Google search engine
Home Blog Page 18

ತನ್ನ ಬಿಟ್ಟು ಗಂಡನ ಜತೆ ತೆರಳಿದ್ದಕ್ಕೆ ಮಕ್ಕಳ ಎದುರಲ್ಲೇ ಪ್ರಿಯಕರನಿಂದ ಮಹಿಳೆಯ Murder.!

ಚಿಕ್ಕಮಗಳೂರು : ಮರಳಿ ಪತಿಯ ಜೊತೆ ಜೀವನ ನಡೆಸುತ್ತಿದ್ದ ಗೃಹಿಣಿಯನ್ನು ಅವಳ ಮಕ್ಕಳ ಎದುರೇ ಪ್ರಿಯಕರನೇ (Lover) ಹತ್ಯೆಗೈದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕಿಚ್ಚಬ್ಬಿ (Kichabbi) ಗ್ರಾಮದಲ್ಲಿ ಘಟನೆ ನಡೆದಿದೆ.

ಚಾಕುವಿನಿಂದ ಇರಿದ ಪ್ರಿಯಕರನನ್ನು ಚಿರಂಜೀವಿ (Chiranjeevi) ಎಂದು ಹತ್ಯೆಯಾದ ಗೃಹಿಣಿಯನ್ನು ತೃಪ್ತಿ (Trupti) (25) ಎಂದು ತಿಳಿದು ಬಂದಿದೆ. ತೃಪ್ತಿಯನ್ನು ಚಾಕುವಿನಿಂದ ಇರಿದು (stabbing) ಕೊಂದ ನಂತರ ಆಕೆಯ ದೇಹವನ್ನು ಕೃಷಿ ಹೊಂಡಕ್ಕೆ (farm pond) ಎಸೆದು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : ‘ಪುಷ್ಪ 2 ದಿ ರೂಲ್’ : ಎರಡನೇ ದಿನದ ಗಳಿಕೆ ಎಷ್ಟು ; ಯಾವ ನಟರು ಎಷ್ಟು ಕೋಟಿ ಸಂಭಾವನೆ ಪಡೆದರು.?

ತೃಪ್ತಿ ಮತ್ತು ಚಿರಂಜೀವಿ ಫೇಸ್‌ಬುಕ್ (Facebook) ಮೂಲಕ ಭೇಟಿಯಾಗಿ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗಷ್ಟೇ ಒಂದು ತಿಂಗಳ ಹಿಂದೆ ಪತಿ ರಾಜುವನ್ನು ತೊರೆದು ಪ್ರಿಯಕರನ ಜತೆ ತೃಪ್ತಿ ನಾಪತ್ತೆಯಾಗಿದ್ದಳು. ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ (Balehonnur PS) ಠಾಣೆಯಲ್ಲಿ ನಾಪತ್ತೆ ಪ್ರಕರಣವೂ ದಾಖಲಾಗಿತ್ತು.

ಬಿಜಾಪುರದಲ್ಲಿ ತಲೆಮರೆಸಿಕೊಂಡಿದ್ದ (hiding in Bijapur) ತೃಪ್ತಿ ಹಾಗೂ ಆಕೆಯ ಪ್ರಿಯಕರ ಚಿರಂಜೀವಿಯನ್ನು ಪೊಲೀಸರು ಪತ್ತೆ ಮಾಡಿ ಊರಿಗೆ ಕರೆತಂದಿದ್ದರು. ನಂತರ ತೃಪ್ತಿ ತನ್ನ ಪತಿ ರಾಜುವಿನ ಜೊತೆ ಕೂಡಿ ಬಾಳುತ್ತಿದ್ದಳು (living with her husband).

ಇದನ್ನು ಓದಿ : Astrology : ಡಿಸೆಂಬರ್ 07ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಇದರಿಂದ ಕುಪಿತಗೊಂಡ ಚಿರಂಜೀವಿ ತೃಪ್ತಿಯನ್ನು ಕೊಂದು ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಬಾಳೆಹೊನ್ನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ಆರೋಪಿಗಾಗಿ ಪೊಲೀಸರು ಶೋಧ (searching for the accused) ನಡೆಸುತ್ತಿದ್ದಾರೆ.

‘ಪುಷ್ಪ 2 ದಿ ರೂಲ್’ : ಎರಡನೇ ದಿನದ ಗಳಿಕೆ ಎಷ್ಟು ; ಯಾವ ನಟರು ಎಷ್ಟು ಕೋಟಿ ಸಂಭಾವನೆ ಪಡೆದರು.?

ಡೆಸ್ಕ್‌ : ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2 ದಿ ರೂಲ್’ (‘Pushpa 2 The Rule’) ಸಿನಿಮಾ ಸುಮಾರು 3 ಗಂಟೆ 25 ನಿಮಿಷದ ಈ ಚಿತ್ರ ಬ್ಲಾಕ್ ಬಸ್ಟರ್ ಟಾಕ್ (blockbuster talk) ಆಗಿದೆ. ಬಿಡುಗಡೆಗೂ ಮುನ್ನವೇ ಪ್ರೀ ಬುಕ್ಕಿಂಗ್​ನಲ್ಲಿ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.

ಮೊದಲ ದಿನದ ಒಟ್ಟು ಕಲೆಕ್ಷನ್ 294 ಕೋಟಿ ಎಂದು ವರದಿಯಾಗಿದೆ. ಇನ್ನು ಎರಡನೇ ದಿನದ collection Sacnilk ಪ್ರಕಾರ, ಚಿತ್ರದ ಒಟ್ಟು ಕಲೆಕ್ಷನ್ (World wide) 100 ಕೋಟಿ ರೂ. ದಾಟಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಪುಷ್ಪ 2: ದಿ ರೂಲ್ ಕೇವಲ ಎರಡು ದಿನದಲ್ಲಿ ಸುಮಾರು 400 ಕೋಟಿ ಬಾಚಿದೆ.

ಇದನ್ನು ಓದಿ : ಗೂಗಲ್ ಮ್ಯಾಪ್ ನಂಬಿ ಖಾನಾಪುರದ ದಟ್ಟ ಅರಣ್ಯದಲ್ಲೇ ರಾತ್ರಿ ಕಳೆದ ಬಿಹಾರ ಕುಟುಂಬ.!

ಎರಡನೇ ದಿನ, ಪುಷ್ಪ 2: ದಿ ರೂಲ್ ವಿವಿಧ ಭಾಷೆಗಳಲ್ಲಿ ಪ್ರಭಾವಶಾಲಿ ಗಳಿಕೆಯನ್ನು ಕಂಡಿತು. ತೆಲುಗು ಆವೃತ್ತಿ 27.1 ಕೋಟಿ ಗಳಿಸಿದರೆ, ಹಿಂದಿ ಆವೃತ್ತಿ 55 ಕೋಟಿ ಗಳಿಸಿದೆ. ತಮಿಳು ಆವೃತ್ತಿ 5.5 ಕೋಟಿ, ಮಲಯಾಳಂ ಆವೃತ್ತಿ 1.9 ಕೋಟಿ ಮತ್ತು ಕನ್ನಡ ಆವೃತ್ತಿ 60 ಲಕ್ಷ ಗಳಿಕೆ ಮಾಡಿದೆ.

ಗಮನಾರ್ಹವಾಗಿ, ಹಿಂದಿ ಆವೃತ್ತಿಯು ಈಗಾಗಲೇ ಒಟ್ಟು ಗಳಿಕೆಯಲ್ಲಿ (collection) ತೆಲುಗು ಆವೃತ್ತಿಯನ್ನು ಮೀರಿಸಿದೆ, ಹಿಂದಿಯ ಸಂಗ್ರಹವು 125.3 ಕೋಟಿ ರೂಪಾಯಿಗಳಷ್ಟಿದೆ, ತೆಲುಗು ಆವೃತ್ತಿಯಿಂದ 118.05 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ.

ಇದನ್ನು ಓದಿ : Pushpa movie box office collection : ಸೀಕ್ವೆಲ್ ಪುಷ್ಪ – 2ರ ಮೊದಲ ದಿನದ ಗಳಿಕೆ ಎಷ್ಟು ಗೊತ್ತೇ.?

ಶುಕ್ರವಾರ, ಡಿಸೆಂಬರ್ 6, 2024 ರಂದು, ಪುಷ್ಪ: ದಿ ರೂಲ್ – ಭಾಗ 2 ಒಟ್ಟಾರೆ ತೆಲುಗು ಆಕ್ಯುಪೆನ್ಸಿ 53.00% ಅನ್ನು ದಾಖಲಿಸಿದೆ. ಆಕ್ಯುಪೆನ್ಸಿ ದಿನವಿಡೀ ಬದಲಾಗುತ್ತಿತ್ತು, ಬೆಳಗಿನ ಪ್ರದರ್ಶನಗಳು 31.79%, ನಂತರ ಮಧ್ಯಾಹ್ನ 45.53%. ಸಂಜೆಯ ಪ್ರದರ್ಶನಗಳು 61.86% ಕ್ಕೆ ಗಮನಾರ್ಹವಾದ ಜಿಗಿತವನ್ನು ಕಂಡವು ಮತ್ತು ರಾತ್ರಿ ಪ್ರದರ್ಶನಗಳ ಹೊತ್ತಿಗೆ, ಆಕ್ಯುಪೆನ್ಸಿ 72.80% ಕ್ಕೆ ತಲುಪಿತು.

ಪುಷ್ಪ 2 : ದಿ ರೂಲ್ : ಸಿನಿಮಾಗೆ ಯಾವ ನಟರು ಎಷ್ಟು ಕೋಟಿ ಸಂಭಾವನೆ ಪಡೆದಿದ್ದಾರೆ?

ವರದಿಗಳ ಪ್ರಕಾರ, ಅಲ್ಲು ಅರ್ಜುನ್ ರೂ.300 ಕೋಟಿ, ನಿರ್ದೇಶಕ ಸುಕುಮಾರನ್ ರೂ.15 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರೆ. ನಟಿ ರಶ್ಮಿಕಾ ಮಂದಣ್ಣ 10 ಕೋಟಿ ಪಡೆದಿದ್ದರೆ, ಫಹಾದ್ ಫಾಜಿಲ್ 8 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ : Astrology : ಡಿಸೆಂಬರ್ 07ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಸಂಗೀತ ಸಂಯೋಜಕ ದೇವಿ ಶ್ರೀ ಪ್ರಸಾದ್​ 5 ಕೋಟಿ ರೂಪಾಯಿ ಹಾಗೂ ಶ್ರೀಲೀಲಾಗೆ 2 ಕೋಟಿ ನೀಡಲಾಗಿದೆ ಎಂದು ವರದಿಯಾಗಿದೆ. ಪುಷ್ಪ 2 : ದಿ ರೂಲ್  ಸಿನೇಮಾ ಡಿಸೆಂಬರ್ 5 ರಂದು ವಿಶ್ವದಾದ್ಯಂತ ರಿಲೀಸ್ ಆಗಿದೆ.

Astrology : ಡಿಸೆಂಬರ್ 07ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಜೋತಿಷ್ಯ : 2024 ಡಿಸೆಂಬರ್ 07ರ ಶನಿವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.

*ಮೇಷ ರಾಶಿ*
ಯೋಜಿತ ವ್ಯವಹಾರಗಳು ಮುಂದೆ ಸಾಗುವುದಿಲ್ಲ. ಪ್ರಯಾಣದಲ್ಲಿ ಎಚ್ಚರಿಕೆ ವಹಿಸಬೇಕು. ಕೆಲವು ವಿಚಾರಗಳಲ್ಲಿ ಬಂಧು ಮಿತ್ರರೊಂದಿಗೆ ವಿವಾದಗಳು ಉಂಟಾಗುತ್ತವೆ. ಹಣಕಾಸಿನ ಸಮಸ್ಯೆಗಳು ಕಿರಿ ಕಿರಿ ಉಂಟು ಮಾಡುತ್ತವೆ. ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಜಾಗರೂಕರಾಗಿರಿ.

*ವೃಷಭ ರಾಶಿ*
ಸಮಾಜದಲ್ಲಿ ಪ್ರಸಿದ್ಧ ವ್ಯಕ್ತಿಗಳೊಂದಿಗೆ ಸಂಪರ್ಕವು ವಿಸ್ತಾರವಾಗುತ್ತದೆ. ಮನೆಯ ಹೊರಗೆ ನಿಮ್ಮ ಮಾತಿಗೆ ಮೌಲ್ಯ ಹೆಚ್ಚಾಗುತ್ತದೆ. ಬಾಲ್ಯದ ಸ್ನೇಹಿತರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ದೊರೆಯುತ್ತವೆ. ಸಹೋದರರಿಂದ ಆರ್ಥಿಕ ಸಹಾಯ ದೊರೆಯುತ್ತದೆ. ಸ್ಥಿರಾಸ್ತಿ ಖರೀದಿಸುತ್ತೀರಿ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ನಿರೀಕ್ಷಿತ ಬದಲಾವಣೆಗಳಿರುತ್ತವೆ.

ಇದನ್ನು ಓದಿ : Pushpa movie box office collection : ಸೀಕ್ವೆಲ್ ಪುಷ್ಪ – 2ರ ಮೊದಲ ದಿನದ ಗಳಿಕೆ ಎಷ್ಟು ಗೊತ್ತೇ.?

*ಮಿಥುನ ರಾಶಿ*
ಮನೆಯ ಹೊರಗೆ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತವೆ. ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳು ಸಿಗುತ್ತವೆ. ಪ್ರಯಾಣದ ಸಮಯದಲ್ಲಿ ಹೊಸ ಪರಿಚಯವಾಗುತ್ತದೆ. ವಾಹನ ಯೋಗವಿದೆ. ಕೆಲಸದಲ್ಲಿನ ಅಡೆತಡೆಗಳನ್ನು ನಿವಾರಿಸಲಾಗುತ್ತದೆ. ವ್ಯಾಪಾರ ಮತ್ತು ಉದ್ಯೋಗಗಳು ತೃಪ್ತಿಕರವಾಗಿ ಸಾಗುತ್ತವೆ.

*ಕಟಕ ರಾಶಿ*
ಪ್ರಮುಖ ಕೆಲಸಗಳಲ್ಲಿ ವಿಳಂಬ ಉಂಟಾಗುತ್ತದೆ. ಹಣಕಾಸಿನ ವ್ಯವಹಾರಗಳು ನಿರುತ್ಸಾಹಗೊಳಿಸುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಕೆಲಸದ ಒತ್ತಡ ಹೆಚ್ಚಾಗುತ್ತದೆ. ದೂರದ ಬಂಧುಗಳಿಂದ ಅಚ್ಚರಿಯ ವಿಷಯಗಳು ತಿಳಿದು ಬರುತ್ತವೆ. ವ್ಯಾಪಾರಗಳು ಸ್ವಲ್ಪಮಟ್ಟಿಗೆ ಲಾಭ ಪಡೆಯುತ್ತವೆ ಮತ್ತು ಉದ್ಯೋಗಗಳಲ್ಲಿ ಕೆಲಸದ ಒತ್ತಡ ಹೆಚ್ಚಾಗುತ್ತದೆ.

*ಸಿಂಹ ರಾಶಿ*
ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತದೆ. ವ್ಯರ್ಥ ಪ್ರಯಾಣಗಳನ್ನು ಮಾಡಬೇಕಾಗುತ್ತದೆ. ಮನೆಯ ಹೊರಗೆ ಸಮಸ್ಯೆಗಳು ನೋವುಂಟುಮಾಡುತ್ತವೆ. ಆರೋಗ್ಯದ ಕಡೆ ಸ್ವಲ್ಪ ಗಮನ ಹರಿಸಬೇಕು.ಕೈಗೊಂಡ ಕೆಲಸ ಮಧ್ಯದಲ್ಲಿ ನಿಲ್ಲುತ್ತವೆ. ವ್ಯಾಪಾರಗಳು ಸಾಮಾನ್ಯವಾಗಿ ನಡೆಯುತ್ತವೆ. ಉದ್ಯೋಗಗಳು ಸೀಮಿತವಾಗಿರುತ್ತವೆ.

*ಕನ್ಯಾ ರಾಶಿ*
ಕೈಗೆತ್ತಿಕೊಂಡ ಕೆಲಸಗಳು ಸುಗಮವಾಗಿ ಸಾಗುತ್ತವೆ. ಆತ್ಮೀಯರಿಂದ ಅಪರೂಪದ ಆಹ್ವಾನಗಳು ಬರುತ್ತವೆ. ಬಂಧು ಮಿತ್ರರೊಂದಿಗೆ ಸಾಮರಸ್ಯದಿಂದ ವರ್ತಿಸುತ್ತೀರಿ. ಮನೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಖುಷಿಯಿಂದ ಸಮಯ ಕಳೆಯುತ್ತೀರಿ ವ್ಯಾಪಾರಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತವೆ. ಉದ್ಯೋಗಗಳಲ್ಲಿ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಲಾಗುತ್ತದೆ.

ಇದನ್ನು ಓದಿ : ಗೂಗಲ್ ಮ್ಯಾಪ್ ನಂಬಿ ಖಾನಾಪುರದ ದಟ್ಟ ಅರಣ್ಯದಲ್ಲೇ ರಾತ್ರಿ ಕಳೆದ ಬಿಹಾರ ಕುಟುಂಬ.!

*ತುಲಾ ರಾಶಿ*
ಕೈಗೆತ್ತಿಕೊಂಡ ಕೆಲಸಗಳಲ್ಲಿ ಖರ್ಚು-ವೆಚ್ಚಗಳು ಹೆಚ್ಚಾಗುತ್ತವೆ. ಸಂಬಂಧಿಕರೊಂದಿಗೆ ವಾದ ವಿವಾದಗಳಿಂದ ದೂರವಿರುವುದು ಉತ್ತಮ. ನಿರುದ್ಯೋಗಿಗಳಿಗೆ ಶ್ರಮಕ್ಕೆ ತಕ್ಕ ಫಲ ದೊರೆಯುವುದಿಲ್ಲ. ಕುಟುಂಬದ ಸದಸ್ಯರ ವರ್ತನೆಯು ಮಾನಸಿಕ ಕಿರಿಕಿರಿಯನ್ನು ಉಂಟುಮಾಡುತ್ತದೆ. ಪ್ರಮುಖ ವ್ಯವಹಾರಗಳಲ್ಲಿ ಅಡಚಣೆಗಳು ಉಂಟಾಗುತ್ತವೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಹೊಸ ಸಮಸ್ಯೆಗಳು ಉದ್ಭವಿಸುತ್ತವೆ.

*ವೃಶ್ಚಿಕ ರಾಶಿ*
ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ಹಣಕಾಸಿನ ವ್ಯವಹಾರಗಳು ಹೆಚ್ಚು ಉತ್ಸಾಹದಾಯಕವಾಗಿರುತ್ತವೆ. ಸಹೋದರರೊಂದಿಗೆ ಸ್ಥಿರಾಸ್ತಿ ವ್ಯವಹಾರ ಒಪ್ಪಂದಗಳನ್ನು ಮಾಡಿಕೊಳ್ಳುತ್ತೀರಿ. ಖರೀದಿ ಪ್ರಯತ್ನಗಳು ಉತ್ತಮವಾಗಿ ನಡೆಯುತ್ತವೆ. ವೃತ್ತಿಪರ ವ್ಯವಹಾರಗಳು ವಿಸ್ತಾರಗೊಳ್ಳುತ್ತವೆ. ಉದ್ಯೋಗಗಳಲ್ಲಿ ಹೆಚ್ಚು ಉತ್ಸಾಹದಿಂದ ಕೆಲಸ ಮಾಡಿ ಅಧಿಕಾರಿಗಳ ಬೆಂಬಲ ಪಡೆಯುತ್ತೀರಿ.

*ಧನುಸ್ಸು ರಾಶಿ*
ಪ್ರಮುಖ ವ್ಯವಹಾರಗಳು ನಿಧಾನವಾಗುತ್ತವೆ. ಮನೆಯ ಹೊರಗೆ ಆಶ್ಚರ್ಯಕರ ಘಟನೆಗಳು ನಡೆಯುತ್ತವೆ. ಸಹೋದರರೊಂದಿಗೆ ವಿವಾದದ ಸೂಚನೆಗಳಿವೆ. ಹೊಸ ಸಾಲದ ಪ್ರಯತ್ನಗಳು ನಡೆಯುತ್ತವೆ. ಆರೋಗ್ಯದ ವಿಚಾರದಲ್ಲಿ ಹೆಚ್ಚು ಜಾಗರೂಕರಾಗಿರಿ. ಉದ್ಯೋಗಗಳಲ್ಲಿ ಗೊಂದಲಮಯ ಸನ್ನಿವೇಶಗಳಿರುತ್ತವೆ.

*ಮಕರ ರಾಶಿ*
ಯೋಜಿತ ಕೆಲಸಗಳು ಯೋಜನೆಯಂತೆ ನಡೆಯುತ್ತವೆ. ಸ್ನೇಹಿತರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ಹೊಸ ವ್ಯವಹಾರವನ್ನು ಪ್ರಾರಂಭಿಸುವ ಪ್ರಯತ್ನಗಳು ವೇಗಗೊಳ್ಳುತ್ತವೆ. ಸರ್ಕಾರಿ ಅಧಿಕಾರಿಗಳೊಂದಿಗಿನ ಚರ್ಚೆ ಯಶಸ್ವಿಯಾಗುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಪ್ರಮುಖ ಬದಲಾವಣೆಗಳಿರುತ್ತವೆ.

ಇದನ್ನು ಓದಿ : Belagavi : ಪಾರಿವಾಳ ವಿಚಾರವಾಗಿ ಹೊಡೆದಾಟ ; ಇಬ್ಬರು ಅಪ್ರಾಪ್ತರು ಸೇರಿ 9 ಜನರ ಬಂಧನ.!

*ಕುಂಭ ರಾಶಿ*
ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ದೊರೆಯುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ನಿಮ್ಮ ಪ್ರತಿಭೆ ಬೆಳಕಿಗೆ ಬರುತ್ತದೆ. ಸ್ನೇಹಿತರೊಂದಿಗೆ ಸಾಮರಸ್ಯದಿಂದ ವರ್ತಿಸುತ್ತೀರಿ. ವ್ಯಾಪಾರಗಳು ಲಾಭದ ಹಾದಿಯಲ್ಲಿ ಸಾಗುತ್ತವೆ. ಮಕ್ಕಳ ಶೈಕ್ಷಣಿಕ ವಿಷಯಗಳು ತೃಪ್ತಿಕರವಾಗಿ ಮುನ್ನಡೆಯುತ್ತವೆ. ಹಣಕಾಸಿನ ವ್ಯವಹಾರಗಳು ಅನುಕೂಲಕರವಾಗಿರುತ್ತದೆ.

*ಮೀನ ರಾಶಿ*
ಪ್ರಮುಖ ವ್ಯವಹಾರಗಳು ನಿಧಾನವಾಗುತ್ತವೆ. ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ಹೊಸ ಸಾಲದ ಪ್ರಯತ್ನಗಳು ನಡೆಯುತ್ತವೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಒಳ್ಳೆಯದಲ್ಲ, ಉದ್ಯೋಗದಲ್ಲಿ ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ. ಇತರರ ವಿಷಯಗಳಲ್ಲಿ ಹಸ್ತಕ್ಷೇಪ ಮಾಡದಿರುವುದು ಉತ್ತಮ.

Disclaimer : ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ಹೀಗಾಗಿ JR ನ್ಯೂಸ್‌ಗೂ, ಈ ಲೇಖನಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರಿಯಲ್ಲ.

Pushpa movie box office collection : ಸೀಕ್ವೆಲ್ ಪುಷ್ಪ – 2ರ ಮೊದಲ ದಿನದ ಗಳಿಕೆ ಎಷ್ಟು ಗೊತ್ತೇ.?

ನವದೆಹಲಿ : ಅಲ್ಲು ಅರ್ಜುನ್‌ನ ಬಹು ನಿರೀಕ್ಷಿತ ಸೀಕ್ವೆಲ್ ಪುಷ್ಪ 2 (ದಿ ರೂಲ್), ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಸ್ಫೋಟಕ Opening ಮಾಡಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತಿದೊಡ್ಡ ಓಪನಿಂಗ್‌ ಪಡೆದ ಚಿತ್ರ ಇದಾಗಿದ್ದು, ಈ ಹಿಂದೆ ಎಸ್‌.ಎಸ್.ರಾಜಮೌಳಿ (SS Rajamouli) ಅವರ ಆರ್‌ಆರ್‌ಆರ್ (RRR) ದಾಖಲೆಯನ್ನು ಮೀರಿಸಿದೆ.

Saknilk ಪ್ರಕಾರ, ಸುಕುಮಾರ್ ನಿರ್ದೇಶನದ ಮತ್ತು ಮೈತ್ರಿ ಮೂವೀ ಮೇಕರ್ಸ್ (Maithri Movie Makers) ಮತ್ತು Muthamsetty Media ನಿರ್ಮಾಣದ ಆಕ್ಷನ್-ಪ್ಯಾಕ್ಡ್ ಚಿತ್ರ (action-packed film) ವು ತನ್ನ ಆರಂಭಿಕ ದಿನದಲ್ಲಿ 175.1 ಕೋಟಿ ಗಳಿಸಿದೆ. ಈ ಪ್ರಭಾವಶಾಲಿ ಕಲೆಕ್ಷನ್‌ನೊಂದಿಗೆ, ಪುಷ್ಪ 2 RRR ನ 133 ಕೋಟಿ ರೂ. 1 ದಿನದ ಗಳಿಕೆಯನ್ನು ಭಾರಿ ಅಂತರದಿಂದ ಹಿಂದಿಕ್ಕಿದೆ.

ಇದನ್ನು ಓದಿ : ಗೂಗಲ್ ಮ್ಯಾಪ್ ನಂಬಿ ಖಾನಾಪುರದ ದಟ್ಟ ಅರಣ್ಯದಲ್ಲೇ ರಾತ್ರಿ ಕಳೆದ ಬಿಹಾರ ಕುಟುಂಬ.!

ಚಿತ್ರದ ಆರಂಭಿಕ ದಿನದ (opening day) ಗಳಿಕೆಯನ್ನು ಪ್ರಾಥಮಿಕವಾಗಿ ತೆಲುಗು ಆವೃತ್ತಿಯು 95.1 ಕೋಟಿ ಗಳಿಸಿದರೆ, ಹಿಂದಿ ಆವೃತ್ತಿಯು 67 ಕೋಟಿ ಗಳಿಸಿತು. ತಮಿಳು ಆವೃತ್ತಿ 7 ಕೋಟಿ, ಕನ್ನಡ 1 ಕೋಟಿ ಮತ್ತು ಮಲಯಾಳಂ ಆವೃತ್ತಿ 5 ಕೋಟಿ ಗಳಿಸಿದೆ.

ಒಟ್ಟಾರೆಯಾಗಿ, ಚಲನಚಿತ್ರವು ತೆಲುಗಿನಲ್ಲಿ ನಂಬಲಸಾಧ್ಯವಾದ 82.66% ಆಕ್ಯುಪೆನ್ಸಿಯನ್ನು ಕಂಡಿತು, ರಾತ್ರಿಯ ಪ್ರದರ್ಶನಗಳು 90.19% ರಷ್ಟು ಗರಿಷ್ಠ ಆಕ್ಯುಪೆನ್ಸಿಯನ್ನು ತಲುಪಿದವು. ಹಿಂದಿ ಆವೃತ್ತಿಯು 67 ಕೋಟಿ ರೂಪಾಯಿಗಳನ್ನು ತಂದು, ಒಟ್ಟು ಕಲೆಕ್ಷನ್‌ಗೆ ಎರಡನೇ ಅತಿ ಹೆಚ್ಚು ಕೊಡುಗೆ ನೀಡಿದೆ.

ಇದನ್ನು ಓದಿ : Belagavi : ಪಾರಿವಾಳ ವಿಚಾರವಾಗಿ ಹೊಡೆದಾಟ ; ಇಬ್ಬರು ಅಪ್ರಾಪ್ತರು ಸೇರಿ 9 ಜನರ ಬಂಧನ.!

ಪುಷ್ಪ 2 : ದಿ ರೂಲ್, ಈಗ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ (highest-grossing Indian openers) ಮಾಡಿದ ಭಾರತೀಯ ಆರಂಭಿಕರಲ್ಲಿ ಒಂದಾಗಿದೆ, ಮತ್ತು ಚಲನಚಿತ್ರವು ಇನ್ನೂ ವೇಗವನ್ನು ಪಡೆಯುತ್ತಿದೆ, ಆರಂಭಿಕ ಅಂದಾಜಿನ ಪ್ರಕಾರ ವಾರಾಂತ್ಯದ (weekend) ಅಂತ್ಯದ ವೇಳೆಗೆ ಇದು 250 ಕೋಟಿ ರೂಪಾಯಿಗಳನ್ನು ದಾಟಬಹುದು.

ಬಹುನಿರೀಕ್ಷಿತ ಉತ್ತರಭಾಗವು ಕೆಂಪು ಚಂದನದ ಕಳ್ಳಸಾಗಣೆಯ ಕಥೆಯನ್ನು ಮುಂದುವರೆಸಿದ್ದು, ಅಲ್ಲು ಅರ್ಜುನ್ ಪುಷ್ಪಾ ರಾಜ್ (Allu Arjun role as Pushpa Raj) ಪಾತ್ರವನ್ನು ಪುನರಾವರ್ತಿಸುತ್ತಾರೆ. ಜೊತೆಗೆ ರಶ್ಮಿಕಾ ಮಂದಣ್ಣ ಶ್ರೀವಲ್ಲಿ (Rashmika Mandanna as Srivalli) ಮತ್ತು ಫಹಾದ್ ಫಾಸಿಲ್ ಭನ್ವರ್ ಸಿಂಗ್ ಶೇಖಾವತ್ (Fahadh Faasil as Bhanwar Singh Shekhawat) ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಜಗಪತಿ ಬಾಬು, ಧನಂಜಯ, ರಾವ್ ರಮೇಶ್, ಸುನಿಲ್ ಮತ್ತು ಅನಸೂಯಾ ಭಾರದ್ವಾಜ್ ಮುಂತಾದ ಹಿರಿಯ ನಟರು ಇದ್ದಾರೆ.

ಗೂಗಲ್ ಮ್ಯಾಪ್ ನಂಬಿ ಖಾನಾಪುರದ ದಟ್ಟ ಅರಣ್ಯದಲ್ಲೇ ರಾತ್ರಿ ಕಳೆದ ಬಿಹಾರ ಕುಟುಂಬ.!

ಬೆಳಗಾವಿ : ಗೂಗಲ್ ಮ್ಯಾಪ್ (Google Maps) ಆಗಾಗ ಪ್ರಯಾಣಿಕರ ಹಾದಿಯನ್ನು ತಪ್ಪಿಸಿ ಅನಾಹುತ ನಡೆಯುವ ಘಟನೆ ವರದಿಯಾಗುತ್ತಿದೆ. ಈ ನಡುವೆ ಬೆಳಗಾವಿ (Belagavi) ಜಿಲ್ಲೆಯಲ್ಲೂ ಗೂಗಲ್ ಪ್ರಯಾಣಿಕರ ಹಾದಿ ತಪ್ಪಿಸಿದ ಘಟನೆ ಬೆಳಕಿಗೆ ಬಂದಿದೆ.

ರಸ್ತೆ ತಿಳಿಯದೆ ಗೂಗಲ್ ಮ್ಯಾಪ್ ನಂಬಿದ್ದಕ್ಕೆ ಕುಟುಂಬವೊಂದು ಕಾಡಿನಲ್ಲೇ ರಾತ್ರಿ ಕಳೆದ ಘಟನೆ ಬೆಳಗಾಔಇ ಜಿಲ್ಲೆಯ ಖಾನಾಪುರ (Khanapur) ದಲ್ಲಿ ನಡೆದಿದೆ.

ಇದನ್ನು ಓದಿ : Astrology : ಡಿಸೆಂಬರ್ 06ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಬಿಹಾರದ ರಾಜದಾಸ್ ರಣಜಿತ್ ದಾಸ್ ಕುಟುಂಬ (family of Rajdas Ranjit Das from Bihar) ಉಜ್ಜಯಿನಿಯಿಂದ ಗೋವಾ (Ujjain to Goa) ಪ್ರವಾಸಕ್ಕೆ ಹೊರಟಿತ್ತು. ಗೋವಾದಲ್ಲಿ ತಲುಪಬೇಕಿದ್ದ ಸ್ಥಳದ ಲೊಕೇಶನ್ (location) ಹಾಕಿ ಪ್ರಯಾಣ ಬೆಳೆಸಿದ್ದರು.

ಗೂಗಲ್ ಮ್ಯಾಪ್ ಪ್ರಕಾರವೇ ಹೋಗುತ್ತಿದ್ದ ಅವರು ದಾರಿ ಸಾಗಿದಂತೆ ಶಿರೋಲಿ ಮತ್ತು ಹೆಮ್ಮಡಗಾ (Shiroli and Hemmadaga) ಮಾರ್ಗ ಮಧ್ಯದ ಮುಖ್ಯ ರಸ್ತೆಯಿಂದ 7-8 ಕಿಮೀ ಒಳಗೆ ಭೀಮಗಡ ವನ್ಯಧಾಮದ ಅರಣ್ಯ (Bhimgad Wildlife Sanctuary) ದೊಳಗೆ ಹೊಕ್ಕಿದ್ದಾರೆ. ಕಗ್ಗತ್ತಲ ಕಾಡಿನಲ್ಲಿ ಮೊಬೈಲ್ ನೆಟ್‌ವರ್ಕ್ (mobile network) ಸಿಗದೇ ದಟ್ಟ ಅರಣ್ಯದಲ್ಲಿ ಹಾದಿ ತಪ್ಪಿ ಕುಟುಂಬ ಸಿಲುಕಿಕೊಂಡಿದೆ.

ಇದನ್ನು ಓದಿ : Belagavi : ಪಾರಿವಾಳ ವಿಚಾರವಾಗಿ ಹೊಡೆದಾಟ ; ಇಬ್ಬರು ಅಪ್ರಾಪ್ತರು ಸೇರಿ 9 ಜನರ ಬಂಧನ.!

ದಟ್ಟ ಅರಣ್ಯ (dense forest) ದಲ್ಲಿ ಹಾದಿ ತಪ್ಪಿದರೂ ಕಂಗೆಡದ ರಾಜದಾಸ್ ಕುಟುಂಬದ ಎಲ್ಲ ಸದಸ್ಯರಿಗೆ ಧೈರ್ಯ ತುಂಬಿ ರಾತ್ರಿ (Night) ಅಲ್ಲೇ ಕಳೆದಿದ್ದಾರೆ. ಜೀವ ಕೈಯಲ್ಲಿ ಹಿಡಿದು ರಾತ್ರಿ ಕಳೆದ ಕುಟುಂಬ, ಬೆಳಗಾಗುತ್ತಲೇ ತಾವಿದ್ದ ಸ್ಥಳದಿಂದ ಮೂರ್ನಾಲ್ಕು ಕಿಲೋಮೀಟರ್ ಕ್ರಮಿಸಿ, ಮೊಬೈಲ್ ನೆಟ್‌ವರ್ಕ್ ದೊರೆತ ಬಳಿಕ ಅವರು 100 ಸಂಖ್ಯೆಗೆ ಕರೆ ಮಾಡಿ ಪೊಲೀಸ್ ಕಂಟ್ರೋಲ್ ರೂಂ (police control room) ಜತೆ ಸಂಪರ್ಕ ಸಾಧಿಸಿ ವಿಚಾರ ಹೇಳಿದ್ದಾರೆ.

ತಕ್ಷಣ ಕುಟುಂಬದ ಸಹಾಯಕ್ಕೆ ನೆರವಾದ ಖಾನಾಪುರ ಪೊಲೀಸರು (Khanapur Police) ಕುಟುಂಬವನ್ನು ರಕ್ಷಿಸಿದ್ದಾರೆ.

Belagavi : ಪಾರಿವಾಳ ವಿಚಾರವಾಗಿ ಹೊಡೆದಾಟ ; ಇಬ್ಬರು ಅಪ್ರಾಪ್ತರು ಸೇರಿ 9 ಜನರ ಬಂಧನ.!

ಬೆಳಗಾವಿ : ಬೆಳಗಾವಿ ತಾಲೂಕು ಬಸ್ತವಾಡ (Bastawad) ಗ್ರಾಮದ ಜೈನ ಜಾತ್ರೆ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು ಈ ಬಗ್ಗೆ ಹಿರೇಬಾಗೇವಾಡಿ ಹಾಗೂ ಮಾಳ ಮಾರುತಿ ಪೋಲಿಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ (Separate case) ದಾಖಲಾಗಿದ್ದು ಪೊಲೀಸರು ಈ ಸಂಬಂಧ ಒಂಬತ್ತು ಜನರನ್ನು ಬಂಧಿಸಿದ್ದಾರೆ.

ಹಿರೇಬಾಗೇವಾಡಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬಸ್ತವಾಡ ಗ್ರಾಮದಲ್ಲಿ ಜೈನ ಜಾತ್ರೆ ಸಂದರ್ಭದಲ್ಲಿ ಜಾತ್ರೆಗೆ ಬಂದ ಆದಿತ್ಯಾ ಪಾಟೀಲ ಮತ್ತು ದರ್ಶನ ಕುಡಚಿ ಇವರಿಬ್ಬರ ಮಧ್ಯೆ ಪಾರಿವಾಳ (Pigeon) ವಿಷಯದ ಸಲುವಾಗಿ ರೂ.1500/- ಗಳನ್ನು ಕೊಡುವ ಬಗ್ಗೆ ವಾದ- ವಿವಾದ ಉಂಟಾಗಿ ಗಲಾಟೆಯಾಗಿದೆ.

ಇದನ್ನು ಓದಿ : Belagavi : ಬಸ್ ಸೀಟಿಗಾಗಿ ಗಂಡ ಮತ್ತು ಗರ್ಭಿಣಿ ಪತ್ನಿ ಮೇಲೆ ಹಲ್ಲೆ.!

ಆದಿತ್ಯಾ ಪಾಟೀಲ ಹಾಗೂ ಆತನೊಂದಿಗೆ ಇನ್ನೂ 08 ಜನ ಸೇರಿ ದರ್ಶನ ಕುಡಚಿಯನ್ನು ಹೊಡೆದಿದ್ದು, ಈ ವಿಷಯವಾಗಿ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಇದರಲ್ಲಿ ಮೂರು ಆರೋಪಿತರನ್ನು ಹಿರೇಬಾಗೇವಾಡಿ ಪೊಲೀಸರು ದಸ್ತಗೀರ (Arrest) ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ ಕುಡಚಿ ಈತನ ಸಹಚರರು ಕೂಡಿಕೊಂಡು ಇದೇ ಸಿಟ್ಟಿನಿಂದ ಬಸವಣ ಕುಡಚಿಗೆ ಬಂದು ಆದಿತ್ಯಾ ಪಾಟೀಲನ ಮನೆಗೆ ಹೋಗಿ ಆದಿತ್ಯಾ ಎಲ್ಲಿದ್ದಾನೆ ಎಂದು ಆತನ ಸಹೋದರ ಮತ್ತು ತಂದೆಗೆ ಹೊಡೆದು ಗಲಾಟೆ (bother) ಮಾಡಿದ್ದಾರೆ.

ಈ ಬಗ್ಗೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದಲ್ಲಿ ಆರು ಜನ ಆರೋಪಿತರನ್ನು ಮಾಳಮಾರುತಿ ಪೊಲೀಸರು ದಸ್ತಗೀರ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಇವರು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.

ಇದನ್ನು ಓದಿ : ಬೆಳಗಾವಿ : ಪ್ರೀತಿ ವಿಚಾರವಾಗಿ double ಮರ್ಡರ್ ; ಶಾಕ್‌ ಆದ ಜನ.!

ಘಟನೆ ವಿವರ : ದರ್ಶನ್ ಮತ್ತು ಅಪ್ರಾಪ್ತನ ನಡುವೆ ಗಲಾಟೆ ನಡೆದಿದೆ. ಅಪ್ರಾಪ್ತನಿಗೆ ಒಂದೂವರೆ ಸಾವಿರಕ್ಕೆ ಪಾರಿವಾಳ ಮಾರಾಟ ಮಾಡಿದ್ದ ದರ್ಶನ್. ಪಾರಿವಾಳ ಪಡೆದಿದ್ದ ಹಣ ವಾಪಸ್ ಕೊಡುವಂತೆ ದರ್ಶನ್ ಕೇಳಿದ್ದಾನೆ. ಪದೇಪದೆ ಹಣ ಕೇಳಿರುವುದಕ್ಕೆ ಸಿಟ್ಟಿಗೆದ್ದ ಆಪ್ರಾಪ್ತ ಯುವಕ ಬೆದರಿಕೆ ಹಾಕಿದ್ದಾನೆ. ಈ ವಿಚಾರವಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಅಪ್ರಾಪ್ತ ಯುವಕ ತನ್ನ ಸ್ನೇಹಿತರೊಂದಿಗೆ ಸೇರಿ ದರ್ಶನ್ ಎಂಬಾತನಿಗೆ ಮನಸೋ ಇಚ್ಚೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಇದೇ ಸಿಟ್ಟಿಗೆ ರಾತ್ರೋರಾತ್ರಿ ಸಿನಿಮಾ ಸ್ಟೈಲ್‌ನಲ್ಲಿ 15ಕ್ಕೂ ಹೆಚ್ಚು ಸ್ನೇಹಿತರೊಂದಿಗೆ ಬಸವನಕುಡಚಿ ಗ್ರಾಮಕ್ಕೆ ಬಂದಿದ್ದ ದರ್ಶನ್ ಗ್ರಾಮದಲ್ಲಿರುವ ಅಪ್ರಾಪ್ತ ಮನೆಗೆ ನುಗ್ಗಿ ಮನೆ ಧ್ವಂಸ ಮಾಡಲು ಯತ್ನಿಸಿದ್ದಾನೆ. ಅಪ್ರಾಪ್ತ ಯುವಕನ ಮನೆಯಲ್ಲಿದ್ದ ಟಿವಿ, ಕಿಟಕಿ ಗಾಜು ಧ್ವಂಸಗೊಳಿಸಿ ಪಾತ್ರೆಗಳನ್ನು ಚಿಲ್ಲಾಪಿಲ್ಲಿ ಮಾಡಿರುವ ದರ್ಶನ್ ಗ್ಯಾಂಗ್, ಬಳಿಕ ಅಪ್ರಾಪ್ತನ ತಂದೆಗೆ ಬೆದರಿಸಿ ಕೈಗೆ ಹಗ್ಗದಿಂದ ಕಟ್ಟಿ ಮನೆಯಿಂದ ಕರೆದೊಯ್ಯಲು ಯತ್ನಿಸಿದೆ ನಮ್ಮ ಜೊತೆಗೆ ಬಾರದಿದ್ದರೆ ಮನೆಗೆ ಬೆಂಕಿ ಹಚ್ಚುತ್ತೇವೆ ಎಂದು ಬೆದರಿಕೆಯೊಡ್ಡಿದ್ದಾರೆ.

ಇದನ್ನು ಓದಿ : Astrology : ಡಿಸೆಂಬರ್ 06ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಹಿರೇಬಾಗೇವಾಡಿ, ಮಾಳಮಾರುತಿ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ. ಅಪ್ರಾಪ್ತ ಸೇರಿ ಮೂವರನ್ನು ಹಿರೇಬಾಗೇವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇತ್ತ ಮನೆ ಧ್ವಂಸಕ್ಕೆ ಯತ್ನಿಸಿದ 6 ಜನರನ್ನು ಬಂಧಿಸಿ ಮಾಳಮಾರುತಿ ಪೊಲೀಸರು ಜೈಲಿಗಟ್ಟಿದ್ದಾರೆ.

Astrology : ಡಿಸೆಂಬರ್ 06ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಜೋತಿಷ್ಯ : 2024 ಡಿಸೆಂಬರ್ 06ರ ಶುಕ್ರವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.

*ಮೇಷ ರಾಶಿ*
ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ವಿವಾದಗಳಿಂದ ದೂರವಿರುವುದು ಉತ್ತಮ. ವೃತ್ತಿ ವ್ಯವಹಾರದಲ್ಲಿ ಅನಿರೀಕ್ಷಿತ ಅಡೆತಡೆಗಳು ಎದುರಾಗುತ್ತವೆ. ಉದ್ಯೋಗಿಗಳಿಗೆ ಹೆಚ್ಚುವರಿ ಕೆಲಸದ ಹೊರೆ ಇರುತ್ತದೆ ಮತ್ತು ನಿರುದ್ಯೋಗಿಗಳ ಶ್ರಮ ವ್ಯರ್ಥವಾಗುತ್ತವೆ. ಹಣಕಾಸಿನ ಫಲಿತಾಂಶಗಳನ್ನು ನಿರೀಕ್ಷಿಸಿದಂತೆ ಇರುವುದಿಲ್ಲ.

*ವೃಷಭ ರಾಶಿ*
ಬಾಲ್ಯದ ಗೆಳೆಯರ ಆಗಮನ ಸಂತಸ ತರುತ್ತದೆ. ಸ್ಥಿರಾಸ್ತಿ ವಿಷಯಗಳಲ್ಲಿ ಹೊಸ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತದೆ. ವೃತ್ತಿಪರ ವ್ಯವಹಾರಗಳು ಲಾಭದಾಯಕವಾಗಿರುತ್ತವೆ. ಉದ್ಯೋಗಿಗಳಿಗೆ ಸಂಬಳದ ಬಗ್ಗೆ ಶುಭ ಸುದ್ದಿ ದೊರೆಯುತ್ತದೆ. ಸಂಗಾತಿಯೊಂದಿಗೆ ದೈವಿಕ ದರ್ಶನವನ್ನು ಪಡೆಯುತ್ತೀರಿ.

ಇದನ್ನು ಓದಿ : Belagavi : ಬಸ್ ಸೀಟಿಗಾಗಿ ಗಂಡ ಮತ್ತು ಗರ್ಭಿಣಿ ಪತ್ನಿ ಮೇಲೆ ಹಲ್ಲೆ.!

*ಮಿಥುನ ರಾಶಿ*
ಉದ್ಯೋಗದಲ್ಲಿ ನಿಮ್ಮ ಕಾರ್ಯಕ್ಷಮತೆಯಿಂದ ಎಲ್ಲರನ್ನೂ ಮೆಚ್ಚಿಸುತ್ತೀರಿ. ಸ್ನೇಹಿತರ ನೆರವಿನಿಂದ ಸಾಲದ ಸಮಸ್ಯೆಗಳಿಂದ ಹೊರಬರುತ್ತೀರಿ. ಸಹೋದರರೊಂದಿಗಿನ ವಿವಾದಗಳು ಬಗೆಹರಿಯುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿ ಅನುಕೂಲಕರ ವಾತಾವರಣ ಇರುತ್ತದೆ. ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗುತ್ತವೆ.

*ಕಟಕ ರಾಶಿ*
ವೃತ್ತಿಪರ ವ್ಯವಹಾರಗಳು ಹೆಚ್ಚು ನಿರುತ್ಸಾಹ ಗೊಳಿಸುತ್ತವೆ. ಕೈಗೊಂಡ ಕಾರ್ಯಕ್ರಮಗಳು ನಿಧಾನವಾಗಿ ಸಾಗುತ್ತವೆ. ಕೌಟುಂಬಿಕ ವಿಚಾರಗಳಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಉದ್ಯೋಗದ ವಾತಾವರಣವು ಅನುಕೂಲಕರವಾಗಿರುವುದಿಲ್ಲ. ನಿಮ್ಮ ಮಕ್ಕಳ ಆರೋಗ್ಯದ ವಿಷಯದಲ್ಲಿ ಜಾಗ್ರತೆ ವಹಿಸಿ.

*ಸಿಂಹ ರಾಶಿ*
ಹೊಸ ಸಾಲದ ಪ್ರಯತ್ನಗಳು ನಡೆಯುತ್ತವೆ. ಆಪ್ತ ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯಗಳಿರುತ್ತವೆ. ವ್ಯರ್ಥ ಖರ್ಚುಗಳ ಬಗ್ಗೆ ಮರುಪರಿಶೀಲನೆ ಮಾಡಬೇಕು. ಕುಟುಂಬ ಸದಸ್ಯರ ವರ್ತನೆ ನೋವುಂಟು ಮಾಡುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಹೆಚ್ಚುತ್ತಿರುವ ಜವಾಬ್ದಾರಿಗಳಿಂದಾಗಿ, ಸಾಕಷ್ಟು ವಿಶ್ರಾಂತಿ ಇರುವುದಿಲ್ಲ. ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ.

*ಕನ್ಯಾ ರಾಶಿ*
ಯೋಜಿತ ಕಾರ್ಯಗಳು ಯೋಜಿತ ರೀತಿಯಲ್ಲಿ ಪೂರ್ಣಗೊಳ್ಳುತ್ತವೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಹಠಾತ್ ಆರ್ಥಿಕ ಲಾಭ ದೊರೆಯುತ್ತದೆ. ವ್ಯಾಪಾರದಲ್ಲಿ ಹೊಸ ಹೂಡಿಕೆಗಳು ಬರುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಕೆಲಸದ ಒತ್ತಡದಿಂದ ಪರಿಹಾರವನ್ನು ಪಡೆಯುತ್ತೀರಿ. ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ.

ಇದನ್ನು ಓದಿ : ಬೆಳಗಾವಿ : ಪ್ರೀತಿ ವಿಚಾರವಾಗಿ double ಮರ್ಡರ್ ; ಶಾಕ್‌ ಆದ ಜನ.!

*ತುಲಾ ರಾಶಿ*
ನೇತ್ರ ಸಂಬಂಧಿ ಅನಾರೋಗ್ಯ ಸಮಸ್ಯೆಗಳು ನೋವುಂಟು ಮಾಡುತ್ತವೆ. ಬೇರೆಯವರ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಒಳ್ಳೆಯದಲ್ಲ. ಮನೆಯಲ್ಲಿ ಕೆಲವರ ವರ್ತನೆಯಿಂದ ಮಾನಸಿಕ ಅಶಾಂತಿ ಉಂಟಾಗುತ್ತದೆ. ಉದ್ಯೋಗ ವಿಚಾರಗಳಲ್ಲಿ ಅಧಿಕಾರಿಗಳೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸಬೇಕು.

*ವೃಶ್ಚಿಕ ರಾಶಿ*
ಆದಾಯ ಮಾರ್ಗಗಳು ತೃಪ್ತಿಕರವಾಗಿರುತ್ತವೆ. ಮನೆಯ ಹೊರಗೆ ಅನುಕೂಲಕರ ವಾತಾವರಣವಿರುತ್ತದೆ. ಕುಟುಂಬದ ಸದಸ್ಯರ ಸಹಕಾರದಿಂದ ಮಹತ್ವದ ಕಾರ್ಯಕ್ರಮಗಳನ್ನು ಪೂರ್ಣಗೊಲಿಸುತ್ತೀರಿ. ವೃತ್ತಿಪರ ವ್ಯವಹಾರಗಳಲ್ಲಿ ಹೊಸ ಹೂಡಿಕೆಗಳನ್ನು ಸ್ವೀಕರಿಸಲಾಗುತ್ತದೆ. ಉದ್ಯೋಗಿಗಳು ಹೆಚ್ಚುವರಿ ಜವಾಬ್ದಾರಿಗಳಿದ್ದರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತೀರಿ.

*ಧನುಸ್ಸು ರಾಶಿ*
ಸಹೋದರರೊಂದಿಗಿನ ಸ್ಥಿರಾಸ್ತಿ ವಿವಾದಗಳು ಕಿರಿಕಿರಿಯುಂಟುಮಾಡುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿ ಹೆಚ್ಚು ನಿರುತ್ಸಾಹ ವಾತಾವರಣ ಇರುತ್ತದೆ. ನಿರುದ್ಯೋಗಿಗಳು ತಮಗೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಆಧ್ಯಾತ್ಮಿಕ ಸೇವೆಗಳತ್ತ ಗಮನ ಹರಿಸುತ್ತೀರಿ. ವಾಹನದಲ್ಲಿ ಪ್ರಯಾಣಿಸುವಾಗ ಎಚ್ಚರಿಕೆ ವಹಿಸುವುದು ಸೂಕ್ತ.

*ಮಕರ ರಾಶಿ*
ಪ್ರಮುಖ ಕಾರ್ಯಗಳಲ್ಲಿ ಅಪ್ರಯತ್ನ ಕಾರ್ಯ ಸಿದ್ಧತೆ ಉಂಟಾಗುತ್ತದೆ. ಹೊಸ ವಾಹನ ಖರೀದಿಯ ಪ್ರಯತ್ನಗಳು ಫಲ ನೀಡುತ್ತವೆ. ವೃತ್ತಿಪರ ವ್ಯವಹಾರಗಳು ಅಭಿವೃದ್ಧಿ ಹೊಂದಿ ಮುಂದುವರಿಯುತ್ತವೆ. ಹಣಕಾಸಿನ ವ್ಯವಹಾರಗಳು ಆಶಾದಾಯಕವಾಗಿರುತ್ತವೆ. ಅಧಿಕಾರಿಗಳ ಕೃಪಾಕಟಾಕ್ಷದಿಂದ ಉದ್ಯೋಗಿಗಳಿಗೆ ಅನುಕೂಲಕರ ಬದಲಾವಣೆಗಳು ಉಂಟಾಗುತ್ತವೆ.

ಇದನ್ನು ಓದಿ : Astrology : ಡಿಸೆಂಬರ್ 05ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

*ಕುಂಭ ರಾಶಿ*
ನಿರುದ್ಯೋಗಿಗಳ ಕನಸುಗಳು ನನಸಾಗುತ್ತವೆ. ಬಾಲ್ಯದ ಸ್ನೇಹಿತರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ಸ್ಥಿರಾಸ್ತಿ ಮಾರಾಟ ಉತ್ತಮವಾಗಿ ನಡೆಯುತ್ತದೆ. ವ್ಯಾಪಾರಗಳು ಹೆಚ್ಚು ಉತ್ಸಾಹದಿಂದ ಕೆಲಸ ಮಾಡಿ ಲಾಭವನ್ನು ಪಡೆಯುತ್ತೀರಿ. ಕೈಗೊಂಡ ಕಾರ್ಯಗಳು ನಿರಾಯಾಸವಾಗಿ ಪೂರ್ಣಗೊಳ್ಳುತ್ತವೆ.

*ಮೀನ ರಾಶಿ*
ಪ್ರಮುಖ ವ್ಯವಹಾರಗಳನ್ನು ಮುಂದೂಡಬೇಕು. ಬಂಧು ಮಿತ್ರರೊಂದಿಗೆ ವಿನಾಕಾರಣ ವಿವಾದಗಳು ಉಂಟಾಗುತ್ತವೆ. ಹೊಸ ವ್ಯವಹಾರಗಳಲ್ಲಿ ಹೂಡಿಕೆ ಮಾಡುವ ಬಗ್ಗೆ ಮರುಚಿಂತನೆ ಮಾಡುವುದು ಉತ್ತಮ. ಉದ್ಯೋಗಿಗಳಿಗೆ ಸಹೋದ್ಯೋಗಿಗಳೊಂದಿಗೆ ವಿವಾದಗಳು ಉಂಟಾಗುತ್ತವೆ. ವ್ಯರ್ಥ ಖರ್ಚುಗಳು ಹೆಚ್ಚಾಗುತ್ತವೆ.

Disclaimer : ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ಹೀಗಾಗಿ JR ನ್ಯೂಸ್‌ಗೂ, ಈ ಲೇಖನಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರಿಯಲ್ಲ.

ಬೆಳಗಾವಿ : ಪ್ರೀತಿ ವಿಚಾರವಾಗಿ double ಮರ್ಡರ್ ; ಶಾಕ್‌ ಆದ ಜನ.!

ನಿಪ್ಪಾಣಿ : ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಅಕ್ಕೋಳ ಗ್ರಾಮದ (Akkola Village in Nippani Taluk of Belgaum District) ಬಾಳೋಬಾ ಮಾಳ ಪ್ರದೇಶದಲ್ಲಿ ಯುವಕನೋರ್ವ ಸಿಟ್ಟಿನ ಭರದಲ್ಲಿ ಇಬ್ಬರನ್ನು ಭೀಕರವಾಗಿ ಕೊಲೆಗೈದ ಘಟನೆ ನಿನ್ನೆ (ದಿ.04) ರಾತ್ರಿ ನಡೆದಿದೆ.

ತನ್ನ ಪ್ರೀತಿಯನ್ನ ನಿರಾಕರಿಸಿದ (Denied love) ಹಿನ್ನಲೆಯಲ್ಲಿ ಯುವತಿಯ ತಾಯಿ ಮತ್ತು ಯುವತಿಯ ತಮ್ಮನನ್ನು ಹತ್ಯೆ ಮಾಡಲಾಗಿದೆ (The mother of the young woman and the young woman’s brother were killed) ಎಂದು ಹೇಳಲಾಗುತ್ತಿದೆ.

ಇದನ್ನು ಓದಿ : Belagavi : ಬಸ್ ಸೀಟಿಗಾಗಿ ಗಂಡ ಮತ್ತು ಗರ್ಭಿಣಿ ಪತ್ನಿ ಮೇಲೆ ಹಲ್ಲೆ.!

ಪ್ರೀತಿ ವಿಚಾರವಾಗಿ (love matter) ಯುವತಿಯ ತಾಯಿ ಯುವಕನಿಗೆ ಕರೆದು ಬುದ್ಧಿವಾದ (wisdom) ಹೇಳಿದ್ದಳು. ಅದರಿಂದ ಸಿಟ್ಟಿಗೆದ್ದ ಆತ ಯುವತಿಯ ತಾಯಿ ಮಂಗಲ್ ನಾಯಕ (50) ಮತ್ತು ಯುವತಿಯ ತಮ್ಮ ಪ್ರಜ್ವಲ್ ನಾಯಕ (18 ) ಇವರನ್ನು ಕೆಲವರ ಜೊತೆ ಸೇರಿ ಯುವಕ ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ರವಿ ( 32) ಎಂಬ ಯುವಕ ಇತರರ ಜೊತೆ ಸೇರಿ ಇಬ್ಬರನ್ನು ಕೊಲೆಗೈದಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ : ಆನೆ ಮೇಲೆ ಅಂಬಾರಿ ಅಲ್ಲಾ, ಬೈಕ್‌ ಮೇಲೆ ಒಂಟೆ ಸವಾರಿ ; ಈ ವಿಡಿಯೋ ನೋಡಿ.!

ಕೊಲೆ ಆರೋಪದ ಮೇಲೆ ರವಿ ಮತ್ತು ಯುವತಿಯನ್ನು ನಿಪ್ಪಾಣಿ ಪೊಲೀಸರು ವಶಕ್ಕೆ ಪಡೆದಿದ್ದಾರೆ (Nippani police have taken custody) ಎಂದು ತಿಳಿದು ಬಂದಿದೆ. ಈ ಕುರಿತು ನಿಪ್ಪಾಣಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Astrology : ಡಿಸೆಂಬರ್ 05ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಜೋತಿಷ್ಯ : 2024 ಡಿಸೆಂಬರ್ 05ರ ಗುರುವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.

*ಮೇಷ ರಾಶಿ*
ಕೈಗೆತ್ತಿಕೊಂಡ ಕಾರ್ಯಗಳು ಸುಗಮವಾಗಿ ಪೂರ್ಣಗೊಳಿಸುತ್ತೀರಿ.ಮನೆಯಲ್ಲಿ ತಮ್ಮ ಆತ್ಮೀಯ ರೊಂದಿಗೆ ಸಂತೋಷದಿಂದ ಕಳೆಯುತ್ತೀರಿ. ಬಾಲ್ಯದ ಗೆಳೆಯರೊಂದಿಗೆ ಭೋಜನ ಮನರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸುತೀರಿ. ವ್ಯಾಪಾರಗಳು ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಕೆಲಸದ ಒತ್ತಡದಿಂದ ಮುಕ್ತಿ ದೊರೆಯುತ್ತದೆ. ಹೊಸ ಬಟ್ಟೆ ಖರೀದಿಸುತ್ತೀರಿ.

*ವೃಷಭ ರಾಶಿ*
ಹಣಕಾಸಿನ ವ್ಯವಹಾರಗಳು ನಿರಾಶಾದಾಯಕವಾಗಿರುತ್ತವೆ. ಪ್ರಾರಂಭಿಸಿದ ಕೆಲಸಗಳು ಮಂದಗತಿಯಲ್ಲಿ ಸಾಗುತ್ತವೆ. ಕೆಲವು ಸಂದರ್ಭಗಳಲ್ಲಿ ಇತರರೊಂದಿಗೆ ಆತುರದಿಂದ ಮಾತನಾಡುವುದುಒಳ್ಳೆಯ
ದಲ್ಲ. ದೂರ ಪ್ರಯಾಣವನ್ನು ಮುಂದೂಡಲಾಗುತ್ತದೆ. ಮಕ್ಕಳ ಆರೋಗ್ಯ ಸಮಸ್ಯೆಗಳು ಸ್ವಲ್ಪಮಟ್ಟಿಗೆ ನೋವುಂಟು ಮಾಡುತ್ತವೆ. ವ್ಯಾಪಾರಗಳು ಮತ್ತು ಉದ್ಯೋಗಗಳಲ್ಲಿ ನಿರೀಕ್ಷೆಗಳು ಈಡೇರುತ್ತವೆ.

ಇದನ್ನು ಓದಿ : Belagavi : ಬಸ್ ಸೀಟಿಗಾಗಿ ಗಂಡ ಮತ್ತು ಗರ್ಭಿಣಿ ಪತ್ನಿ ಮೇಲೆ ಹಲ್ಲೆ.!

*ಮಿಥುನ ರಾಶಿ*
ಕೈಗೆತ್ತಿಕೊಂಡ ಕೆಲಸಗಳಲ್ಲಿ ಅಡೆತಡೆಗಳು ಎದುರಾಗುತ್ತವೆ. ಮನೆಯ ಹೊರಗೆ ಕೆಲಸದ ಒತ್ತಡ ಹೆಚ್ಚಾಗಿ ತಲೆನೋವು ಉಂಟಾಗುತ್ತದೆ. ಆಧ್ಯಾತ್ಮಿಕ ಸೇವಾ ಕಾರ್ಯಕ್ರಮಗಳತ್ತ ಗಮನ ಹರಿಸುತ್ತೀರಿ. ದೂರ ಪ್ರಯಾಣವನ್ನು ಮುಂದೂಡಲಾಗುತ್ತದೆ. ವೃತ್ತಿಪರವ್ಯವಹಾರಗಳು ಸೀಮಿತಗೊಳ್ಳುತ್ತವೆ. ನಿರುದ್ಯೋಗಿಗಳ ಪ್ರಯತ್ನಗಳು ನಿಧಾನವಾಗುತ್ತವೆ.

*ಕಟಕ ರಾಶಿ*
ಪ್ರಮುಖ ವಿಷಯಗಳಲ್ಲಿ ಆಪ್ತ ಸ್ನೇಹಿತರ ಸಲಹೆಗಳು ಕೂಡಿ ಬರುತ್ತದೆ. ಕೈಗೊಂಡಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಸಹೋದರರಿಂದ ಶುಭ ಆಹ್ವಾನಗಳು ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ವೃತ್ತಿಪರ ವ್ಯವಹಾರದಲ್ಲಿ ನಿರೀಕ್ಷಿತ ಪ್ರಗತಿಸಾಧಿಸಲಾಗುತ್ತದೆ. ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಪ್ರಶಂಸೆ ದೊರೆಯುತ್ತದೆ.

*ಸಿಂಹ ರಾಶಿ*
ಬಂಧುಗಳೊಂದಿಗೆ ವಿವಾದಗಳಿರುತ್ತವೆ. ಹಣಕಾಸಿನ ಪರಿಸ್ಥಿತಿ ಗೊಂದಲಮಯವಾಗಿರುತ್ತದೆ. ಹೊಸ ಸಾಲದ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಕುಟುಂಬ ಸದಸ್ಯರ ಆರೋಗ್ಯ ಸಮಸ್ಯೆಗಳು ಹೆಚ್ಚು ನೋವುಂಟು ಮಾಡುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿ ಪಾಲುದಾರರೊಂದಿಗೆ ವಿವಾದಗಳು ಉದ್ಭವಿಸುತ್ತವೆ. ಹೆಚ್ಚುವರಿ ಹೊಣೆಗಾರಿಕೆಯಿಂದ ಉದ್ಯೋಗಿಗಳಿಗೆ ಸಮರ್ಪಕ ವಿಶ್ರಾಂತಿ ಸಿಗುವುದಿಲ್ಲ.

*ಕನ್ಯಾ ರಾಶಿ*
ಅಗತ್ಯಕ್ಕೆ ತಕ್ಕಂತೆ ಕುಟುಂಬ ಸದಸ್ಯರಿಂದ ಸಹಾಯ ಸಿಗುತ್ತದೆ. ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ. ಸಮುದಾಯದ ಪ್ರಮುಖರಿಂದ ಅಪರೂಪದ ಆಹ್ವಾನಗಳು ಬರುತ್ತವೆ. ಭೂಮಿಗೆ ಸಂಬಂಧಿಸಿದ ಖರೀದಿಗಳು ಮತ್ತು ಮಾರಾಟಗಳು ಕೂಡಿಬರುತ್ತವೆ. ವ್ಯಾಪಾರಗಳು ಕೆಲವು ಅನುಕೂಲಕರ ವಾತಾವರಣವನ್ನು ಹೊಂದಿರುತ್ತವೆ. ಉದ್ಯೋಗಿಗಳು ತಮ್ಮ ಕಾರ್ಯಕ್ಷಮತೆಯಿಂದ ಎಲ್ಲರನ್ನೂ ಮೆಚ್ಚಿಸುವಂಥ ಕೆಲಸವನ್ನು ಮಾಡುತ್ತೀರಾ.

ಇದನ್ನು ಓದಿ : ಆನೆ ಮೇಲೆ ಅಂಬಾರಿ ಅಲ್ಲಾ, ಬೈಕ್‌ ಮೇಲೆ ಒಂಟೆ ಸವಾರಿ ; ಈ ವಿಡಿಯೋ ನೋಡಿ.!

*ತುಲಾ ರಾಶಿ*
ಹೊಸ ಉದ್ಯಮ ಆರಂಭಿಸುವಲ್ಲಿ ಸಮಸ್ಯೆಗಳು ಎದುರಾಗುತ್ತವೆ.
ಸಾಲಗಾರರ ಒತ್ತಡ ಹೆಚ್ಚಾಗುತ್ತದೆ. ಪ್ರಯಾಣದಲ್ಲಿ ವಾಹನ ಅಪಾಯದ ಸೂಚನೆಗಳಿವೆ. ಕುಟುಂಬದಲ್ಲಿ ಕೆಲವರ ವರ್ತನೆ ಅಚ್ಚರಿ ಮೂಡಿಸುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಅನಿರೀಕ್ಷಿತ ಸಮಸ್ಯೆಗಳು ಉಂಟಾಗುತ್ತವೆ. ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಲಾಗುತ್ತದೆ.

*ವೃಶ್ಚಿಕ ರಾಶಿ*
ಸಮಾಜದಲ್ಲಿ ಪ್ರಮುಖ ರೊಂದಿಗಿನ ಪರಿಚಯಗಳು ವಿಸ್ತಾರ. ಮನೆಗೆ ಬಂಧು ಮಿತ್ರರ ಆಗಮನ ಸಂತಸ ತರುತ್ತದೆ. ಆಪ್ತ ಸ್ನೇಹಿತರೊಂದಿಗಿನ ವಿವಾದಗಳು ಬಗೆ ಹರಿಯುತ್ತವೆ. ದೂರದ ಸಂಬಂಧಿಕರಿಂದ ಮಹತ್ವದ ಮಾಹಿತಿ ದೊರೆಯುತ್ತದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಹೆಚ್ಚು ಅನುಕೂಲಕರ ವಾತಾವರಣ ಇರುತ್ತದೆ.

*ಧನಸ್ಸು ರಾಶಿ*
ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು ದೊರೆಯುತ್ತವೆ. ಪ್ರಯಾಣದಲ್ಲಿ ಹೊಸ ವ್ಯಕ್ತಿಗಳ ಭೇಟಿ ಲಾಭದಾಯಕವಾಗಿರುತ್ತದೆ. ಆಪ್ತ ಸ್ನೇಹಿತರಿಂದ ಶುಭ ಸುದ್ದಿ ದೊರೆಯುತ್ತದೆ. ಕೈಗೊಂಡ ಕೆಲಸದಲ್ಲಿ ಯಶಸ್ವಿಯಾಗುತ್ತೀರಿ. ವೃತ್ತಿಪರ ವ್ಯವಹಾರಗಳು ಲಾಭದಾಯಕವಾಗಿರುತ್ತವೆ. ಉದ್ಯೋಗದ ವಾತಾವರಣ ಶಾಂತಿಯುತವಾಗಿರುತ್ತದೆ.

*ಮಕರ ರಾಶಿ*
ಪ್ರಮುಖ ಕಾರ್ಯಗಳು ಮುಂದೂಡಲ್ಪಡುತ್ತವೆ. ಹಠಾತ್ ಪ್ರಯಾಣ ಸೂಚನೆಗಳಿವೆ. ಸಂಗಾತಿಯೊಂದಿಗೆ ದೈವಿಕ ದರ್ಶನಗಳನ್ನು ಪಡೆಯುತ್ತೀರಿ. ವ್ಯರ್ಥ ಖರ್ಚುಗಳು ಹೆಚ್ಚಾಗುತ್ತವೆ. ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಿ. ವೃತ್ತಿಪರ ವ್ಯವಹಾರಗಳು ಸೀಮಿತವಾಗಿರುತ್ತವೆ. ಉದ್ಯೋಗಗಳಲ್ಲಿ ನಿರುತ್ಸಾಹ ವಾತಾವರಣವಿರುತ್ತದೆ.

ಇದನ್ನು ಓದಿ : Astrology : ಡಿಸೆಂಬರ್ 04ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

*ಕುಂಭ ರಾಶಿ*
ಕೈಗೆತ್ತಿಕೊಂಡ ಕೆಲಸಗಳು ಮಂದಗತಿಯಲ್ಲಿ ಸಾಗುತ್ತದೆ. ಕೌಟುಂಬಿಕ ವ್ಯವಹಾರಗಳಲ್ಲಿ ಕೆಲಸದ ಒತ್ತಡ ಹೆಚ್ಚಾಗುತ್ತದೆ. ವೃತ್ತಿಪರ ವ್ಯವಹಾರಗಳಲ್ಲಿ ಆಕಸ್ಮಿತವಾಗಿ ನಿರ್ಧಾರಗಳನ್ನು ಬಡಲಾಯಿಸಿಕೊಳ್ಳಲಾಗುತ್ತದೆ. ದೂರದ ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯಗಳಿರುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿ ಹೊಸ ಹೂಡಿಕೆಗಳ ವಿಷಯದಲ್ಲಿ ಆತುರ ಒಳ್ಳೆಯದಲ್ಲ. ಮಕ್ಕಳ ಶಿಕ್ಷಣ ಉದ್ಯೋಗ ಪ್ರಯತ್ನಗಳು ವಿಫಲಗೊಳ್ಳುತ್ತವೆ.

*ಮೀನ ರಾಶಿ*
ಆಪ್ತರೊಂದಿಗೆ ಅನುಕೂಲತೆಯಿಂದ ವರ್ತಿಸುವಿರಿ. ಮನೆಯ ಹೊರಗೆ ಹೊಸ ಪ್ರೋತ್ಸಾಹ ಸಿಗುತ್ತದೆ. ಆರ್ಥಿಕ ವಾತಾವರಣವು ಅನುಕೂಲಕರವಾಗಿರುತ್ತದೆ. ಹೊಸ ವಸ್ತು ಲಾಭವನ್ನು ಪಡೆಯಲಾಗುತ್ತದೆ. ಬಾಲ್ಯದ ಸ್ನೇಹಿತರಿಂದ ಅಪರೂಪದ ಆಹ್ವಾನಗಳು ಬರುತ್ತವೆ. ವ್ಯಾಪಾರ ವಿಸ್ತರಣೆಯ ಪ್ರಯತ್ನಗಳು ಫಲ ನೀಡುತ್ತವೆ ಮತ್ತು ಉದ್ಯೋಗಿಗಳಲ್ಲಿ ಕೆಲಸದ ಹೊರೆಯಿಂದ ಮುಕ್ತರಾಗುತ್ತೀರಿ.

Disclaimer : ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ಹೀಗಾಗಿ JR ನ್ಯೂಸ್‌ಗೂ, ಈ ಲೇಖನಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರಿಯಲ್ಲ.

Belagavi : ಬಸ್ ಸೀಟಿಗಾಗಿ ಗಂಡ ಮತ್ತು ಗರ್ಭಿಣಿ ಪತ್ನಿ ಮೇಲೆ ಹಲ್ಲೆ.!

ಬೆಳಗಾವಿ : ಬಸ್ ಸೀಟಿಗಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿ ಹಲ್ಲೆಯವರೆಗೂ ಮುಂದುವರೆದಿದ್ದು, ಹೊರಟಿದ್ದ ಬಸ್ ತಡೆದು ಗಂಡ ಹಾಗೂ ಗರ್ಭಿಣಿಗೆ ಅನ್ಯ ಕೋಮಿನ ಯುವಕರ ಗುಂಪು ಮನಸೋ ಇಚ್ಚೆ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ಹುಕ್ಕೇರಿ ತಾಲೂಕಿನ ಮಸರಗುಪ್ಪಿ ಗ್ರಾಮದ ಬಳಿ ಸೋಮವಾರ ರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ.

ಸಂಕೇಶ್ವರ ಬಸ್ ನಿಲ್ದಾಣದಲ್ಲಿ ಗೋಕಾಕಕ್ಕೆ ಹೊರಟಿದ್ದ ಬಸ್‌ನಲ್ಲಿ ಜನಜಂಗುಳಿ ಇತ್ತು. ಈ ಸಂದರ್ಭದಲ್ಲಿ ತನ್ನ ಪತ್ನಿ ಗರ್ಭಿಣಿ ಇದ್ದಾಳೆ ಎನ್ನುವ ಕಾರಣದಿಂದ ಸೀಟು ಹಿಡಿದಿದ್ದ ಪತಿ ಹಾಗೂ ಪಕ್ಕದಲ್ಲಿದ್ದ ಅನ್ಯ ಕೋಮಿನ ಮಹಿಳೆಯರು ಸೀಟಿಗಾಗಿ ತಂಟೆ ತೆಗೆದಿದ್ದರು. ಬಳಿಕ ಬಸ್ಸು ಹೊರಟು ಹುಕ್ಕೇರಿ ತಾಲೂಕಿನ ನೇರ್ಲಿ-ಮಸರಗುಪ್ಪಿ ಗ್ರಾಮದ ನಡುವೆ ಹೋಗುತ್ತಿದ್ದಂತೆ ಜಗಳ ವಿಕೋಪಕ್ಕೆ ಹೋಗಿದೆ.

ಇದನ್ನು ಓದಿ : ಆನೆ ಮೇಲೆ ಅಂಬಾರಿ ಅಲ್ಲಾ, ಬೈಕ್‌ ಮೇಲೆ ಒಂಟೆ ಸವಾರಿ ; ಈ ವಿಡಿಯೋ ನೋಡಿ.!

ಗೋಕಾಕ ತಾಲೂಕಿನ ಒಂದು ಗ್ರಾಮದ ಅನ್ಯ ಕೋಮಿನ ಮಹಿಳೆಯರು ತಮ್ಮ ಮನೆಯವರಿಗೆ ಕರೆ ಮಾಡಿ ಬರಲು ಹೇಳಿದ್ದಾರೆ. ಕರೆ ಮಾಡಿದ ಹಿನ್ನಲೆಯಲ್ಲಿ ಸಿನಿಮೀಯ ರೀತಿಯಲ್ಲಿ ಬಂದು ಬಸ್ಸು ತಡೆದ ಸುಮಾರು 12ರಿಂದ 15 ಜನರಿದ್ದ ಅನ್ಯ ಕೋಮಿನ ಯುವಕರ ತಂಡವು ಬೈಕ್ ಮೇಲೆ ಬಂದು ಮಸರಗುಪ್ಪಿ ಕ್ರಾಸ್ ಬಳಿ ಬಸ್ ಅಡ್ಡಗಟ್ಟಿ ಗರ್ಭಿಣಿ ಮಹಿಳೆ ಹಾಗೂ ಪತಿಗೆ ಮನಸೋ ಇಚ್ಚೆ ಹೊಡೆದಿದ್ದಾರೆ.

ನನ್ನ ತಂದೆ-ತಾಯಿಗೆ ತುಂಬಾ ಹೊಡೆದಿದ್ದಾರೆ ಎಂದು ಕಣ್ಣೀರು ಹಾಕುತ್ತ ಬಸ್ಸಿನಲ್ಲಿದ್ದ ಪ್ರಯಾಣಿಕರ ಮುಂದೆ ಹಲ್ಲೆಗೆ ಒಳಗಾದ ದಂಪತಿಯ ಪುಟ್ಟ ಮಗಳು ಪರಿ ಪರಿಯಾಗಿ ಹೇಳುತ್ತ ತಿರುಗುತ್ತಿದ್ದ ದೃಶ್ಯವಂತೂ ಎಲ್ಲರ ಮನ ಕರಗುವಂತೆ ಮಾಡಿತು.

ಇದನ್ನು ಓದಿ : Astrology : ಡಿಸೆಂಬರ್ 04ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಹುಕ್ಕೇರಿ ತಾಲೂಕಿನ ಮಸರಗುಪ್ಪಿ ಕ್ರಾಸ್ ಬಳಿ ಈ ಘಟನೆ ನಡೆದಿದ್ದು, ಪತಿಯನ್ನು ಯುವಕರು ಹೊಡೆಯುತ್ತಿದ್ದಂತೆ ನನ್ನ ಪತಿಗೆ ಹೊಡೆಯ ಬೇಡಿ ಎಂದು ಬಿಡಿಸಲು ಹೋದ ಪತ್ನಿಗೂ ಹೊಡೆದಿದ್ದಾರೆ. ಆದರೆ ಸಿಟಿಗಾಗಿ ಬಸ್ಸಿನಲ್ಲಿ ಆದ ಒಂದು ಸಣ್ಣ ಜಗಳ ವಿಕೋಪಕ್ಕೆ ತಿರುಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ಮಾತ್ರ ವಿಪರ್ಯಾಸವೇ ಸರಿ.

ಸಂಕೇಶ್ವರ ಪೋಲಿಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

error: Content is protected !!