Google search engine
Home Blog Page 15

ಇಲಿಯ ಕಾರಣದಿಂದಾಗಿ ಪಾರ್ಶ್ವವಾಯುವಿಗೆ ತುತ್ತಾದ ಬಾಲಕಿ ; ಅದ್ಹೇಗೆ ಗೊತ್ತಾ.?

0

ಡೆಸ್ಕ್ : 10ನೇ ಕ್ಲಾಸ್ ವಿದ್ಯಾರ್ಥಿನಿಯೊಬ್ಬಳು ಈ ವರ್ಷದ ಎಂಟು ತಿಂಗಳ ಅವಧಿಯಲ್ಲಿ 15 ಬಾರಿ ಇಲಿಗಳಿಂದ ಆಕಸ್ಮಿಕವಾಗಿ ಕಚ್ಚಿಸಿಕೊಂಡಿದ್ದು, ಪರಿಣಾಮ ಬಲಗಾಲು ಮತ್ತು ಕೈಯಲ್ಲಿ ಪಾರ್ಶ್ವವಾಯುವಿನಿಂದ ಬಳಲುತ್ತಿರುವ ಆತಂಕಕಾರಿ ಘಟನೆ ತೆಲಂಗಾಣದ ಖಮ್ಮಮ್’ನ ದಾನವೈಗುಡೆಮ್ ಹಿಂದುಳಿದ ವರ್ಗಗಳ ಕಲ್ಯಾಣ ಹಾಸ್ಟೆಲ್’ನಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಲಕ್ಷ್ಮಿ ಭವಾನಿ ಕೀರ್ತಿ ಎಂಬ ವಿದ್ಯಾರ್ಥಿನಿಗೆ ಈ ರೀತಿ ಆರೋಗ್ಯ ಸಮಸ್ಯೆ ಎದುರಾಗಿದೆ.

ಇದನ್ನು ಓದಿ : ಬೈಕ್ – ಬೊಲೊರೊ ಡಿಕ್ಕಿ ; ಐವರ ದುರ್ಮರಣ.!

ಆಕೆಗೆ ಪ್ರತಿ ಬಾರಿ ಇಲಿ ಕಚ್ಚಿದಾಗ ರೇಬಿಸ್ ನಿರೋಧಕ ಲಸಿಕೆ ನೀಡಲಾಗುತ್ತಿತ್ತು. ಇಲಿ ಕಡಿತವು ಲಕ್ಷ್ಮಿಯ ಪಾರ್ಶ್ವವಾಯುವಿಗೆ ಕಾರಣವಾಗಿದೆ ಎಂದು ಲಕ್ಷ್ಮಿಯ ಕುಟುಂಬ ಸದಸ್ಯರು ಆರೋಪಿಸಿದ್ದಾರೆ ಎಂದು ವರದಿ ತಿಳಿಸಿದೆ.

ಮಾಜಿ ಸಚಿವ ಪುವ್ವಾಡಾ ಅಜಯ್ ಕುಮಾರ್ ಅವರ ನಿರ್ದೇಶನದ ಮೇರೆಗೆ ವಿದ್ಯಾರ್ಥಿನಿ ಪ್ರಸ್ತುತ ಮಮತಾ ಜನರಲ್ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಕುಟುಂಬದವರು ಹೇಳಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ : Astrology : ಡಿಸೆಂಬರ್ 18ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಚಿಕಿತ್ಸೆ ನೀಡುತ್ತಿರುವ ವೈದ್ಯರು ಮಾತನಾಡಿದ್ದು, ಲಕ್ಷ್ಮಿ ಸ್ಥಿತಿ ಸುಧಾರಿಸುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ, ಆದರೆ ಇನ್ನೂ ಆಕೆ ನರವೈಜ್ಞಾನಿಕ ಸಮಸ್ಯೆಗಳಿಂದ ಬಳಲುತ್ತಿದ್ದಾಳೆ ಎಂದು ತಿಳಿಸಿದ್ದಾರೆ.

ಬೈಕ್ – ಬೊಲೊರೊ ಡಿಕ್ಕಿ ; ಐವರ ದುರ್ಮರಣ.!

ಕೋಲಾರ : ಕೋಲಾರ ನಗರದ ಮುಳಬಾಗಿಲಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ದ್ವಿಚಕ್ರ ವಾಹನ ಮತ್ತು ಬೊಲೊರೊ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಐವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಕೋಲಾರದ ಮುಂಬಾಗಿಲು ವಡ್ಡಹಳ್ಳಿಯ  ಕೋಣನಗುಂಟೆ ಬಳಿ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುತ್ತಿದ್ದ ಬೊಲೊರೊ ಚಾಲಕ ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ.   ಅಪಘಾತದಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನು ಓದಿ : ಹುಬ್ಬಳ್ಳಿ-ಪುಣೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಘಟಪ್ರಭಾ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ.!

ಮೃತರನ್ನು ಮುಳಬಾಗಲು ತಾಲ್ಲೂಕಿನ ನಾಗನಹಳ್ಳಿಯ ವೆಂಕಟರಾಮಪ್ಪ (50) ಹಾಗೂ ಗಾಯತ್ರಿ (43) ದಂಪತಿಗಳು. ಕೋನಂಗುಂಟೆ ಗ್ರಾಮದ ವೆಂಕಟರಾಮಪ್ಪ (40) ಹಾಗೂ ಅಲುವೇಲಮ್ಮ (30) ದಂಪತಿಗಳು ಹಾಗೂ ಕೋನಂಗುಂಟೆ ಗ್ರಾಮದ ರಾಧಮ್ಮ ಮತ್ತೊರ್ವ ಮಹಿಳೆ ಸಾವನ್ನಪ್ಪಿದ್ದಾರೆ.

ಇನ್ನು ಬುಲೆರೊ ವಾಹನದಲ್ಲಿದ್ದ ಓರ್ವ ವ್ಯಕ್ತಿ ಗಾಯಗೊಂಡಿದ್ದು, ಅವರನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇದನ್ನು ಓದಿ : Astrology : ಡಿಸೆಂಬರ್ 18ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.! 

ಸ್ಥಳಕ್ಕೆ ನಂಗಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Astrology : ಡಿಸೆಂಬರ್ 18ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಜೋತಿಷ್ಯ : 2024 ಡಿಸೆಂಬರ್ 18ರ ಬುಧವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.

*ಮೇಷ ರಾಶಿ*
ಹೊಸ ಕೆಲಸಗಳನ್ನು ಆರಂಭಿಸುತ್ತೀರಿ. ಆತ್ಮೀಯ ಸ್ನೇಹಿತರೊಂದಿಗೆ ಭೋಜನ ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ವಾಹನ ವ್ಯವಹಾರಗಳು ಲಾಭದಾಯಕವಾಗಿರುತ್ತವೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಅಧಿಕಾರಿಗಳೊಂದಿಗೆ ಪ್ರಮುಖ ವಿಷಯಗಳನ್ನು ಚರ್ಚಿಸಿ ನಿಮ್ಮ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತೀರಿ.

*ವೃಷಭ ರಾಶಿ*
ಕೆಲವು ವಿಚಾರಗಳಲ್ಲಿ ಮಿತ್ರರೊಂದಿಗೆ ವಿವಾದ ಉಂಟಾಗುತ್ತದೆ. ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಬೇಕು. ಪ್ರಯಾಣದ ಸಮಯದಲ್ಲಿ ವಾಹನ ತೊಂದರೆಗಳು ಉಂಟಾಗುತ್ತವೆ. ಆಧ್ಯಾತ್ಮಿಕ ವಿಷಯಗಳ ಮೇಲೆ ಕೇಂದ್ರೀಕರಿಸುತ್ತೀರಿ. ವೃತ್ತಿಪರ ವ್ಯವಹಾರಗಳು ನಿಧಾನವಾಗುತ್ತವೆ. ನಿರುದ್ಯೋಗಿಗಳ ಶ್ರಮ ವ್ಯರ್ಥವಾಗುತ್ತವೆ.

ಇದನ್ನು ಓದಿ : ಹುಬ್ಬಳ್ಳಿ-ಪುಣೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಘಟಪ್ರಭಾ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ.!

*ಮಿಥುನ ರಾಶಿ*
ಸಮಾಜದ ಪ್ರಮುಖ ವ್ಯಕ್ತಿಗಳಿಂದ ಸಹಾಯ ಸಹಕಾರ ಪಡೆಯುತ್ತೀರಿ. ಪ್ರಮುಖ ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ, ಹೊಸ ಸಾಲದ ಪ್ರಯತ್ನಗಳು ಕೂಡಿ ಬರುತ್ತವೆ. ಮೌಲ್ಯದ ವಸ್ತು ಮತ್ತು ವಾಹನಗಳನ್ನು ಖರೀದಿಸಲಾಗುತ್ತದೆ. ದೈವಿಕ ಸೇವಾ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತೀರಿ. ವ್ಯಾಪಾರ ಉದ್ಯೋಗಗಳು ಲಾಭದಾಯಕವಾಗಿರುತ್ತವೆ.

*ಕಟಕ ರಾಶಿ*
ದೂರ ಪ್ರಯಾಣದಲ್ಲಿ ಹೊಸ ವ್ಯಕ್ತಿಗಳ ಪರಿಚಯ ಉತ್ಸಾಹದಾಯಕವಾಗಿರುತ್ತದೆ. ಉದ್ಯೋಗಿಗಳಿಗೆ ಶುಭ ಸುದ್ದಿ ಸಿಗುತ್ತದೆ. ಸಮಾಜದಲ್ಲಿ ಗೌರವಕ್ಕೆ ಕೊರತೆ ಇರುವುದಿಲ್ಲ. ಸ್ಥಿರಾಸ್ತಿ ವ್ಯವಹಾರದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ವೃತ್ತಿಪರ ವ್ಯವಹಾರಗಳು ಹೆಚ್ಚು ಉತ್ಸಾಹದಾಯಕವಾಗಿರುತ್ತವೆ. ಆರ್ಥಿಕ ಪರಿಸ್ಥಿತಿಗಳು ಸ್ವಲ್ಪ ಉತ್ತಮವಾಗಿರುತ್ತದೆ.

*ಸಿಂಹ ರಾಶಿ*
ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಒಳ್ಳೆಯದಲ್ಲ. ಕೈಗೆತ್ತಿಕೊಂಡ ಕಾರ್ಯಗಳು ಮಧ್ಯದಲ್ಲಿ ಮುಂದೂಡಲ್ಪಡುತ್ತವೆ. ವ್ಯಾಪಾರ-ವ್ಯವಹಾರಗಳು ಸುಗಮವಾಗಿ ಸಾಗುತ್ತವೆ. ಕುಟುಂಬ ಸದಸ್ಯರೊಂದಿಗೆ ಸಣ್ಣಪುಟ್ಟ ವಿವಾದಗಳು ಉಂಟಾಗುತ್ತವೆ. ದೈವಿಕ ದರ್ಶನ ಪಡೆಯುತ್ತೀರಿ. ವೃತ್ತಿ ಉದ್ಯೋಗಗಳು ಸುಗಮವಾಗಿ ಸಾಗುತ್ತವೆ.

*ಕನ್ಯಾ ರಾಶಿ*
ದೂರದ ಸಂಬಂಧಿಕರಿಂದ ಆಸಕ್ತಿದಾಯಕ ವಿಷಯಗಳನ್ನು ಸಂಗ್ರಹಿಸುತ್ತೀರಿ. ಕೈಗೆತ್ತಿಕೊಂಡ ಕೆಲಸ ನಿಧಾನವಾಗುತ್ತದೆ. ಹೊಸ ಸಾಲದ ಪ್ರಯತ್ನಗಳು ಸ್ವಲ್ಪ ಪ್ರಯತ್ನದಿಂದ ಪೂರ್ಣಗೊಳ್ಳುತ್ತವೆ. ಆಪ್ತರೊಂದಿಗೆ ವಿವಾದಗಳಿರುತ್ತವೆ. ಕೆಲವು ವ್ಯವಹಾರಗಳಲ್ಲಿ ನಿರ್ಧಾರಗಳು ಸ್ಥಿರವಾಗಿರುವುದಿಲ್ಲ ಮತ್ತು ವೃತ್ತಿಪರ ಉದ್ಯೋಗಗಳಲ್ಲಿ ಅಡೆತಡೆಗಳು ಉಂಟಾಗುತ್ತವೆ.

ಇದನ್ನು ಓದಿ : ‘ಗ್ರೈಂಡರ್’ಗೆ ಸಿಲುಕಿ ಯುವಕನ ಸಾವು ; ವಿಡಿಯೋ ವೈರಲ್.!

*ತುಲಾ ರಾಶಿ*
ಸಮಾಜದಲ್ಲಿ ಹಿರಿಯರಿಂದ ವಿಶೇಷ ಬೆಂಬಲ ಸಿಗುತ್ತದೆ. ಪ್ರಮುಖ ವಿಷಯಗಳಲ್ಲಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು. ರಿಯಲ್ ಎಸ್ಟೇಟ್ ಕ್ಷೇತ್ರನವರು ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಕೈಗೆತ್ತಿಕೊಂಡ ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ವೃತ್ತಿ ಮತ್ತು ಉದ್ಯೋಗಗಳಲ್ಲಿ ಪ್ರಗತಿ ಉಂಟಾಗುತ್ತದೆ.

*ವೃಶ್ಚಿಕ ರಾಶಿ*
ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ದೀರ್ಘಕಾಲದ ವಿವಾದಗಳು ಬಗೆಹರಿಯುತ್ತವೆ. ನಿಗದಿತ ಸಮಯಕ್ಕೆ ಯೋಜಿತ ಕೆಲಸಗಳು ಪೂರ್ಣಗೊಳ್ಳುತ್ತವೆ. ವೃತ್ತಿ ವ್ಯವಹಾರ ಸುಗಮವಾಗಿ ಸಾಗುತ್ತದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ಮೇಲಧಿಕಾರಿಗಳೊಂದಿಗಿನ ಸಮಸ್ಯೆಗಳನ್ನು ನಿವಾರಿಸಿ ಮುನ್ನಡೆಯುತ್ತೀರಿ.

*ಧನುಸ್ಸು ರಾಶಿ*
ಮಕ್ಕಳ ಸಂಬಂಧಿತ ಸಮಸ್ಯೆಗಳು ಬಗೆಹರಿಯುತ್ತವೆ. ಆರ್ಥಿಕ ವ್ಯವಹಾರಗಳು ನಿಧಾನವಾಗುತ್ತವೆ ಮತ್ತು ಪ್ರಮುಖ ಕೆಲಸಗಳು ನಿಧಾನವಾಗುತ್ತವೆ. ಹಠಾತ್ ಪ್ರಯಾಣ ಸೂಚನೆಗಳಿವೆ. ಕುಟುಂಬ ಸದಸ್ಯರೊಂದಿಗೆ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ವೃತ್ತಿಪರ ಉದ್ಯೋಗಗಳಲ್ಲಿ ಸಣ್ಣ ಸಮಸ್ಯೆಗಳಿರುತ್ತವೆ.

*ಮಕರ ರಾಶಿ*
ಕೈಗೆತ್ತಿಕೊಂಡ ಕಾರ್ಯಗಳು ಸುಗಮವಾಗಿ ಸಾಗುತ್ತವೆ. ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ದೂರದ ಸಂಬಂಧಿಕರಿಂದ ಪಡೆದ ಮಾಹಿತಿಯು ಸ್ವಲ್ಪಮಟ್ಟಿಗೆ ನಿರುತ್ಸಾಹಗೊಳಿಸುತ್ತದೆ. ಕುಟುಂಬ ಸದಸ್ಯರಿಂದ ಒತ್ತಡ ಹೆಚ್ಚಾಗುತ್ತದೆ. ವ್ಯಾಪಾರ ಉದ್ಯೋಗಗಳಲ್ಲಿ ಅಧಿಕಾರಿಗಳೊಂದಿಗೆ ಸಮಸ್ಯೆಗಳು ಉಂಟಾಗುತ್ತದೆ.

ಇದನ್ನು ಓದಿ : Astrology : ಡಿಸೆಂಬರ್ 17ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

*ಕುಂಭ ರಾಶಿ*
ಹೊಸ ಕಾರ್ಯಕ್ರಮಗಳನ್ನು ಆರಂಭಿಸಿ ನಿಗದಿತ ಸಮಯಕ್ಕೆ ಪೂರ್ಣಗೊಳಿಸುತ್ತೀರಿ. ಸಂಬಂಧಿಕರೊಂದಿಗೆ ಸಾಮರಸ್ಯದಿಂದ ವರ್ತಿಸುತ್ತೀರಿ. ಸ್ನೇಹಿತರ ಸಲಹೆ ಮೇರೆಗೆ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುತ್ತೀರಿ. ಸಹೋದರರೊಂದಿಗೆ ಸ್ಥಿರಾಸ್ತಿ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತದೆ. ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲಾಗುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿನ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ.

*ಮೀನ ರಾಶಿ*
ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತದೆ. ಕೆಲವು ವಿಚಾರಗಳಲ್ಲಿ ಆತ್ಮೀಯರೊಂದಿಗೆ ವಾದ ವಿವಾದಗಳು ಉಂಟಾಗುತ್ತವೆ. ಸಾಲಗಾರರಿಂದ ಒತ್ತಡ ಹೆಚ್ಚಾಗುತ್ತದೆ. ದೂರ ಪ್ರಯಾಣವನ್ನು ಮುಂದೂಡಲಾಗುತ್ತದೆ. ಆರೋಗ್ಯದ ವಿಚಾರದಲ್ಲಿ ಹೆಚ್ಚು ಜಾಗರೂಕರಾಗಿರಿ. ಕೈಗೆತ್ತಿಕೊಂಡ ಕೆಲಸಗಳಲ್ಲಿ ವಿಳಂಬ ಊಂಟಾಗುತ್ತದೆ. ವ್ಯಾಪಾರದಲ್ಲಿ ಸಣ್ಣ ನಷ್ಟಗಳು ಉಂಟಾಗುತ್ತವೆ.

Disclaimer : ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ಹೀಗಾಗಿ JR ನ್ಯೂಸ್‌ಗೂ, ಈ ಲೇಖನಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರಿಯಲ್ಲ.

ಹುಬ್ಬಳ್ಳಿ-ಪುಣೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಘಟಪ್ರಭಾ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ.!

0

ಬೆಳಗಾವಿ : ಹುಬ್ಬಳ್ಳಿ-ಪುಣೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಘಟಪ್ರಭಾ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಮಾಡಲು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರು ಆದೇಶಿಸಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.

ಇತ್ತಿಚಿಗೆ ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವರನ್ನು ಭೇಟಿಯಾಗಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಬೆಳಗಾವಿಯನ್ನು ಹೊರತು ಪಡಿಸಿದರೆ ನೇರವಾಗಿ ಮಹಾರಾಷ್ಟ್ರದ ಮೀರಜ ಮತ್ತು ಸಾಂಗ್ಲಿ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ನೀಡಲಾಗಿದೆ.‌

ಜಿಲ್ಲೆಯ ಅತ್ಯಂತ ಮಧ್ಯವರ್ತಿ ಸ್ಥಳವಾಗಿರುವ ಘಟಪ್ರಭಾ ಹಲವಾರು ತಾಲೂಕುಗಳ ಕೇಂದ್ರ ಸ್ಥಾನವಾಗಿದ್ದು ಹಾಗೂ ಅಮೃತ ಭಾರತ ಯೋಜನೆಯಡಿ ನವೀಕರಣಗೊಂಡ ರೈಲು ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಲಾಗಿತ್ತು.

ಇದನ್ನು ಓದಿ : ‘ಗ್ರೈಂಡರ್’ಗೆ ಸಿಲುಕಿ ಯುವಕನ ಸಾವು ; ವಿಡಿಯೋ ವೈರಲ್.!

ನನ್ನ ಮನವಿಗೆ ಸ್ಪಂದಿಸಿ ಶೀಘ್ರವಾಗಿ ರೈಲು ನಿಲುಗಡೆ ಆದೇಶ ನೀಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ, ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ ಹಾಗೂ ಸಹಕಾರ ನೀಡಿದ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ ಜೋಶಿ ಅವರುಗಳಿಗೆ ಈ ಭಾಗದ ಜನತೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.

ಶೀಘ್ರದಲ್ಲಿ ರೈಲು ನಿಲುಗಡೆಗೆ ದಿನಾಂಕ ತಿಳಿಸಲಾಗುವುದು ಎಂದು ಸಂಸದ ಈರಣ್ಣ ಕಡಾಡಿ ಹೇಳಿದ್ದಾರೆ.

‘ಗ್ರೈಂಡರ್’ಗೆ ಸಿಲುಕಿ ಯುವಕನ ಸಾವು ; ವಿಡಿಯೋ ವೈರಲ್.!

ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ (social media) ಸಾವಿರಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವು ನೋಡಲು ಭಯವೆನಿಸುತ್ತವೆ.

ಸದ್ಯ ಭಯ ಹುಟ್ಟಿಸುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನು ಓದಿ : Astrology : ಡಿಸೆಂಬರ್ 17ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಮುಂಬೈನ ವರ್ಲಿಯ ಆದರ್ಶ್ ನಗರದಲ್ಲಿ (Adarsh ​​Nagar, Worli, Mumbai) ಯುವಕನೊಬ್ಬ ಗ್ರೈಂಡರ್ ಗೆ ಸಿಲುಕಿ ಮೃತಪಟ್ಟ ಭಯಾನಕ ಘಟನೆ (terrible incident) ನಡೆದಿದೆ.

ಜಾರ್ಖಂಡ್ ಮೂಲದ (Jharkhand) ಸೂರಜ್ ನಾರಾಯಣ್ ಯಾದವ್ ದಾರುಣವಾಗಿ ಮೃತಪಟ್ಟಿದ್ದಾನೆ ಎಂದು ವರದಿಯಿಂದ ತಿಳಿದು ಬಂದಿದೆ.

ಕಳೆದ ಮೂರ್ನಾಲ್ಕು ತಿಂಗಳಿನಿಂದ ಸಚಿನ್ ಕೊಥೇಕರ್ ಒಡೆತನದ ರಸ್ತೆಬದಿಯ ಚೈನೀಸ್ ಫುಡ್ ಸ್ಟಾಲ್ ನಲ್ಲಿ (Chinese food stall) ಸೂರಜ್ ನಾರಾಯಣ್ ಯಾದವ್ ಕೆಲಸ ಮಾಡುತ್ತಿದ್ದನು.

ಇದನ್ನು ಓದಿ : ಲೋಕಾಯುಕ್ತ ಬಲೆಗೆ ಬಿದ್ದ PDO.!

ಆತ ಕೆಲಸ ಮಾಡುತ್ತಿದ್ದಾಗ ಆಯತಪ್ಪಿ ಗ್ರೈಂಡರ್ (grinder) ಒಳಗೆ ಬಿದ್ದಿದ್ದು, ಗ್ರೈಂಡರ್ ಅವರನ್ನು ಒಳಗೆ ಎಳೆದುಕೊಂಡಿದೆ. ಘಟನೆಯ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಘಟನೆಯ ಸಂಬಂಧ ಸ್ಥಳಕ್ಕೆ ದಾದರ್ ಪೊಲೀಸರು ಭೇಟಿ ನೀಡಿದ್ದು, ಫುಡ್ ಸ್ಟಾಲ್ ನ ಮಾಲೀಕ ಕೊಥೇಕರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

Astrology : ಡಿಸೆಂಬರ್ 17ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಜೋತಿಷ್ಯ : 2024 ಡಿಸೆಂಬರ್ 17ರ ಮಂಗಳವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.

*ಮೇಷ ರಾಶಿ*
ಕೈಗೊಂಡ ಕೆಲಸಗಳು ಕಷ್ಟದಿಂದ ಪೂರ್ಣಗೊಳ್ಳುತ್ತವೆ. ಸ್ಥಿರಾಸ್ತಿ ವ್ಯವಹಾರದಲ್ಲಿ ಹಿರಿಯರೊಂದಿಗೆ ಯೋಚಿಸಿ ಮಾತನಾಡಬೇಕು. ವೃತ್ತಿಪರ ವ್ಯವಹಾರಗಳು ಕೂಡಿ ಬರುತ್ತವೆ. ಉದ್ಯೋಗದಲ್ಲಿ ಅಧಿಕಾರಿಗಳಿಂದ ವಿರೋಧ ಹೆಚ್ಚಾಗುತ್ತದೆ. ಪ್ರಯಾಣವನ್ನು ಮುಂದೂಡಲಾಗುತ್ತದೆ ಮಕ್ಕಳ ಉದ್ಯೋಗ ಪ್ರಯತ್ನಗಳು ನಿರಾಶಾದಾಯಕವಾಗಿರುತ್ತವೆ.

*ವೃಷಭ ರಾಶಿ*
ಪ್ರಮುಖ ವ್ಯವಹಾರಗಳಲ್ಲಿ ಸಹೋದರರ ಸಹಾಯದಿಂದ ಮುನ್ನಡೆಯುತ್ತೀರಿ. ಬರಬೇಕಾದ ಹಣ ಸಕಾಲದಲ್ಲಿ ದೊರೆಯುತ್ತದೆ. ಸ್ಥಿರತೆಯ ವಿವಾದಗಳನ್ನು ಪರಿಹರಿಸಲಾಗುತ್ತದೆ. ಮನೆಯ ವಾತಾವರಣ ಸಂತೋಷದಿಂದ ಕೂಡಿರುತ್ತದೆ. ವೃತ್ತಿ ಮತ್ತು ಉದ್ಯೋಗದ ವಿಷಯದಲ್ಲಿ ಅನುಕೂಲಕರ ವಾತಾವರಣವಿರುತ್ತದೆ. ದೈವಿಕ ಕಾರ್ಯಕ್ರಮಗಳು ನೆರವೇರುಸುತ್ತೀರಿ.

ಇದನ್ನು ಓದಿ : Astrology : ಡಿಸೆಂಬರ್ 16ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

*ಮಿಥುನ ರಾಶಿ*
ನೇತ್ರ ಸಂಬಂಧಿ ಕಾಯಿಲೆಗಳು ನೋವುಂಟು ಮಾಡುತ್ತವೆ. ಕೈಗೊಂಡ ಕೆಲಸಗಳು ಮಂದಗತಿಯಲ್ಲಿ ಸಾಗುತ್ತವೆ. ಆರ್ಥಿಕ ವಾತಾವರಣ ಹೆಚ್ಚು ಕಷ್ಟಕರವಾಗಿರುತ್ತದೆ, ನಿರುದ್ಯೋಗಿಗಳು ತಮಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ವೃತ್ತಿಪರ ವ್ಯವಹಾರದಲ್ಲಿ ಅಲ್ಪ ಲಾಭ ದೊರೆಯುತ್ತದೆ.

*ಕಟಕ ರಾಶಿ*
ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಯೋಜಿತ ಕಾರ್ಯಗಳುವಿಳಂಬವಾದರೂ ನಿಧಾನವಾಗಿಪೂರ್ಣಗೊಳಿಸುತ್ತೀರಿ. ಹಠಾತ್ ಧನಲಾಭ ಉಂಟಾಗುತ್ತದೆ. ಹಣಕ್ಕೆ ಸಂಬಂಧಿಸಿದ ವಿಷಯಗಳು ತೃಪ್ತಿಕರವಾಗಿಸಾಗುತ್ತವೆ. ವ್ಯಾಪಾರದಲ್ಲಿ ಹೊಸ ಹೂಡಿಕೆಗಳು ಬರುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಸ್ಥಾನಗಳು ಹೆಚ್ಚಾಗುತ್ತವೆ.

*ಸಿಂಹ ರಾಶಿ*
ಕೈಗೆತ್ತಿಕೊಂಡ ಕೆಲಸಗಳು ಮಂದಗತಿಯಲ್ಲಿ ಸಾಗುತ್ತವೆ. ವ್ಯಾಪಾರದಲ್ಲಿ ಹೊಸ ಸಮಸ್ಯೆಗಳು ಕಿರಿಕಿರಿಯನ್ನುಂಟು ಮಾಡುತ್ತವೆ. ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತದೆ. ಸಾಲಗಾರರಿಂದ ಒತ್ತಡ ಹೆಚ್ಚಾಗುತ್ತದೆ. ಹೊಟ್ಟೆಯ ಆರೋಗ್ಯ ಸಮಸ್ಯೆಗಳು ನೋವುಂಟು ಮಾಡುತ್ತವೆ. ಇತರರೊಂದಿಗೆ ವಿವಾದಗಳಿಂದ ದೂರವುದು ಉತ್ತಮ.

*ಕನ್ಯಾ ರಾಶಿ*
ಹಣಕಾಸಿನ ವಿಷಯದಲ್ಲಿ ಅನುಕೂಲಕರವಾತಾವರಣ
ವಿರುತ್ತದೆ. ಮನೆಯಲ್ಲಿ ಶುಭ ಕಾರ್ಯಗಳ ಪ್ರಸ್ಥಾಪವಿರುತ್ತದೆ. ಸಮಾಜದ ಪ್ರಮುಖ ವ್ಯಕ್ತಿಗಳಿಂದ ವಿಶೇಷ ಬೆಂಬಲ ಸಿಗುತ್ತದೆ. ಮಕ್ಕಳ ವಿವಾಹ ಪ್ರಯತ್ನಗಳು ಅನುಕೂಲಕರವಾಗಿರುತ್ತದೆ. ಬಂಧು ಮಿತ್ರರ ನೆರವಿನಿಂದ ಕೆಲವು ಕಾರ್ಯಗಳು ಪೂರ್ಣಗೊಳ್ಳುತ್ತವೆ. ಉದ್ಯೋಗದಲ್ಲಿನ ಹೆಚ್ಚುವರಿ ಜವಾಬ್ದಾರಿಗಳಿಂದ ಮುಕ್ತಿ ಸಿಗುತ್ತದೆ.

ಇದನ್ನು ಓದಿ : ಲೋಕಾಯುಕ್ತ ಬಲೆಗೆ ಬಿದ್ದ PDO.!

*ತುಲಾ ರಾಶಿ*
ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದಿಲ್ಲ. ವೃತ್ತಿಪರ ವ್ಯವಹಾರದಲ್ಲಿ ನಿಮ್ಮ ಸ್ವಂತ ಆಲೋಚನೆಗಳನ್ನು ಹೊಂದಿರುವುದು ಒಳ್ಳೆಯದು. ಉದ್ಯೋಗದಲ್ಲಿನ ಸಮಸ್ಯೆಗಳು ಬಗೆಹರಿಯುತ್ತವೆ. ವ್ಯಾಪಾರ ವ್ಯವಹಾರಗಳು ಆಶಾದಾಯಕವಾಗಿರುತ್ತವೆ. ಮನೆಯ ಹೊರಗೆ ವಾತವರಣ ಅನುಕೂಲಕರ
ವಾಗಿರುತ್ತದೆ. ಬಂಧು ಮಿತ್ರರಲ್ಲಿ ಸಣ್ಣಪುಟ್ಟ ವಿವಾದಗಳು ಉಂಟಾಗುತ್ತವೆ.

*ವೃಶ್ಚಿಕ ರಾಶಿ*
ಕುಟುಂಬ ಸದಸ್ಯರೊಂದಿಗೆ ವಿವಾದ ಉಂಟಾಗುತ್ತದೆ. ಕೈಗೊಂಡ ಕೆಲಸಗಳು ಮಧ್ಯದಲ್ಲಿ ನಿಲ್ಲುತ್ತವೆ. ಇತರರ ವರ್ತನೆಯು ಮಾನಸಿಕ ಅಶಾಂತಿ ಉಂಟಾಗುತ್ತದೆ. ವೃತ್ತಿಪರ ವ್ಯವಹಾರಗಳು ನಿಧಾನವಾಗುತ್ತವೆ. ಉದ್ಯೋಗ ಪ್ರಯತ್ನಗಳು ನಿರುತ್ಸಾಹಗೊಳಿಸುತ್ತವೆ. ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

*ಧನಸ್ಸು ರಾಶಿ*
ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ಮಕ್ಕಳ ವ್ಯವಹಾರಗಳು ಸಮಸ್ಯಾತ್ಮಕವಾಗಿರುತ್ತದೆ. ವೃತ್ತಿಪರ ವ್ಯವಹಾರಗಳಲ್ಲಿ ಗೊಂದಲಮಯ ಸನ್ನಿವೇಶಗಳಿರುತ್ತವೆ. ವಿದ್ಯಾರ್ಥಿಗಳು ಹೆಚ್ಚು ಶ್ರಮವಹಿಸಬೇಕು. ಉದ್ಯೋಗಗಳಲ್ಲಿ ಹೆಚ್ಚುವರಿ ಜವಾಬ್ದಾರಿಗಳು ಬೇಸರ ಉಂಟುಮಾಡುತ್ತವೆ. ಬೆಲೆಬಾಳುವ ವಸ್ತುಗಳೊಂದಿಗೆ ಜಾಗರೂಕರಾಗಿರಿ.

*ಮಕರ ರಾಶಿ*
ಪ್ರಮುಖ ವಿಷಯಗಳಲ್ಲಿ ಸಂಗಾತಿಯ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ. ಸರ್ಕಾರಿ ಅಧಿಕಾರಿಗಳೊಂದಿಗೆ ಜಾಗರೂಕರಾಗಿರಿ. ಮಕ್ಕಳ ಶಿಕ್ಷಣದ ವಿಷಯಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತವೆ. ಪ್ರಯಾಣದ ಸಮಯದಲ್ಲಿ ಹೊಸ ಪರಿಚಯವಾಗುತ್ತದೆ. ಉದ್ಯೋಗದಲ್ಲಿ ಉನ್ನತ ಹುದ್ದೆಗಳನ್ನು ಪಡೆಯುತ್ತೀರಿ.

ಇದನ್ನು ಓದಿ : ರೇಣುಕಾಸ್ವಾಮಿ ಹತ್ಯೆ ಪ್ರಕರಣ ; ಪವಿತ್ರಾ ಗೌಡ ಸೇರಿ 6 ಜನರು ಜೈಲಿನಿಂದ ಬಿಡುಗಡೆ.!

*ಕುಂಭ ರಾಶಿ*
ಹಣಕಾಸಿನ ವಿಚಾರಗಳು ಅನುಕೂಲಕರವಾಗಿರುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಹೊಸ ಪ್ರೋತ್ಸಾಹವನ್ನು ಸ್ವೀಕರಿಸುತ್ತೀರಿ. ಬಂಧು ಮಿತ್ರರೊಂದಿಗೆ ಸೌಹಾರ್ದತೆ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಶತ್ರು ಸಮಸ್ಯೆಗಳನ್ನು ಬುದ್ಧಿವಂತಿಕೆಯಿಂದ ಸಮಸ್ಯೆಗಳನ್ನು ತೊಡೆದುಹಾಕುತ್ತೀರಿ. ಮನೆಯ ಹೊರಗೆ ಅನುಕೂಲಕರ ವಾತವರಣ ಇರುತ್ತದೆ. ಕುಟುಂಬ ಸದಸ್ಯರೊಂದಿಗೆ ದೇಗುಲಗಳಿಗೆ ಭೇಟಿ ನೀಡುತ್ತಿರಿ.

*ಮೀನ ರಾಶಿ*
ಉತ್ತಮ ಚಿಂತನೆ ಮತ್ತು ಜ್ಞಾನದಿಂದ ಮುನ್ನಡೆಯುತ್ತೀರಿ. ಹೊಸ ವಾಹನ ಖರೀದಿಸುತ್ತೀರಿ ಹಾಗೂ ದೂರದ ಸ್ಥಳದಲ್ಲಿರುವ ಬಂಧುಗಳಿಂದ ಶುಭ ಸುದ್ದಿ ಸಿಗುತ್ತದೆ. ಕೆಲಸದಲ್ಲಿ ಅಧಿಕಾರಿಗಳಿಂದ ಮೆಚ್ಚುಗೆಯನ್ನು ಪಡೆಯುತ್ತೀರಿ. ವ್ಯಾಪಾರಗಳು ಲಾಭದಾಯಕವಾಗಿರುತ್ತವೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಶುಭ ಸುದ್ದಿ ದೊರೆಯುತ್ತದೆ.

Disclaimer : ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ಹೀಗಾಗಿ JR ನ್ಯೂಸ್‌ಗೂ, ಈ ಲೇಖನಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರಿಯಲ್ಲ.

ಲೋಕಾಯುಕ್ತ ಬಲೆಗೆ ಬಿದ್ದ PDO.!

0

ಕಲಬುರಗಿ : ಬಾಕಿ ಪಾವತಿ ಹಾಗೂ ಮರು ನೇಮಕಕ್ಕೆ ರೂ. ಹದಿನೇಳು ಸಾವಿರ ಲಂಚ ಸ್ವೀಕರಿಸಿದ ಆರೋಪದ ಮೇಲೆ ಪಿಡಿಒ ಅವರನ್ನು ಲೋಕಾಯುಕ್ತ ಪೊಲೀಸರು (Lokayukta police) ಸೋಮವಾರ ಬಂಧಿಸಿದ್ದಾರೆ.

ಕಲಬುರಗಿ ತಾಲೂಕಿನ ಕವಲಗಾ (ಬಿ) ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರೀತಿರಾಜ್ (Pritiraj)ಅವರೇ ಲಂಚ ಪಡೆದ ಆರೋಪ ಹೊತ್ತಿದ್ದಾರೆ.

ಇದನ್ನು ಓದಿ : ರೇಣುಕಾಸ್ವಾಮಿ ಹತ್ಯೆ ಪ್ರಕರಣ ; ಪವಿತ್ರಾ ಗೌಡ ಸೇರಿ 6 ಜನರು ಜೈಲಿನಿಂದ ಬಿಡುಗಡೆ.!

ಪಂಪ್ ಆಪರೇಟರ್ ಗುರುಸಿದ್ದಯ್ಯ (Gurusiddayya) ನೀಡಿದ ದೂರಿನ ಆಧಾತದ ಮೇರೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ಗುರುಸಿದ್ದಯ್ಯನವರ 6 ತಿಂಗಳ ಸಂಬಳ
ಬಾಕಿ ಇತ್ತು. ಈ ಹಿನ್ನೆಲೆಯಲ್ಲಿ ಬಾಕಿ ಮಂಜೂರಾತಿ ಹಾಗೂ ಮರು ನೇಮಕಕ್ಕೆ ರೂ. ಹದಿನೇಳು ಸಾವಿರ (senenteen thousand) ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಇದನ್ನು ಓದಿ : Astrology : ಡಿಸೆಂಬರ್ 16ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಪ್ರೀತಿರಾಜ್ ಧರಿಯಾಪುರದ ಉಪ್ಪಿನಂಗಡಿಯಲ್ಲಿರುವ ಮನೆಯಲ್ಲಿ ಫೋನ್ ಪೇ ಮೂಲಕ ಹಣ ಪಡೆಯುತ್ತಿದ್ದಾಗ ಪೊಲೀಸರು ಬಂಧಿಸಿದ್ದು, ಆರೋಪಿ PDO ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಲೋಕಾಯುಕ್ತ ಪೊಲೀಸ್ ಇನ್ಸ್ ಪೆಕ್ಟರ್ ಅರುಣ್ ಕುಮಾರ್, ಸಿಬ್ಬಂದಿಗಳಾದ ಮಸೂದ್, ಮಲ್ಲಿನಾಥ್, ಬಸವರಾಜ್, ಸಂತೋಷ್, ಮಧುಮತಿ, ಪ್ರಮೋದ್ ಅವರನ್ನೊಳಗೊಂಡ ತಂಡ ದಾಳಿ ನಡೆಸಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣ ; ಪವಿತ್ರಾ ಗೌಡ ಸೇರಿ 6 ಜನರು ಜೈಲಿನಿಂದ ಬಿಡುಗಡೆ.!

0

ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ (Renukaswamy Murder Case) ಪ್ರಕರಣದಲ್ಲಿ ಜೈಲು ಪಾಲಾಗಿರುವ ಪವಿತ್ರಾ ಗೌಡ (Pavithra Gowda) ಇಂದು ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಲಿದ್ದಾರೆ.

6 ತಿಂಗಳ ಹಿಂದೆ ಜೈಲು ಪಾಲಾಗಿದ್ದ ದರ್ಶನ್ ಗೆಳತಿ ಪವಿತ್ರಾ ಗೌಡ ಹಾಗೂ ಇತರರಿಗೆ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ (Justice S. Vishwajit Shetty ) ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಶುಕ್ರವಾರ ಜಾಮೀನು (bail ) ಮಂಜೂರು ಮಾಡಿದ್ದು, ಇಂದು ಬೆಳಗ್ಗೆ ಎಲ್ಲಾ ಬಿಡುಗಡೆ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ.

ಇದನ್ನು ಓದಿ : Astrology : ಡಿಸೆಂಬರ್ 16ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಪರಪ್ಪನ ಅಗ್ರಹಾರದಿಂದ ಪವಿತ್ರಾ ಗೌಡ, ಅನುಕುಮಾರ್, ಪ್ರದುಶ್ ಹಾಗೂ ಶಿವಮೊಗ್ಗ ಜೈಲಿನಿಂದ ಜಗದೀಶ್, ಲಕ್ಷಣ್ ಮತ್ತು ನಾಗರಾಜ್ (Pavithra Gowda, Anukumar, and Pradush will be released from Parappana Agrahara, Jagadish, Lakshan, and Nagaraj) ಬಿಡುಗಡೆಯಾಗಲಿದ್ದಾರೆ.

ಇಂದು ಮಧ್ಯಾಹ್ನದ ವೇಳೆಗೆ ಎಲ್ಲಾ ಆರೋಪಿಗಳು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಎಲ್ಲಾ ಆರೋಪಿಗಳು ವೈಯಕ್ತಿಕ ಬಾಂಡ್ (bond) ನ್ನು ರೂ. ತಲಾ 1 ಲಕ್ಷ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಶ್ಯೂರಿಟಿ ಸೇರಿ ಹಲವು ಷರತ್ತುಗಳನ್ನು ವಿಧಿಸಿದೆ.

Astrology : ಡಿಸೆಂಬರ್ 16ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

 

ಜೋತಿಷ್ಯ : 2024 ಡಿಸೆಂಬರ್ 16ರ ಸೋಮವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.

*ಮೇಷ ರಾಶಿ*
ಕೈಗೆತ್ತಿಕೊಂಡ ಕೆಲಸಗಳು ನಿರಾಯಾಸವಾಗಿ ಪೂರ್ಣಗೊಳ್ಳುತ್ತವೆ. ಹಣಕಾಸಿನ ವ್ಯವಹಾರಗಳು ಆಶಾದಾಯಕವಾಗಿರುತ್ತವೆ. ದೀರ್ಘಕಾಲದ ಸಮಸ್ಯೆಗಳಿಂದ ಮುಕ್ತಿ ಪಡೆಯುತ ತೀರಿ. ಆಧ್ಯಾತ್ಮಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ವ್ಯಾಪಾರಗಳು ಲಾಭದಾಯಕವಾಗುತ್ತವೆ ಮತ್ತು ಉದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು ದೊರೆಯುತ್ತವೆ.

*ವೃಷಭ ರಾಶಿ*
ಮನೆಯ ಹೊರಗಿನ ಪರಿಸ್ಥಿತಿಗಳು ಸ್ವಲ್ಪ ಮಟ್ಟಿಗೆ ನಿರುತ್ಸಾಹಗೊಳಿಸುತ್ತವೆ. ಶ್ರಮದಿಂದಲೂ ಕೆಲಸಗಳು ಪೂರ್ಣಗೊಳ್ಳುವುದಿಲ್ಲ. ಸಂಬಂಧಿಕರಿಂದ ಬಂದಿರುವ ಮಾಹಿತಿ ಅಚ್ಚರಿ ಮೂಡಿಸುತ್ತದೆ. ಅನಾರೋಗ್ಯ ಸಮಸ್ಯೆಗಳು ಬಾಧಿಸುತ್ತವೆ. ವ್ಯರ್ಥ ಖರ್ಚುಗಳು ಹೆಚ್ಚಾಗುತ್ತವೆ. ವೃತ್ತಿಪರ ವ್ಯವಹಾರಗಳು ನಿಧಾನವಾಗುತ್ತವೆ. ಉದ್ಯೋಗದಲ್ಲಿ ಸಣ್ಣ ಕಿರಿಕಿರಿಗಳು ಉಂಟಾಗುತ್ತವೆ.

ಇದನ್ನು ಓದಿ : ಲವ್ವಿಡವ್ಹಿಗಾಗಿ ಮದುವೆಯಾಗಿ ನಾಲ್ಕೆ ದಿನಕ್ಕೆ ಪತಿಗೆ ಮುಹೂರ್ತ ಇಟ್ಟ ಪತ್ನಿ.!

*ಮಿಥುನ ರಾಶಿ*
ಕೈಗೊಂಡ ವ್ಯವಹಾರಗಳಲ್ಲಿ ಯಶಸ್ಸು ಸಾಧಿಸುತ್ತೀರಿ. ಮಕ್ಕಳ ವಿವಾಹ ವಿಚಾರದಲ್ಲಿ ಮಾತುಕತೆ ಯಶಸ್ವಿಯಾಗುತ್ತದೆ. ಹೊಸ ವಾಹನ ಖರೀದಿಸಲಾಗುತ್ತದೆ. ಪ್ರಮುಖ ವ್ಯಕ್ತಿಗಳೊಂದಿಗಿನ ಪರಿಚಯಗಳು ಹೆಚ್ಚಾಗುತ್ತವೆ. ಹಠಾತ್ ಆರ್ಥಿಕ ಲಾಭ ದೊರೆಯುತ್ತದೆ. ವ್ಯವಹಾರದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ.

*ಕಟಕ ರಾಶಿ*
ನಿರುದ್ಯೋಗಿಗಳಿಗೆ ಅಧಿಕಾರಿಗಳಿಂದ ಬೆಂಬಲ ದೊರೆಯುತ್ತದೆ. ಸಹೋದರರೊಂದಿಗಿನ ಸ್ಥಿರಾಸ್ತಿ ವಿವಾದಗಳು ದೂರವಾಗುತ್ತವೆ. ಮೌಲ್ಯದ ವಸ್ತುಗಳನ್ನು ಖರೀದಿಸಲಾಗುತ್ತದೆ. ಹೊಸ ಕಾರ್ಯಕ್ರಮಗಳನ್ನು ಆರಂಭಿಸಲಾಗುತ್ತದೆ. ಕೈಗೆತ್ತಿಕೊಂಡ ಕೆಲಸದಲ್ಲಿ ಕಾರ್ಯ ಸಿದ್ದತೆ ಉಂಟಾಗುತ್ತದೆ. ವೃತ್ತಿಪರ ವ್ಯವಹಾರಗಳಲ್ಲಿ ಹೊಸ ಪ್ರೋತ್ಸಾಹಗಳು ದೊರೆಯುತ್ತವೆ.

*ಸಿಂಹ ರಾಶಿ*
ಕೆಲವು ವ್ಯವಹಾರಗಳು ನಿಧಾನವಾಗುತ್ತವೆ. ಆರ್ಥಿಕ ಪರಿಸ್ಥಿತಿ ಏರುಪೇರಾಗುತ್ತದೆ. ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ. ವ್ಯಾಪಾರ-ವ್ಯವಹಾರಗಳು ಸುಗಮವಾಗಿ ಸಾಗುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ವಿನಾಕಾರಣ ವಿವಾದಗಳು ಉದ್ಭವಿಸುತ್ತವೆ.

*ಕನ್ಯಾ ರಾಶಿ*
ದೂರ ಪ್ರಯಾಣ ಮುಂದೂಡಲಾಗುತ್ತದೆ. ಪ್ರಮುಖ ವಿಷಯಗಳಲ್ಲಿ ಎರಡು ರೀತಿಯ ಆಲೋಚನೆಗಳು ತೊಂದರೆಗಳಿಗೆ ಕಾರಣವಾಗುತ್ತವೆ. ಸಂಬಂಧಿಕರು ಮತ್ತು ಸ್ನೇಹಿತರು ನಿಮ್ಮ ಮಾತಿಗೆ ಒಪ್ಪುವುದಿಲ್ಲ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಒಳ್ಳೆಯದಲ್ಲ. ವ್ಯವಹಾರಗಳಲ್ಲಿ ಹೊಸ ಹೂಡಿಕೆಗಳು ಸಮಯಕ್ಕೆ ಸರಿಯಾಗಿ ದೊರೆಯದೆ ತೊಂದರೆಗಳನ್ನು ಎದುರಿಸುತ್ತೀರಿ.

ಇದನ್ನು ಓದಿ : ಹತ್ತಿರ ಬರಲು ನಿರಾಕರಿಸಿದ್ದಕ್ಕೆ ಮಾವನಿಂದ ಸೊಸೆಯ ಹತ್ಯೆ.!

*ತುಲಾ ರಾಶಿ*
ಕೈಗೆತ್ತಿಕೊಂಡ ಕಾರ್ಯಗಳು ತ್ವರಿತವಾಗಿ ಪೂರ್ಣಗೊಳ್ಳುತ್ತವೆ. ಬಾಲ್ಯದ ಸ್ನೇಹಿತರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ಮೌಲ್ಯದ ಉಡುಪುಗಳನ್ನು ಖರೀದಿಸಲಾಗುತ್ತದೆ. ಸಮಾಜದ ಪ್ರಮುಖ ವ್ಯಕ್ತಿಗಳ ಸಂಪರ್ಕ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿಯಿಂದ ಮುಕ್ತಿ ಪಡೆಯುತ್ತೀರಿ. ವ್ಯಾಪಾರಗಳು ತೃಪ್ತಿಕರವಾಗಿ ನಡೆಯುತ್ತವೆ.

*ವೃಶ್ಚಿಕ ರಾಶಿ*
ಪ್ರಮುಖ ವಿಷಯಗಳಲ್ಲಿ ಕಠಿಣ ಪರಿಶ್ರಮಕ್ಕೆ ತಕ್ಕ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಗದಿತ ಸಮಯಕ್ಕೆ ಯೋಜಿತ ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ. ಬಂಧು ಮಿತ್ರರೊಂದಿಗೆ ಸಾಮರಸ್ಯದಿಂದ ವರ್ತಿಸುತ್ತೀರಿ. ಕುಟುಂಬ ಸದಸ್ಯರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡುತ್ತೀರಿ. ವ್ಯವಹಾರದಲ್ಲಿನ ಸಮಸ್ಯೆಗಳನ್ನು ನಿವಾರಿಸಿ ಮುನ್ನಡೆಯುತ್ತೀರಿ. ವೃತ್ತಿಪರ ಉದ್ಯೋಗಗಳಲ್ಲಿ ಬಡ್ತಿಗಳು ಹೆಚ್ಚಾಗುತ್ತವೆ.

*ಧನುಸ್ಸು ರಾಶಿ*
ಹಣಕಾಸಿನ ವ್ಯವಹಾರಗಳು ನಿರಾಶಾದಾಯಕವಾಗಿರುತ್ತದೆ. ವ್ಯರ್ಥ ಪ್ರಯಾಣಗಳನ್ನು ಮಾಡಬೇಕಾಗುತ್ತದೆ. ಹೊರಗಿನ ಜವಾಬ್ದಾರಿಗಳು ಹೆಚ್ಚು ಕಿರಿಕಿರಿಯನ್ನುಂಟುಮಾಡುತ್ತವೆ. ಅನಾರೋಗ್ಯದ ಸಣ್ಣ ಸೂಚನೆಗಳಿವೆ. ವೃತ್ತಿಪರ ವ್ಯವಹಾರಗಳು ನಿಧಾನವಾಗುತ್ತವೆ. ಉದ್ಯೋಗಿಗಳಿಗೆ ಸ್ಥಾನ ಚಲನೆಯ ಸೂಚನೆಗಳಿವೆ.

*ಮಕರ ರಾಶಿ*
ಪ್ರಮುಖ ಕಾರ್ಯಗಳನ್ನು ಮುಂದೂಡುವುದು ಉತ್ತಮ. ನಿಮ್ಮ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ, ಕೆಲಸದ ಒತ್ತಡ ಹೆಚ್ಚಾಗಿ, ವಿಶ್ರಾಂತಿ ಇರುವುದಿಲ್ಲ. ವ್ಯಾಪಾರಗಳು ಸ್ವಲ್ಪ ನಿಧಾನವಾಗಿರುತ್ತವೆ.

ಇದನ್ನು ಓದಿ : Astrology : ಡಿಸೆಂಬರ್ 15ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

*ಕುಂಭ ರಾಶಿ*
ಯೋಜಿತ ಕೆಲಸಗಳಲ್ಲಿ ಕಾರ್ಯ ಸಿದ್ದತೆ ಇರುತ್ತದೆ. ಮನೆಯ ಹೊರಗೆ ನಿಮ್ಮ ಮಾತಿಗೆ ಮೌಲ್ಯವು ಹೆಚ್ಚಾಗುತ್ತದೆ. ಹಣಕಾಸಿನ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಪ್ರಯಾಣದ ಸಮಯದಲ್ಲಿ ಹೊಸ ಪರಿಚಯವಾಗುತ್ತದೆ. ವೃತ್ತಿ ವ್ಯವಹಾರದಲ್ಲಿ ನಿರೀಕ್ಷಿತ ಫಲಿತಾಂಶ ದೊರೆಯುತ್ತದೆ.

*ಮೀನ ರಾಶಿ*
ಕೈಗೆತ್ತಿಕೊಂಡ ಕೆಲಸಗಳಲ್ಲಿ ಖರ್ಚು-ವೆಚ್ಚಗಳು ಹೆಚ್ಚಾಗುತ್ತವೆ. ಹಣಕಾಸಿನ ಪರಿಸ್ಥಿತಿಯು ಅನುಕೂಲಕರವಾಗಿಲ್ಲದೆ, ಹೊಸ ಸಾಲದ ಪ್ರಯತ್ನಗಳನ್ನು ಮಾಡಲಾಗುತ್ತದೆ. ದೂರದ ಪ್ರಯಾಣದಿಂದ ದೈಹಿಕ ಶ್ರಮ ಹೆಚ್ಚಾಗುತ್ತದೆ. ವ್ಯರ್ಥ ಖರ್ಚುಗಳ ಬಗ್ಗೆ ಮರುಪರಿಶೀಲನೆ ಮಾಡಬೇಕು. ಕೆಲಸದಲ್ಲಿ ಸಹೋದ್ಯೋಗಿಗಳ ವರ್ತನೆಯು ಸ್ವಲ್ಪ ಕಿರಿಕಿರಿ ಉಂಟುಮಾಡುತ್ತದೆ.

Disclaimer : ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ಹೀಗಾಗಿ JR ನ್ಯೂಸ್‌ಗೂ, ಈ ಲೇಖನಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರಿಯಲ್ಲ.

ಲವ್ವಿಡವ್ಹಿಗಾಗಿ ಮದುವೆಯಾಗಿ ನಾಲ್ಕೆ ದಿನಕ್ಕೆ ಪತಿಗೆ ಮುಹೂರ್ತ ಇಟ್ಟ ಪತ್ನಿ.!

ಬೆಂಗಳೂರು : ಇನ್ನೇನು‌ ಅಂದುಕೊಂಡಂತೆ ಮದುವೆಯಾಯ್ತು ಅಂತ ಆ ವರ ಖುಷಿಯಲ್ಲಿದ್ದ ಆದರೆ. ಆ ಸಂತೋಷ ಕೇವಲ ನಾಲ್ಕೆ ದಿನಕ್ಕೆ ಕೊನೆಗೊಂಡಿದೆ.

ಮದುವೆಯಾದ ನಾಲ್ಕೇ ದಿನಗಳಲ್ಲಿ ವರನನ್ನು ಮದುವೆಯಾದ ನವವಿವಾಹಿತೆಯೇ ಕೊಲೆಗೈದ ಘಟನೆ ಗುಜರಾತಿನ ಗಾಂಧಿನಗರದಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : ಸ್ವಾಮೀಜಿ ಮುಗಿಸಲು ಪೊಲೀಸರು ಪ್ಲಾನ್ ಮಾಡಿದ್ದರು ; ರೇಣುಕಾಚಾರ್ಯ ಗಂಭೀರ ಆರೋಪ.

ಕೊಲೆಯಾದ ನವವಿವಾಹಿತ ಅಹಮದಾಬಾದ್​ ನಿವಾಸಿ ಬಾವಿಕ್​ ಎಂದು ತಿಳಿದು ಬಂದಿದ್ದು, ಈತ​ ಗಾಂಧಿನಗರದ ಪಾಯಲ್​ ಎಂಬಾಕೆಯನ್ನು ನಾಲ್ಕು ದಿನಗಳ ಹಿಂದೆ ಮದುವೆಯಾಗಿದ್ದನು. ಆಬಳಿಕ ವರನನ್ನು ಕಿಡ್ನ್ಯಾಪ್ ಮಾಡಿ ಹತ್ಯೆ ಮಾಡಲಾಗಿದೆ. ಆತನನ್ನು ಮೂವರು ವ್ಯಕ್ತಿಗಳು ಅಪಹರಿಸಿ ಕೊಂದಿದ್ದಾರೆ ಎಂದು ವರದಿ ತಿಳಿಸಿದೆ.

ಮದುವೆಗೆ ಮುಂಚೆ ಪಾಯಲ್​ ಸೋದರ ಸಂಬಂಧಿಯಾದ ಕಲ್ಪೇಶ್ ಎಂಬಾತನನ್ನು ಲವ್ ಮಾಡುತ್ತಿದ್ದಳು. ಆದರೆ ಈ ವಿಚಾರ ಗೊತ್ತಿಲ್ಲದೇ ಆಕೆಯ ಮನೆಯವರನ್ನು ಭುವಿಕ್​ಗೆ ಪಾಯಲ್​​ಳನ್ನು ಕೊಟ್ಟು ಮದುವೆ ಮಾಡಿದ್ದರು.

ಇದನ್ನು ಓದಿ : Astrology : ಡಿಸೆಂಬರ್ 15ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಮದುವೆಯಾದ ನಾಲ್ಕು ದಿನಗಳ ಬಳಿಕ ಭುವಿಕ್ ತನ್ನ ಹೆಂಡತಿಯನ್ನು ಕರೆದುಕೊಂಡು ಬರಲು ಮಾವನ ಮನೆಗೆ ಹೋಗಿದ್ದರು. ಆದರೆ ಎಷ್ಟೊತ್ತಾದರೂ ಮನೆಗೆ ತೆರಳದ ಕಾರಣ ಆತಂಕಗೊಂಡ ಮಾವ ಬೀಗರ ಮನೆಗೆ ಕಾಲ್ ಮಾಡಿದ್ದಾರೆ. ಆತ ಹೊರಟು ಬಹಳ ಹೊತ್ತಾಯ್ತು ಎಂದು ಭುವಿಕ್ ಮನೆಯವರು ತಿಳಿಸಿದ್ದಾರೆ.

ಏನಾಗಿರಬಹುದೆಂದು ಪಾಯಲ್ ಅವರ ತಂದೆ ಕುಟುಂಬದೊಂದಿಗೆ ಅಳಿಯನನ್ನು ಹುಡುಕಲು ಪ್ರಾರಂಭಿಸಿದರು. ಅವರ ಹುಡುಕಾಟ ನಡೆದಿದ ವೇಳೆ ರಸ್ತೆ ಮೇಲೆ ಭಾವಿಕ್ ಹೆಣವಾಗಿ ಬಿದ್ದಿರುವುದು ಕಂಡು ಬಂದಿದೆ.

ಇದನ್ನು ಓದಿ : ಹತ್ತಿರ ಬರಲು ನಿರಾಕರಿಸಿದ್ದಕ್ಕೆ ಮಾವನಿಂದ ಸೊಸೆಯ ಹತ್ಯೆ.!

ನಾಲ್ಕು ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ ಯುವಕ ಅದ್ಹೇಗೆ ಸಾವಿಗೀಡಾದ ಅಂತ ಪೊಲೀಸರಿಗೆ ಅನುಮಾನ ಬಂದಿತ್ತು. ನಂತರ ಪೊಲೀಸರು ಪಾಯಲ್ ನನ್ನು ವಿಚಾರಿಸಿದಾಗ ಅಪಹರಣ ಮತ್ತು ಹತ್ಯೆಗೆ ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ. ತಾನು ಕಲ್ಪೇಶ್‌ನನ್ನು ಲವ್ ಮಾಡುತ್ತಿದ್ದೆ. ಆದರೆ ನನ್ನ ಪೋಷಕರು ಭಾವಿಕ್‌ಗೆ ಆಕೆಯನ್ನು ಕೊಟ್ಟು ಮದುವೆ ಮಾಡಿಕೊಟ್ಟರು. ಇದರಿಂದ ಪತಿಯನ್ನು ಕೊಲೆ ಮಾಡಲು ಯೋಜಿಸಿದ್ದೆ ಎಂದು ಪಾಯಲ್ ಪೊಲೀಸರಿಗೆ ತಿಳಿಸಿದ್ದಾಳೆ.

ವಿಚಾರಣೆ ವೇಳೆ, ಕಲ್ಪೇಶ್, ಇಬ್ಬರು ಸಹಚರರೊಂದಿಗೆ ಭಾವಿಕ್‌ನನ್ನು ಅಪಹರಿಸಿ ತನ್ನ ಎಸ್‌ಯುವಿಯೊಳಗೆ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ ಅವರು ಹತ್ತಿರದ ನರ್ಮದಾ ಕಾಲುವೆಯಲ್ಲಿ ಶವವನ್ನು ಎಸೆದು ಹೋಗಿದ್ದಾಗಿ ಬಾಯ್ಬಿಟ್ಟಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

error: Content is protected !!