿ ಪೂರ್ಣಗೊಳಿಸುತ್ತೀರಿ. ಸಮಾಜದ ಪ್ರಮುಖ ವ್ಯಕ್ತಿಗಳಿಂದ ಅಪರೂಪದ ಆಹ್ವಾನಗಳು ಬರುತ್ತವೆ. ಹಳೆ ಸಾಲಗಳನ್ನು ಸಂಗ್ರಹಿಸಲಾಗುತ್ತದೆ. ವೃತ್ತಿಪರ ವ್ಯವಹಾರಗಳಲ್ಲಿ ಅನುಕೂಲಕರ ವಾತಾವರಣವಿರುತ್ತದೆ. ನಿರುದ್ಯೋಗಿಗಳಿಗೆ ಶುಭ ಸುದ್ದಿ ದೊರೆಯುತ್ತದೆ. ಆದಾಯದ ಮಾರ್ಗಗಳು ಹೆಚ್ಚಾಗುತ್ತವೆ.

*ಮಕರ ರಾಶಿ*
ಕೈಗೊಂಡ ಕೆಲಸದಲ್ಲಿ ಅಡೆತಡೆಗಳು ಎದುರಾಗುತ್ತವೆ. ವ್ಯರ್ಥ ಖರ್ಚುಗಳ ಬಗ್ಗೆ ಮರುಚಿಂತನೆ ಮಾಡುವುದು ಉತ್ತಮ. ಕುಟುಂಬದ ಸದಸ್ಯರು ಆರೋಗ್ಯದ ವಿಷಯದಲ್ಲಿ ಸ್ವಲ್ಪ ಕಾಳಜಿ ವಹಿಸಬೇಕು. ವ್ಯವಹಾರದಲ್ಲಿ ನಮ್ಮ ಪಾಲುದಾರರೊಂದಿಗೆ ವಿವಾದಗಳು ಉದ್ಭವಿಸುತ್ತವೆ. ಮಕ್ಕಳು ವಿದ್ಯಾಭ್ಯಾಸದತ್ತ ಹೆಚ್ಚಿನ ಗಮನ ಹರಿಸುವುದು ಉತ್ತಮ.

ಇದನ್ನು ಓದಿ : Astrology : ಡಿಸೆಂಬರ್ 12ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

*ಕುಂಭ ರಾಶಿ*
ನಿರುದ್ಯೋಗ ಪ್ರಯತ್ನಗಳು ಅನುಕೂಲಕರವಾಗಿರುತ್ತದೆ. ಹಳೆಯ ಸ್ನೇಹಿತರೊಂದಿಗೆ ದೂರ ಪ್ರಯಾಣ ಮಾಡುತ್ತೀರಿ. ಸಂಬಂಧಿಕರಿಂದ ಅನಿರೀಕ್ಷಿತ ಆಹ್ವಾನ ದೊರೆಯುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಅಡೆತಡೆಗಳನ್ನು ನಿವಾರಿಸಿ, ಬಡ್ತಿ ಪಡೆಯುತ್ತೀರಿ. ಭೋಜನ ಮನರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೀರಿ. ಆರ್ಥಿಕ ಪ್ರಗತಿ ಉಂಟಾಗುತ್ತದೆ.

*ಮೀನ ರಾಶಿ*
ಪ್ರಮುಖ ವಿಷಯಗಳಲ್ಲಿ ಆತುರ ಕೆಲಸ ಮಾಡುವುದಿಲ್ಲ. ಹೊಸ ಸಾಲದ ಪ್ರಯತ್ನಗಳು ಕೂಡಿ ಬರುವುದಿಲ್ಲ. ಎಷ್ಟೇ ದುಡಿದರೂ ಪ್ರತಿಫಲ ದೊರೆಯುವುದಿಲ್ಲ. ಹಠಾತ್ ಪ್ರಯಾಣ ಸೂಚನೆಗಳಿವೆ. ವ್ಯಾಪಾರ ಉದ್ಯೋಗಗಳಲ್ಲಿ ಇತರರಿಂದ ಅನಿರೀಕ್ಷಿತ ತೊಂದರೆಗಳು ಉಂಟಾಗುತ್ತದೆ. ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ.

Disclaimer : ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ಹೀಗಾಗಿ JR ನ್ಯೂಸ್‌ಗೂ, ಈ ಲೇಖನಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರಿಯಲ್ಲ.

ಪತ್ನಿ, ಮೂವರು ಮಕ್ಕಳಿರುವ ವ್ಯಕ್ತಿ ಜೊತೆ 19ರ ಯುವತಿ ಪರಾರಿ.!

0

ಮಂಗಳೂರು : ಇಂದಿನ ಕಾಲಘಟ್ಟದಲ್ಲಿ ಪ್ರೀತಿ ಎನ್ನುವುದು ಅರ್ಥಹೀನವಾಗಿ ಬಿಟ್ಟಿದೆ. ಹುಡುಗಿಯರು ಯಾವುದೋ ಆಮಿಷ ಅಥವಾ ಆಕರ್ಷಣೆಗೆ ಬಲಿಯಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.

ಇತ್ತೀಚಿಗೆ ಸಮಾಜದಲ್ಲಿ ಯುವತಿಯರು ಮುದುಕರನ್ನು ಮದುವೆಯಾಗುವುದು, ಗೃಹಿಣಿಯರು ಶಾಲೆಗೆ ಹೋಗುವ ಹುಡುಗರೊಂದಿಗೆ ಓಡಿಹೋಗುವುದು ಸೇರಿದಂತೆ ಮುಂತಾದ ವಿಚಿತ್ರ ಸನ್ನಿವೇಶಗಳನ್ನು ನಾವು ನೋಡುತ್ತಲೇ ಇದ್ದೇವೆ.

ಇದನ್ನು ಓದಿ : ತನ್ನ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಂದ ನಂತರ ತಾನೂ su**ideಗೆ ಶರಣಾದ ತಾಯಿ.! 

ಆಸೆಗಾಗಿ ಅಥವಾ ಹಣಕ್ಕಾಗಿ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವ ಯುವಕ/ಯುವತಿಯರಿಗೆ ಬುದ್ಧಿ ಬರುವುದು ಯಾವಾಗ..?

ಅದೇನೇ ಇರಲಿ., ಇಲ್ಲಿಯೂ ಅಂತಹದ್ದೇ ಅಚ್ಚರಿಯ ಸಂಗತಿಯೊಂದು ನಡೆದಿರುವ ಬಗ್ಗೆ ವರದಿಯಾಗಿದೆ. ಇದನ್ನು ಕೇಳಿದರೆ ನೀವೂ ಕೂಡ ಶಾಕ್ ಆಗೋದು ಗ್ಯಾರಂಟಿಯೇ. ಮದುವೆಯಾಗಿ ಮೂರು ಮಕ್ಕಳಿರುವ ಗೃಹಸ್ಥನ ಜೊತೆ 19 ವರ್ಷದ ಯುವತಿಯೋರ್ವಳು ಪರಾರಿಯಾಗಿದ್ದಾಳೆ.!

ಇದನ್ನು ಓದಿ : Astrology : ಡಿಸೆಂಬರ್ 12ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಹೌದು., ಅಡೂರಿನ ನಿವಾಸಿ, ನರ್ಸಿಂಗ್ ಓದುತ್ತಿರುವ 19 ವರ್ಷದ ವಿದ್ಯಾರ್ಥಿನಿಯೋರ್ವಳು, ಪತ್ನಿ ಹಾಗೂ ಮೂವರು ಮಕ್ಕಳಿರುವ ನಾಟೆಕಲ್ ಮೂಲದ ವ್ಯಕ್ತಿಯೊಂದಿಗೆ ಓಡಿ ಹೋಗಿದ್ದಾಳೆ. ಆದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಯುವಕನ ಸಂಬಂಧಿಕರ ಮನೆಯಲ್ಲಿ ಇಬ್ಬರು ಪತ್ತೆಯಾಗಿದ್ದಾರೆ.

ಇಬ್ಬರನ್ನು ಠಾಣೆಗೆ ಕರೆತಂದು ವಿಚಾರಿಸಿದಾಗ ಯುವತಿ ಆತನೊಂದಿಗೆಯೇ ಹೋಗುವುದಾಗಿ ಹಠ ಹಿಡಿದಿದ್ದಾಳೆ. ಮೇಲಾಗಿ ಆಕೆಯ ಪೋಷಕರನ್ನು ಠಾಣೆಗೆ ಕರೆಸಿದಾಗಲೂ ಅದೇ ನಿರ್ಧಾರವನ್ನು ವ್ಯಕ್ತಪಡಿಸಿದ್ದಾಳೆ. ಆಕೆಯ ಪ್ರಿಯಕರನ ಬಗ್ಗೆ ವಿಚಾರಿಸಿದಾಗಲೂ ಪತ್ನಿಯ ಒಪ್ಪಿಗೆ ಮೇರೆಗೆ ಯುವತಿಯನ್ನು ಮದುವೆಯಾಗುವುದಾಗಿ ತಿಳಿಸಿದ್ದಾನೆ.

ಇದನ್ನು ಓದಿ : ಪ್ರವಾಸಕ್ಕೆ ಬಂದಿದ್ದ ನಾಲ್ಕು ವಿದ್ಯಾರ್ಥಿನಿಯರು ಸಮುದ್ರದ ಪಾಲು ; ಮೂವರ ರಕ್ಷಣೆ.! 

ಕೊನೆಗೆ ಆ ವ್ಯಕ್ತಿಯೊಂದಿಗೆ ಹೋಗುವುದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಯುವತಿ ಪೋಷಕರು ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.

ಒಟ್ಟಿನಲ್ಲಿ ಈ ವಿಚಿತ್ರ ಘಟನೆ ನೋಡಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.

ತನ್ನ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಂದ ನಂತರ ತಾನೂ su**ideಗೆ ಶರಣಾದ ತಾಯಿ.!

ಬೆಂಗಳೂರು : ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ (suffocating) ಕೊಂದ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಮತ್ತೊಂದು ಭೀಕರ ದುರಂತ ಬೆಂಗಳೂರಿನ ಕೊಡಿಗೇಹಳ್ಳಿ (Kodigehalli) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತನ್ನ ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆಗೆ (suicide) ಶರಣಾದ ತಾಯಿಯನ್ನು ಕುಸುಮಾ (35) ಎಂದು ತಿಳಿದು ಬಂದಿದೆ. ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ.

ಇದನ್ನು ಓದಿ : Astrology : ಡಿಸೆಂಬರ್ 12ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಕೌಟುಂಬಿಕ ಕಲಹದಿಂದ ಬೇಸತ್ತು ಕುಸುಮಾ ಡೆತ್‌ನೋಟ್ (death note) ಬರೆದಿಟ್ಟು ತನ್ನ ಇಬ್ಬರು ಮಕ್ಕಳನ್ನು ಕೊಂದು ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ತಾಯಿ ಕುಸುಮಾ ತನ್ನ 6 ವರ್ಷದ ಮಗು ಹಾಗೂ 7 ವರ್ಷದ ಮಗಳನ್ನು ಹತ್ಯೆಗೈದ ನಂತರ ತಾನೂ ಆತ್ಮಹತ್ಯೆಗೆ ಶರಣಾಗಿದ್ದಳು ಎಂದು ತಿಳಿದು ಬಂದಿದೆ. ಎರಡು ದಿನಗಳ ಹಿಂದೆ ಪತಿಯೊಂದಿಗೆ ಜಗಳವಾಡಿದ್ದ ಕುಸುಮಾ, ಮನನೊಂದು ನಮ್ಮ ಸಾವಿಗೆ ನಾನೇ ಕಾರಣ ಎಂದು ಡೆತ್‌ನೋಟ್ (death note) ನಲ್ಲಿ ಬರೆದು ನೇಣು ಬಿಗಿದುಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ : Astrology : ಡಿಸೆಂಬರ್ 11ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಘಟನಾ ಸ್ಥಳಕ್ಕೆ ಕೊಡಿಗೇಹಳ್ಳಿ ಠಾಣೆ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

error: Content is protected !!